Kolkata rape murder| ಡಾ.ಘೋಷ್‌ಗೆ ಸೆ.23ರವರೆಗೆ ನ್ಯಾಯಾಂಗಬಂಧನ
x

Kolkata rape murder| ಡಾ.ಘೋಷ್‌ಗೆ ಸೆ.23ರವರೆಗೆ ನ್ಯಾಯಾಂಗಬಂಧನ


ಕೋಲ್ಕತ್ತಾ: ಆರ್‌.ಜಿ. ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಮಾಜಿ ಪ್ರಾಂಶುಪಾಲ ಸಂದೀಪ್ ಘೋಷ್ ಅವರನ್ನು ಹಣಕಾಸು ಅವ್ಯವಹಾರ ಪ್ರಕರಣದಲ್ಲಿ ವಿಶೇಷ ಸಿಬಿಐ ನ್ಯಾಯಾಲಯ ಸೆಪ್ಟೆಂಬರ್ 23 ರವರೆಗೆ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದೆ.

ಘೋಷ್‌ ಅವರ ಭದ್ರತಾ ಸಿಬ್ಬಂದಿ ಅಫ್ಸರ್ ಅಲಿ, ಗುತ್ತಿಗೆದಾರರಾದ ಬಿಪ್ಲಬ್ ಸಿನ್ಹಾ ಮತ್ತು ಸುಮನ್ ಹಜ್ರಾ ಅವರನ್ನೂ ಸೆಪ್ಟೆಂಬರ್ 23 ರವರೆಗೆ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ. ಅಗತ್ಯವಿದ್ದರೆ ಮತ್ತೆ ಕಸ್ಟಡಿ ಕೋರುವುದಾಗಿ ನ್ಯಾಯಾಲಯಕ್ಕೆ ಸಿಬಿಐ ತಿಳಿಸಿದೆ.

ಘೋಷ್ ಅವರನ್ನು ಸೆಪ್ಟೆಂಬರ್ 2 ರಂದು ಹಣಕಾಸು ಅಕ್ರಮಗಳ ಆರೋಪದ ಮೇಲೆ ಸಿಬಿಐ ಬಂಧಿಸಿತ್ತು. ನ್ಯಾಯಾಲಯವು ಸೆಪ್ಟೆಂಬರ್ 3 ರಂದು ಅವರನ್ನು ಎಂಟು ದಿನಗಳ ಸಿಬಿಐ ಕಸ್ಟಡಿಗೆ ಒಪ್ಪಿಸಿತ್ತು.

Read More
Next Story