RG Kar case| 50 ಹಿರಿಯ ವೈದ್ಯರು ರಾಜೀನಾಮೆ
x
ಮಂಗಳವಾರ ಸಿಲಿಗುರಿ ಬಳಿ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಅತ್ಯಾಚಾರ ಮತ್ತು ಕೊಲೆ ಘಟನೆಯನ್ನು ವಿರೋಧಿಸಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ವೈದ್ಯರು.

RG Kar case| 50 ಹಿರಿಯ ವೈದ್ಯರು ರಾಜೀನಾಮೆ

ಮಂಗಳವಾರ ನಡೆದ ಹೆಚ್‌ ಒಡಿ ಸಭೆಯಲ್ಲಿ ಈ ಬಗ್ಗೆ ನಿರ್ಧರಿಸಲಾಗಿದ್ದು, ನಮ್ಮ ಆಸ್ಪತ್ರೆಯ ಎಲ್ಲ 50 ಹಿರಿಯ ವೈದ್ಯರು ರಾಜೀನಾಮೆ ಪತ್ರಕ್ಕೆ ಸಹಿ ಹಾಕಿದ್ದಾರೆ. ಒಂದು ಕಾರಣಕ್ಕಾಗಿ ಹೋರಾಡುತ್ತಿರುವ ಯುವ ವೈದ್ಯರಿಗೆ ನಮ್ಮ ಒಗ್ಗಟ್ಟನ್ನು ವ್ಯಕ್ತಪಡಿಸಲು ಇದು ಸ್ಪೂರ್ತಿಯಾಗಿದೆ ಎಂದು ಹಿರಿಯ ವ್ಯದ್ಯರೊಬ್ಬರು ತಿಳಿಸಿದ್ದಾರೆ.


Click the Play button to hear this message in audio format

ಕೋಲ್ಕತ್ತಾದ ಸರ್ಕಾರಿ ಸ್ವಾಮ್ಯದ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ತರಬೇತಿ ನಿರತ ವೈದ್ಯೆಯ ಮೇಲೆ ಅತ್ಯಾಚಾರ ಮತ್ತು ಹತ್ಯೆಯ ಪ್ರಕರಣಕ್ಕೆ ಸಂಬಂಧಪಟ್ಟಂತೆ, ಮೃತ ಮಹಿಳಾ ವೈದ್ಯರಿಗೆ ನ್ಯಾಯಕ್ಕಾಗಿ ಆಗ್ರಹಿಸಿ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಸುಮಾರು 50 ಹಿರಿಯ ವೈದ್ಯರು ಮಂಗಳವಾರ ರಾಜೀನಾಮೆ ಸಲ್ಲಿಸಿದ್ದಾರೆ.

ಮಂಗಳವಾರ ಬೆಳಿಗ್ಗೆ ನಡೆದ ಸರ್ಕಾರಿ ಆಸ್ಪತ್ರೆಯ ವಿವಿಧ ವಿಭಾಗಗಳ ಮುಖ್ಯಸ್ಥರ (ಎಚ್‌ಒಡಿ) ಸಭೆಯಲ್ಲಿ ಸಾಮೂಹಿಕ ರಾಜೀನಾಮೆ ನೀಡುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎನ್ನಲಾಗಿದೆ.

ಮಂಗಳವಾರ ನಡೆದ ಎಚ್‌ಒಡಿ ಸಭೆಯಲ್ಲಿ ಈ ಬಗ್ಗೆ ನಿರ್ಧರಿಸಲಾಗಿದ್ದು, ನಮ್ಮ ಆಸ್ಪತ್ರೆಯ ಎಲ್ಲ 50 ಹಿರಿಯ ವೈದ್ಯರು ರಾಜೀನಾಮೆ ಪತ್ರಕ್ಕೆ ಸಹಿ ಹಾಕಿದ್ದಾರೆ. ಒಂದು ಕಾರಣಕ್ಕಾಗಿ ಹೋರಾಡುತ್ತಿರುವ ಯುವ ವೈದ್ಯರಿಗೆ ನಮ್ಮ ಒಗ್ಗಟ್ಟನ್ನು ವ್ಯಕ್ತಪಡಿಸಲು ಇದು ಸ್ಪೂರ್ತಿಯಾಗಿದೆ ಎಂದು ಹಿರಿಯ ವ್ಯದ್ಯರೊಬ್ಬರು ತಿಳಿಸಿದ್ದಾರೆ.

ಆರ್‌ಜಿ ಕರ್ ಆಸ್ಪತ್ರೆಯ ಮಹಿಳಾ ವೈದ್ಯೆಯ ಅತ್ಯಾಚಾರ ಮತ್ತು ಹತ್ಯೆಗೆ ನ್ಯಾಯಕ್ಕಾಗಿ ಮತ್ತು "ಭ್ರಷ್ಟಾಚಾರ ಪೀಡಿತ" ಆರೋಗ್ಯ ವ್ಯವಸ್ಥೆಯನ್ನು ಕೊನೆಗೊಳಿಸಬೇಕೆಂದು ಒತ್ತಾಯಿಸುತ್ತಿರುವ ಕಿರಿಯ ವೈದ್ಯರೊಂದಿಗೆ ಪಶ್ಚಿಮ ಬಂಗಾಳದ ವೈದ್ಯರ ಜಂಟಿ ವೇದಿಕೆಯು ಒಗ್ಗಟ್ಟಿನ ಪ್ರತಿಜ್ಞೆ ಮಾಡಿದೆ.

ಕಳೆದ ನಾಲ್ಕು ದಿನಗಳಿಂದ ಕಿರಿಯ ವೈದ್ಯರು ತಮ್ಮ ಬೇಡಿಕೆಗಳಿಗೆ ಧ್ವನಿಗೂಡಿಸಿ ಆಮರಣ ಉಪವಾಸ ನಡೆಸುತ್ತಿದ್ದರೂ, ಸಮಸ್ಯೆಗಳ ಪರಿಹಾರಕ್ಕೆ ಸೂಕ್ತ ಅಧಿಕಾರಿಗಳಿಂದ ಯಾವುದೇ ಸ್ಪಂದನೆ ದೊರೆತಿಲ್ಲ. ಆಮರಣಾಂತ ಉಪವಾಸದಲ್ಲಿರುವವರ ಆರೋಗ್ಯ ಸ್ಥಿತಿಯ ಬಗ್ಗೆ ವೈದ್ಯರ ವೇದಿಕೆಯು ಕಳವಳ ಕೂಡ ವ್ಯಕ್ತಪಡಿಸಿದೆ. ಅವರು "ಕ್ಯಾಂಪಸ್ ಪ್ರಜಾಪ್ರಭುತ್ವ ಮತ್ತು ರೋಗಿ ಸ್ನೇಹಿ ವ್ಯವಸ್ಥೆ" ಗಾಗಿ ಹೋರಾಡುತ್ತಿದ್ದಾರೆ. ಈ ಪರಿಸ್ಥಿತಿಯಲ್ಲಿ, ನಾವು ಒಗ್ಗಟ್ಟಾಗಿ ನಿಲ್ಲುತ್ತೇವೆ ಎಂದು ವೈದ್ಯರ ವೇದಿಕೆ ಹೇಳಿದೆ.

Read More
Next Story