Rekha Gupta: ದೆಹಲಿಗೆ ಮತ್ತೆ ಮಹಿಳಾ ಸಿಎಂ; ಮೊದಲ ಬಾರಿಯ ಶಾಸಕಿ ರೇಖಾ ಗುಪ್ತಾ ಆಯ್ಕೆ
x

Rekha Gupta: ದೆಹಲಿಗೆ ಮತ್ತೆ ಮಹಿಳಾ ಸಿಎಂ; ಮೊದಲ ಬಾರಿಯ ಶಾಸಕಿ ರೇಖಾ ಗುಪ್ತಾ ಆಯ್ಕೆ

Rekha Gupta : ಫೆಬ್ರವರಿ 8ರಂದು ದೆಹಲಿ ಚುನಾವಣಾ ಫಲಿತಾಂಶ ಹೊರ ಬಂದಿತ್ತು. ಆಮ್‌ ಆದ್ಮಿ ಪಕ್ಷವನ್ನು ಹಿಮ್ಮೆಟ್ಟಿಸಿದ ಬಿಜೆಪಿ 70 ಸದಸ್ಯ ಬಲದ ವಿಧಾನಸಭೆಯಲ್ಲಿ 48 ಸ್ಥಾನಗಳನ್ನು ಗೆದ್ದುಕೊಂಡು ಭರ್ಜರಿ ಜಯ ದಾಖಲಿಸಿತ್ತು. ಎಎಪಿ 22 ಸ್ಥಾನ ಉಳಿಸಿಕೊಂಡಿತ್ತು.


ವಿಧಾನಸಭೆ ಚುನಾವಣೆ ಫಲಿತಾಂಶ ಹೊರಬಿದ್ದ 11 ದಿನಗಳ ಬಳಿಕ ದೆಹಲಿಗೆ ನೂತನ ಸಿಎಂ ಆಯ್ಕೆ ಮಾಡಲಾಗಿದೆ. ಮೊದಲ ಬಾರಿಗೆ ಚುನಾವಣೆ ಗೆದ್ದಿರುವ ರೇಖಾ ಗುಪ್ತ ಅವರನ್ನು ಶಾಸಕಾಂಗ ಪಕ್ಷದ ನಾಯಕರು ಎಂದು ಬಿಜೆಪಿ ಘೋಷಣೆ ಮಾಡಿದೆ. ಹೀಗಾಗಿ ಈ ಬಾರಿಯೂ ದೆಹಲಿಗೆ ಮಹಿಳೆಯೇ ಸಿಎಂ ಆಗಿ ಆಯ್ಕೆಯಾಗಿದ್ದಾರೆ.

ಫೆಬ್ರವರಿ 8ರಂದು ದೆಹಲಿ ಚುನಾವಣಾ ಫಲಿತಾಂಶ ಹೊರ ಬಂದಿತ್ತು. ಆಮ್‌ ಆದ್ಮಿ ಪಕ್ಷವನ್ನು ಹಿಮ್ಮೆಟ್ಟಿಸಿದ ಬಿಜೆಪಿ 70 ಸದಸ್ಯ ಬಲದ ವಿಧಾನಸಭೆಯಲ್ಲಿ 48 ಸ್ಥಾನಗಳನ್ನು ಗೆದ್ದುಕೊಂಡು ಭರ್ಜರಿ ಜಯ ದಾಖಲಿಸಿತ್ತು. ಎಎಪಿ 22 ಸ್ಥಾನ ಉಳಿಸಿಕೊಂಡಿತ್ತು.

ಸಿಎಂ ಆಯ್ಕೆ ಬಿಜೆಪಿ ಪಾಲಿಗೆ ಕಗ್ಗಂಟಾಗಿ ಪರಿಣಮಿಸಿತ್ತು. ಯಾಕೆಂದರೆ ಮುಖ್ಯಮಂತ್ರಿ ಅಭ್ಯರ್ಥಿ ಹೆಸರನ್ನು ಘೋಷಿಸದೇ ಪಕ್ಷ ಚುನಾವಣೆ ಎದುರಿಸಿತ್ತು. 26 ವರ್ಷಗಳ ಬಳಿಕ ಅಧಿಕಾರಕ್ಕೇರಿದ್ದರೂ ಸರ್ಕಾರ ಮುನ್ನಡೆಸಲು ಯಾರು ಸೂಕ್ತ ಎಂದು ಚಿಂತನೆ ಮಾಡುವಂತಾಗಿತ್ತು. ನಡುವೆ ಪ್ರಧಾನಿ ನರೇಂದ್ರ ಮೋದಿ ವಿದೇಶ ಪ್ರವಾಸಕ್ಕೆ ತೆರಳಿದ್ದರಿಂದ ಆಯ್ಕೆ ತಡವಾಯಿತು.

ಬುಧವಾರ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಕರೆಯಲಾಗಿತ್ತು. ಅಲ್ಲೇ ಸಿಎಂ ಹೆಸರನ್ನು ಅಂತಿಮಗೊಳಿಸಲಾಗಿದೆ.

ಫೆಬ್ರವರಿ 20ರಂದು ನೂತನ ಸಿಎಂ ಪ್ರಮಾಣ ವಚನ

ದಿಲ್ಲಿಯ ಐತಿಹಾಸಿಕ ರಾಮಲೀಲಾ ಮೈದಾನದಲ್ಲಿ ಫೆಬ್ರವರಿ 20ರಂದು ನೂತನ ಮುಖ್ಯಮಂತ್ರಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಫೆಬ್ರವರಿ 20ರಂದು ಸಂಜೆ 4.30ರ ಸುಮಾರಿಗೆ ನಡೆಯಲಿರುವ ಕಾರ್ಯಕ್ರಮದಲ್ಲಿ ಬಿಜೆಪಿ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳು ಸೇರಿದಂತೆ ಹಿರಿಯ ಬಿಜೆಪಿ ನಾಯಕರು ಭಾಗವಹಿಸುವ ನಿರೀಕ್ಷೆಯಿದೆ.

Read More
Next Story