RBI : ಲಷ್ಕರೆ ತೈಬಾ ಸಿಇಒ ಕಡೆಯಿಂದ ಆರ್‌ಬಿಐಗೆ ಬಾಂಬ್‌ ಬೆದರಿಕೆ
x
ಆರ್‌ಬಿಐ ಪ್ರಾತಿನಿಧಿಕ ಸಂಸ್ಥೆ

RBI : ಲಷ್ಕರೆ ತೈಬಾ ಸಿಇಒ ಕಡೆಯಿಂದ ಆರ್‌ಬಿಐಗೆ ಬಾಂಬ್‌ ಬೆದರಿಕೆ

ಕರೆ ಮಾಡಿದವನು ತನ್ನನ್ನು ಭಯೋತ್ಪಾದಕ ಗುಂಪು ಎಲ್ಇಟಿಯ "ಸಿಇಒ" ಎಂದು ಗುರುತು ಹೇಳಿದ್ದಾನೆ. ಕೇಂದ್ರ ಬ್ಯಾಂಕ್‌ಗೆ ಬಾಂಬ್‌ ಇಟ್ಟು ಸ್ಫೋಟಿಸುವುದಾಗಿ ಬೆದರಿಕೆ ಹಾಕುವ ರೀತಿಯಲ್ಲಿ ಹಾಡೊಂದನ್ನು ಹಾಡಿದ್ದಾನೆ ಎಂಬುದಾಗಿ ವರದಿಯಾಗಿದೆ.


ವಿಮಾನಯಾನ ಸಂಸ್ಥೆಗಳಿಗೆ ಹುಸಿ ಬಾಂಬ್ ಬೆದರಿಕೆಗಳು ಬಂದು ವ್ಯವಸ್ಥೆಗೆ ಧಕ್ಕೆಯಾಗುತ್ತಿರುವ ನಡುವೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಕೂಡ ಬಾಂಬ್‌ ಸಂದೇಶವೊಂದನ್ನು ಸ್ವೀಕರಿಸಿದೆ. ಬ್ಯಾಂಕ್‌ ಕಸ್ಟಮರ್‌ ಕೇರ್‌ ಸಂಖ್ಯೆಗೆ ಕರೆ ಮಾಡಿ ಸ್ಫೋಟ ಮಾಡುವ ಬೆದರಿಕೆ ಹಾಕಲಾಗಿದೆ ಎಂದು ವರದಿಯಾಗಿದೆ. ಕರೆ ಮಾಡಿದ ದುಷ್ಕರ್ಮಿ ತನ್ನನ್ನು "ಲಷ್ಕರ್-ಎ-ತೈಬಾದ ಸಿಇಒ" ಎಂದು ಹೇಳಿಕೊಂಡಿದ್ದಾನೆ.


reserve bank of india,bomb threat to reserve bank of india,bomb threat,bomb threat to rbi bank,bomb threats to reserve bank of india,rbi receives bomb threat,banks bomb threat mail,rbi bomb threat,bengaluru bomb threat,bomb threats,reserve bank of india news,reserve bank bomb threat breaking live,reserve bank,bomb threat to rbi,bomb threat on email,impact of bank threats on indian economy,bomb threat on email to rbi,times of india

ಶನಿವಾರ (ನವೆಂಬರ್ 16) ಬೆಳಗ್ಗೆ 11 ಗಂಟೆ ಸುಮಾರಿಗೆ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಲಾಗಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ. ಕರೆ ಮಾಡಿದವನು ತನ್ನನ್ನು ಭಯೋತ್ಪಾದಕ ಗುಂಪು ಎಲ್ಇಟಿಯ "ಸಿಇಒ" ಎಂದು ಗುರುತು ಹೇಳಿದ್ದಾನೆ. ಕೇಂದ್ರ ಬ್ಯಾಂಕ್‌ಗೆ ಬಾಂಬ್‌ ಇಟ್ಟು ಸ್ಫೋಟಿಸುವುದಾಗಿ ಬೆದರಿಕೆ ಹಾಕುವ ರೀತಿಯಲ್ಲಿ ಹಾಡೊಂದನ್ನು ಹಾಡಿದ್ದಾನೆ ಎಂಬುದಾಗಿ ವರದಿಯಾಗಿದೆ.

ಮುಂಬೈ ಪೊಲೀಸರು ಪ್ರಕರಣ ದಾಖಲಿಸಿದ್ದು, ಕರೆ ಮಾಡಿದವರನ್ನು ಪತ್ತೆಹಚ್ಚಲು ಶೋಧ ಆರಂಭಿಸಿದ್ದಾರೆ. ಅಂದ ಹಾಗೆ 2008 ರ ಮುಂಬೈ ದಾಳಿಯ ಹಿಂದೆ ಎಲ್ಇಟಿ ಭಯೋತ್ಪಾದಕರ ಗುಂಪು ಇತ್ತು. ಪಾಕ್‌ ಮೂಲದ ಈ ಉಗ್ರರ ಗುಂಪು ದುಷ್ಕೃತ್ಯ ನಡೆಸುವಲ್ಲಿ ಕುಖ್ಯಾತಿ ಪಡೆದಿದೆ.

ಸರಣಿ ಬಾಂಬ್ ಹುಸಿಗಳು

ಹುಸಿ ಬಾಂಬ್‌ ಕರೆಗಳು ಈಗ ಮಾಮೂಲಿಯಾಗಿದೆ. ಕಳೆದ ಎರಡು ತಿಂಗಳಲ್ಲಿ ನೂರಾರು ವಿಮಾನಗಳ ಮೇಲೆ ಪರಿಣಾಮ ಬೀರಿದೆ. ವಿಮಾನಯಾನ ಸಂಸ್ಥೆಗಳು ಡಜನ್ ಗಟ್ಟಲೆ ಹುಸಿ ಬಾಂಬ್ ಬೆದರಿಕೆಗಳನ್ನು ಸ್ವೀಕರಿಸುತ್ತಿದ್ದು ನಿರ್ವಹಣೆಯೇ ಸವಾಲಾಗಿದೆ.

ಈ ತಿಂಗಳ ಆರಂಭದಲ್ಲಿ, ಸರ್ಕಾರಿ ಕಚೇರಿಗಳು, ವಿಮಾನಗಳು ಮತ್ತು ರೈಲ್ವೆ ನಿಲ್ದಾಣಗಳನ್ನು ಗುರಿಯಾಗಿಸಿಕೊಂಡು 354 ಹುಸಿ ಇಮೇಲ್‌ಗಳು ಕಳುಹಿಸಿದ ಆರೋಪದ ಮೇಲೆ 35 ವರ್ಷದ ಬರಹಗಾರ ಜಗದೀಶ್ ಉಕೆ ಎಂಬಾತನನ್ನು ಮಹಾರಾಷ್ಟ್ರದಲ್ಲಿ ಬಂಧಿಸಲಾಗಿತ್ತು. ಕಳೆದ ತಿಂಗಳು, ತನ್ನ ಸ್ನೇಹಿತನನ್ನು ಸಿಲುಕಿಸಲು ವಿಮಾನಯಾನ ಸಂಸ್ಥೆಗಳಿಗೆ ಹುಸಿ ಇಮೇಲ್‌ಗಳನ್ನು ಕಳುಹಿಸಿದ್ದಕ್ಕಾಗಿ ಅಪ್ರಾಪ್ತ ವಯಸ್ಸಿನ ಬಾಲಕನನ್ನು ಛತ್ತೀಸ್ಗಢದಲ್ಲಿ ಬಂಧಿಸಲಾಗಿತ್ತು.

ಐಟಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಮತ್ತು ಬಾಂಬ್ ಬೆದರಿಕೆ ಪೋಸ್ಟ್‌ಗಳನ್ನು "ತ್ವರಿತವಾಗಿ" ತೆಗೆದುಹಾಕಲು ಸೂಕ್ತ ಪ್ರಯತ್ನ ಮಾಡುವಂತೆ ಕೇಂದ್ರ ಸರ್ಕಾರ ಕಳೆದ ತಿಂಗಳು ಸಾಮಾಜಿಕ ಮಾಧ್ಯಮ ವೇದಿಕೆಗಳಿಗೆ ಸೂಚನೆ ನೀಡಿತ್ತು. ಹುಸಿಗಳು ನಾಗರಿಕರ ಮೇಲೆ ಪರಿಣಾಮ ಬೀರುವುದಲ್ಲದೆ ದೇಶದ ಆರ್ಥಿಕ ಭದ್ರತೆ ಅಸ್ಥಿರಗೊಳಿಸುತ್ತವೆ ಎಂದು ಐಟಿ ಸಚಿವಾಲಯ ಸಲಹೆಯಲ್ಲಿ ತಿಳಿಸಿದೆ.

Read More
Next Story