
ರಾಜ್‌ಕೋಟ್ ದುರ್ಘಟನೆ: ಅಗ್ನಿಶಾಮಕ ಇಲಾಖೆ ಪರವಾನಗಿ ಇಲ್ಲದೆ ಗೇಮಿಂಗ್ ಝೋನ್; 10 ಮಂದ ಬಂಧನ
ಶನಿವಾರ (ಮೇ 25) ರಾತ್ರಿ ಮಕ್ಕಳು ಸೇರಿದಂತೆ 32 ಜನರನ್ನು ಬಲಿತೆಗೆದುಕೊಂಡ ರಾಜ್‌ಕೋಟ್ ಗೇಮಿಂಗ್ ವಲಯದ ಬೆಂಕಿ ಅವಘಡಕ್ಕೆ ಸಂಬಂಧಿಸಿ ಹತ್ತು ಜನರನ್ನು ಬಂಧಿಸಲಾಗಿದೆ. ನಿಯಮಾವಳಿಗಳನನು ಉಲ್ಲಂಘಿಇ ಗೇಮಿಂಗ್ ಝೋನ್ ತೆರೆದಿದ್ದ ಮಾಲೀಕರು ಈಗ ತಲೆಮರೆಸಿಕೊಂಡಿದ್ದಾರೆ.
ಅಧಿಕಾರಿಗಳ ಪ್ರಕಾರ, ಗೇಮಿಂಗ್ ವಲಯದ ಮ್ಯಾನೇಜರ್ ಸೇರಿದಂತೆ ಹತ್ತು ಜನರನ್ನು ಬಂಧಿಸಲಾಗಿದೆ. ಶವಗಳನ್ನು ಇನ್ನೂ ಘಟನೆ ನಡೆದ ಸ್ಥಳದಿಂದ ಹೊರ ಸಾಗಿಸಲಾಗುತ್ತಿದೆ. ಅವಘಡದಲ್ಲಿ ಸಿಲುಕಿರುವ ಒಬ್ಬ ಮಾತ್ರ ಬದುಕುಳಿದಿದ್ದಾನೆ. ಬದುಕುಳಿದವನು ಹದಿಹರೆಯದ ಹುಡುಗ. ಮೃತರ ಕುಟುಂಬಕ್ಕೆ 2 ಲಕ್ಷ ರೂ. ಪರಿಹಾರ ಘೋಷಿಸಲಾಗಿದೆ ಸರ್ಕಾರಿ ಮೂಲಗಳು ತಿಳಿಸಿವೆ.
ಶನಿವಾರ ಸಂಜೆ ಯುವಕರಿಂದ ತುಂಬಿ ತುಳುಕುತ್ತಿದ್ದ ಟಿಆರ್‌ಪಿ ಎಂಬ ಗೇಮಿಂಗ್ ಝೋನ್ ನಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದೆ. ಕೇವಲ 99 ರೂ. ದರದ ಟಿಕೆಟ್‌ಗಳ ಜೊತೆಗೆ ವಾರಾಂತ್ಯದ ರಿಯಾಯಿತಿ ಕೊಡುಗೆಯಿಂದಾಗಿ ಜನಸಂದಣಿ ಇತ್ತು. ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿದೆ ಎಂದು ಅಧಿಕಾರಿಗಳು ಆರಂಭದಲ್ಲಿ ಶಂಕಿಸಿದ್ದರೂ, ಕಟ್ಟಡದ ಕಟ್ಟಡದಲ್ಲಿ ವೆಲ್ಡಿಂಗ್ ಯಂತ್ರದ ಕಿಡಿಯಿಂದ ಬೆಂಕಿ ಕಾಣಿಸಿಕೊಂಡಿದೆ ಎಂದು ತಿಳಿದುಬಂದಿದೆ.
ಕೇವಲ ಒಂದು ತುರ್ತು ನಿರ್ಗಮನವನ್ನು ಹೊಂದಿದ್ದು ಮತ್ತು ಬೆಂಕಿ ಭುಗಿಲೆದ್ದ ನಂತರ ಜನ ಭಯಭೀತರಾಗಿದ್ದರು. ಪ್ರವೇಶದ್ವಾರದ ಬಳಿ ತಾತ್ಕಾಲಿಕ ಕಟ್ಟಡ ಕುಸಿದಿದ್ದರಿಂದ ಜನರು ಸಿಲುಕಿಕೊಂಡರು, ಜನರು ಹೊರಬರಲು ಕಷ್ಟವಾಯಿತು ಎಂದು ರಾಜ್‌ಕೋಟ್ ಅಗ್ನಿಶಾಮಕ ಅಧಿಕಾರಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ನಿರಾಕ್ಷೇಪಣಾ ಪ್ರಮಾಣಪತ್ರ
ಅಗ್ನಿಶಾಮಕ ಸುರಕ್ಷತೆಗಾಗಿ ನೋ-ಆಜೆಕ್ಷನ್ ಕ್ಲಿಯರೆನ್ಸ್ ಪ್ರಮಾಣಪತ್ರವನ್ನು ಈ ಸಂಸ್ಥೆ ಹೊಂದಿರಲಿಲ್ಲ. ಜೊತೆಗೆ, ಮನೋರಂಜನಾ ಕೇಂದ್ರವು ಕೇವಲ ಒಂದು ನಿರ್ಗಮನವನ್ನು ಹೊಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸೌಲಭ್ಯದಲ್ಲಿನ ಸುರಕ್ಷತಾ ಮಾನದಂಡಗಳ ನಿರ್ಲಕ್ಷತೆ ಬಗ್ಗೆ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ. ರಕ್ಷಣಾ ಕಾರ್ಯಾಚರಣೆಗಳ ಮೇಲ್ವಿಚಾರಣೆಗಾಗಿ ಘಟನಾ ಸ್ಥಳಕ್ಕೆ ಆಗಮಿಸಿದ ರಾಜ್‌ಕೋಟ್ ಮೇಯರ್ ನಯ್ನಾ ಪೆಧಾಡಿಯಾ ಅವರು ರಾಜ್‌ಕೋಟ್ ಮುನ್ಸಿಪಲ್ ಕಾರ್ಪೊರೇಷನ್‌ನಿಂದ ಗೇಮಿಂಗ್ ಸಂಸ್ಥೆ ಅಗ್ನಿಶಾಮಕ ಇಲಾಖೆಯಿಂದ ಹೊಂದಿರಲಿಲ್ಲ ಎಂದು ಖಚಿತಪಡಿಸಿದ್ದಾರೆ.
" ಎನ್‌ಒಸಿ ಇಲ್ಲದೆ ಹೇಗೆ ಕಾರ್ಯನಿರ್ವಹಿಸಲಾಗುತ್ತಿತ್ತು ಎಂಬುದನ್ನು ನಾವು ತನಿಖೆ ಮಾಡುತ್ತೇವೆ. ಈ ವಿಷಯದಲ್ಲಿ ಯಾವುದೇ ರಾಜಕೀಯವನ್ನು ಅನುಮತಿಸಲಾಗುವುದಿಲ್ಲ" ಎಂದು ಪೆಧಾಡಿಯಾ ಸುದ್ದಿಗಾರರಿಗೆ ತಿಳಿಸಿದರು.