ರಾಜಸ್ಥಾನ: ಅಗ್ನಿವೀರರಿಗೆ ಪೊಲೀಸ್, ಜೈಲು, ಅರಣ್ಯ ಸಿಬ್ಬಂದಿ ನೇಮಕದಲ್ಲಿ ಮೀಸಲು
x

ರಾಜಸ್ಥಾನ: ಅಗ್ನಿವೀರರಿಗೆ ಪೊಲೀಸ್, ಜೈಲು, ಅರಣ್ಯ ಸಿಬ್ಬಂದಿ ನೇಮಕದಲ್ಲಿ ಮೀಸಲು

ಮುಖ್ಯಮಂತ್ರಿ ಮುಖ್ಯಮಂತ್ರಿ ಭಜನ್‌ಲಾಲ್ ಶರ್ಮಾ ಅವರು ಕಾರ್ಗಿಲ್ ವಿಜಯ ದಿವದ ಆಚರಣೆ ಸಂದರ್ಭದಲ್ಲಿ ಅಗ್ನಿವೀರರಿಗೆ ಸರ್ಕಾರದ ಸೇವೆಗಳಲ್ಲಿ ಮೀಸಲು ಘೋಷಣೆ ಮಾಡಿದ್ದಾರೆ ಎಂದು ಸಿಎಂಒ ಹೇಳಿದೆ.


ರಾಜಸ್ಥಾನ ಸರ್ಕಾರವು ಜೈಲು, ಅರಣ್ಯ ಮತ್ತು ರಾಜ್ಯ ಪೊಲೀಸ್ ನೇಮಕದಲ್ಲಿ ಅಗ್ನಿವೀರರಿಗೆ ಮೀಸಲು ನೀಡಲಿದೆ ಎಂದು ಮುಖ್ಯಮಂತ್ರಿ ಭಜನ್‌ಲಾಲ್ ಶರ್ಮಾ ಹೇಳಿದ್ದಾರೆ.

ಮುಖ್ಯಮಂತ್ರಿ ಕಾರ್ಗಿಲ್ ವಿಜಯ್ ದಿವಸ ಆಚರಣೆ ಸಂದರ್ಭದಲ್ಲಿ ಈ ಘೋಷಣೆ ಮಾಡಿದ್ದಾರೆ ಎಂದು ಮುಖ್ಯಮಂತ್ರಿ ಕಚೇರಿ (ಸಿಎಂಒ) ತಿಳಿಸಿದೆ.

ʻರಾಜಸ್ಥಾನ ಸರ್ಕಾರವು ದೇಶದ ಗಡಿಯನ್ನು ಸಮರ್ಪಣಾ ಭಾವ ಮತ್ತು ದೇಶಭಕ್ತಿಯಿಂದ ರಕ್ಷಿಸುವ ಅಗ್ನಿವೀರರಿಗೆ ಪೊಲೀಸ್, ಜೈಲು ಮತ್ತು ಅರಣ್ಯ ಸಿಬ್ಬಂದಿ ನೇಮಕಗಳಲ್ಲಿ ಮೀಸಲು ನೀಡಲಿದೆ. ಇದರಿಂದ ಅಗ್ನಿವೀರರಿಗೆ ರಾಜ್ಯದಲ್ಲಿ ಕೆಲಸ ಮಾಡಲು ಅವಕಾಶ ಸಿಗುತ್ತದೆ,ʼ ಎಂದು ಶರ್ಮಾ ಹೇಳಿದ್ದಾರೆ. ಆದರೆ, ಅಗ್ನಿವೀರರಿಗೆ ಈ ಸೇವೆಗಳಲ್ಲಿ ಎಷ್ಟು ಶೇಕಡಾವಾರು ಮೀಸಲು ನೀಡಲಾಗುತ್ತದೆ ಎಂಬುದನ್ನು ಬಹಿರಂಗಪಡಿಸಿಲ್ಲ.

2022 ರಲ್ಲಿ ಕೇಂದ್ರ ಸರ್ಕಾರವು 17.5 ಮತ್ತು 21 ರ ನಡುವಿನ ವಯಸ್ಸಿನ ಯುವಕರ ನೇಮಕಕ್ಕೆ ಅಗ್ನಿಪಥ್ ಯೋಜನೆಯನ್ನು ಅನಾವರಣ ಗೊಳಿಸಿತು. ಸೇನೆ, ನೌಕಾಪಡೆ ಮತ್ತು ವಾಯುಪಡೆಗಳಲ್ಲಿ ನಾಲ್ಕು ವರ್ಷಗಳ ಒಪ್ಪಂದದ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗುತ್ತಿತ್ತು. ನಾಲ್ಕು ವರ್ಷ ಸೇವಾವಧಿ ಪೂರ್ಣಗೊಂಡ ನಂತರ ಪ್ರತಿ ಬ್ಯಾಚ್‌ನಿಂದ ಶೇ.25 ರಷ್ಟು ಮಂದಿಯನ್ನು ನಿಯಮಿತ ಸೇವೆಗೆ ನೇಂಕಗೊಳಿಸಲಾಗುತ್ತದೆ.

ಕೇಂದ್ರ ಸಶಸ್ತ್ರ ಪೊಲೀಸ್ ಪಡೆ ಅಥವಾ ಅರೆಸೇನಾ ಪಡೆಗಳ ಶೇ.10 ರಷ್ಟು ಹುದ್ದೆಗಳನ್ನು ಅಗ್ನಿವೀರರಿಗೆ ಮೀಸಲಿಡಲಾಗುವುದು ಎಂದು ಕೇಂದ್ರ ಗೃಹ ಸಚಿವಾಲಯ ಪ್ರಕಟಿಸಿತ್ತು. ಹಲವು ರಾಜ್ಯ ಸರ್ಕಾರಗಳು ತಮ್ಮ ಪೊಲೀಸ್ ಪಡೆಗಳಲ್ಲಿ ಅಗ್ನಿವೀರರನ್ನು ನೇಮಕ ಮಾಡಿಕೊಳ್ಳುವುದಾಗಿ ಘೋಷಿಸಿವೆ.

Read More
Next Story