ರಾಹುಲ್ ಗಾಂಧಿ ಜೂನ್‌ 12ರಂದು ವಯನಾಡಿಗೆ
x

ರಾಹುಲ್ ಗಾಂಧಿ ಜೂನ್‌ 12ರಂದು ವಯನಾಡಿಗೆ


ತಿರುವನಂತಪುರಂ, ಜೂನ್ 10- ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಜೂನ್ 12 ರಂದು ವಯನಾಡ್‌ಗೆ ಭೇಟಿ ನೀಡುವ ನಿರೀಕ್ಷೆಯಿದೆ ಎಂದು ಪಕ್ಷದ ಮೂಲಗಳು ಸೋಮವಾರ ತಿಳಿಸಿವೆ.

ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆಯಲ್ಲಿ ವಯನಾಡು ಕ್ಷೇತ್ರದಲ್ಲಿ ಅವರು ಸಿಪಿಐ ಅಭ್ಯರ್ಥಿ ಅನ್ನಿ ರಾಜಾ ಅವರನ್ನು 3,64,422 ಮತಗಳ ಅಂತರದಿಂದ ಸೋಲಿಸಿದ್ದಾರೆ.

ರಾಹುಲ್‌ ಅವರು ವಯನಾಡ್‌ ಸ್ಥಾನವನ್ನು ಬಿಟ್ಟುಕೊಟ್ಟು, ಕಾಂಗ್ರೆಸ್ ಪಕ್ಷದ ಭದ್ರಕೋಟೆಯಾದ ಉತ್ತರಪ್ರದೇಶದ ರಾ‌ಯ್‌ ಬರೇಲಿಯನ್ನು ಉಳಿಸಿಕೊಳ್ಳುತ್ತಾರೆ ಎಂಬ ಊಹಾಪೋಹಗಳ ನಡುವೆಯೇ ಅವರು ಕ್ಷೇತ್ರಕ್ಕೆ ಭೇಟಿ ನೀಡುತ್ತಿದ್ದಾರೆ. ಅವರ ಭೇಟಿಯ ಹಿನ್ನೆಲೆಯಲ್ಲಿ ಯುಡಿಎಫ್‌ ಜೂನ್ 12 ರಂದು ಆಯೋಜಿಸಿದ್ದ ವಿಧಾನಸಭೆವರೆಗೆ ಪ್ರತಿಭಟನೆ ಮೆರವಣಿಗೆಯನ್ನುಒಂದು ದಿನ ಮುಂದೂಡಲಾಗಿದೆ ಎಂದು ಯುಡಿಎಫ್‌ ಸಂಚಾಲಕ ಎಂ.ಎಂ.ಹಸನ್ ಸೋಮವಾರ ಮಾಹಿತಿ ನೀಡಿದ್ದಾರೆ.

ಮದ್ಯ ನೀತಿ ವಿಷಯದಲ್ಲಿ ಪಿಣರಾಯಿ ವಿಜಯನ್ ಸರ್ಕಾರದ ವಿರುದ್ಧ ಆರೋಪ ಕೇಳಿಬಂದ ಬೆನ್ನಲ್ಲೇ ಯುಡಿಎಫ್‌ ಕಳೆದ ತಿಂಗಳು ಪ್ರತಿಭಟನೆ ಮೆರವಣಿಗೆಯನ್ನು ಘೋಷಿಸಿತ್ತು. ಪ್ರವಾಸೋದ್ಯಮ ಮತ್ತು ಅಬಕಾರಿ ಸಚಿವರ ರಾಜೀನಾಮೆಗೆ ಒತ್ತಾಯಿಸಿತ್ತು.

Read More
Next Story