
ರಫೆಲ್ ಯುದ್ಧವಿಮಾನ (ಎಕ್ಸ್ ಖಾತೆಯಿಂದ)
ನೌಕಾಪಡೆಗೆ 26 ರಫೆಲ್ ಯದ್ಧ ವಿಮಾನ ಖರೀದಿಸುವ ಒಪ್ಪಂದಕ್ಕೆ ಭಾರತ, ಪ್ರಾನ್ಸ್ ಸಹಿ
ಪ್ರಧಾನಿ ಮೋದಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯ ಅನುಮೋದನೆ ಪಡೆದ ಮೂರು ದಿನಗಳ ಬಳಿಕ ಒಪ್ಪಂದ ಏರ್ಪಟ್ಟಿದ್ದು, ಐದು ವರ್ಷಗಳ ಬಳಿಕ ರಫೆಲ್ ಯುದ್ಧ ವಿಮಾನಗಳನ್ನು ಕಂಪನಿ ಪೂರೈಸಲಿದೆ.
ಭಾರತೀಯ ನೌಕಾಪಡೆಯಲ್ಲಿ ನಿಯೋಜಿಸುವ ಉದ್ದೇಶದಿಂದ 64 ಸಾವಿರ ಕೋಟಿ ರೂಪಾಯಿ ಮೌಲ್ಯದ 26 ರಫೇಲ್ ಫೈಟರ್ ಜೆಟ್‌ಗಳ ಖರೀದಿಗೆ ಫ್ರಾನ್ಸ್ ಜತೆ ಭಾರತ ಸೋಮವಾರ (ಏಪ್ರಿಲ್ 28ರಂದು) ಒಪ್ಪಂದಕ್ಕೆ ಸಹಿ ಹಾಕಿದೆ.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದಲ್ಲಿ ನಡೆದ ವರ್ಚುವಲ್ ಸಭೆಯಲ್ಲಿ ಈ ಒಪ್ಪಂದಕ್ಕೆ ಸಹಿ ಹಾಕಲಾಗಿದ್ದು, ಫ್ರೆಂಚ್‌ನ ಡಸಾಲ್ಟ್ ಏವಿಯೇಷನ್‌ನಿಂದ ಜೆಟ್‌ಗಳನ್ನು ಖರೀದಿಸಿ ಐಎನ್‌ಎಸ್ ವಿಕ್ರಾಂತ್ ಯುದ್ಧ ನೌಕೆಯಲ್ಲಿ ನಿಯೋಜಿಸಲಾಗುತ್ತದೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯ ಅನುಮೋದನೆ ಪಡೆದ ಮೂರು ದಿನಗಳ ಬಳಿಕ ಈ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಅದರ ಪ್ರಕಾರ, ಒಪ್ಪಂದ ಏರ್ಪಟ್ಟ ಐದು ವರ್ಷಗಳ ಬಳಿಕ ಯುದ್ಧ ವಿಮಾನಗಳನ್ನು ಏವಿಯೇಷನ್ ಕಂಪನಿ ಪೂರೈಸಲಿದೆ.
ಜುಲೈ 2023ರಲ್ಲಿ ರಕ್ಷಣಾ ಸಚಿವಾಲಯವು ಆರಂಭಿಕ ಅನುಮೋದನೆ ಕೊಟ್ಟಿತ್ತು. ಚರ್ಚೆ, ವಿಮಾನಗಳನ್ನು ಪರೀಕ್ಷಿಸಿದ ನಂತರ ಸೋಮವಾರ ಸಹಿ ಹಾಕಲಾಯಿತು. ಅದರಡಿಯಲ್ಲಿ ಭಾರತೀಯ ನೌಕಾಪಡೆಯು, ಡಸಾಲ್ಟ್ ಏವಿಯೇಷನ್‌ನಿಂದ ಶಸ್ತ್ರಾಸ್ತ್ರ ಮತ್ತು ಬಿಡಿಭಾಗಗಳು ಸೇರಿದಂತೆ ಪೂರಕ ಉಪಕರಣಗಳನ್ನು ಸಹ ಪಡೆಯಲಿದೆ.
ಪಾಕಿಸ್ತಾನ ಹಾಗೂ ಚೀನಾ ಗಡಿಯಲ್ಲಿ ಕದನ ವಿರಾಮ ಉಲ್ಲಂಘಿಸುತ್ತಿರುವ ಈ ಸಂದರ್ಭದಲ್ಲಿ ಇಪ್ಪತ್ತಾರು ರಫೇಲ್ ಜೆಟ್‌ಗಳನ್ನು ಭಾರತೀಯ ನೌಕಾಪಡೆಗೆ ಖರೀದಿಸುತ್ತಿರುವುದು ಮಹತ್ವ ಪಡೆದುಕೊಂಡಿದೆ. ಕಳೆದ ಕೆಲವು ವರ್ಷಗಳ ಹಿಂದೆ ಭಾರತೀಯ ವಾಯುಪಡೆಗೆ 36 ರಫೇಲ್ ಯುದ್ಧ ವಿಮಾನಗಳನ್ನು ಖರೀದಿಸಲಾಗಿತ್ತು.