Inhumane Incident | 10ನೇ ತರಗತಿ 80 ವಿದ್ಯಾರ್ಥಿನಿಯರ ಅಂಗಿ ಬಿಚ್ಚಿಸಿ ಮನೆಗೆ ಕಳುಹಿಸಿದ ಪ್ರಾಂಶುಪಾಲ!
ವಿದ್ಯಾರ್ಥಿನಿಯರೊಂದಿಗೂ ಮಾತುಕತೆ ನಡೆಸಿದ ಆಡಳಿತ ಮಂಡಳಿ, ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ತನಿಖೆಗೆ ಆದೇಶಿಸಿದೆ. ಜತೆಗೆ ತನಿಖೆಗೆ ವಿಶೇಷ ಸಮಿತಿಯನ್ನೂ ರಚಿಸಿದೆ.
ತಮ್ಮ ಅಂಗಿಯ ಮೇಲೆ ಸಂದೇಶಗಳನ್ನು ಬರೆದುಕೊಂಡರು ಎಂಬ ಕಾರಣಕ್ಕಾಗಿ 10ನೇ ತರಗತಿಯ 80 ವಿದ್ಯಾಾರ್ಥಿನಿಯರನ್ನು ಶರ್ಟ್ ತೆಗೆಸಿ ಮನೆಗೆ ಕಳುಹಿಸಿದ ಅಮಾನವೀಯ ಘಟನೆ ಜಾರ್ಖಂಡ್‌ನ ಧನ್‌ಬಾದ್ ಜಿಲ್ಲೆಯ ಖಾಸಗಿ ಶಾಲೆಯಲ್ಲಿ ನಡೆದಿದೆ. ಪ್ರಾಂಶುಪಾಲರ ಈ ಕ್ರಮಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಈ ಕುರಿತು ತನಿಖೆಗೆ ಆದೇಶಿಸಲಾಗಿದೆ. ಜೋರಾಪೋಖರ್ ಪೊಲೀಸ್ ಠಾಣೆ ವ್ಯಾಾಪ್ತಿಯಲ್ಲಿ ಬರುವ ಪ್ರತಿಷ್ಠಿತ ಪ್ರೌಢಶಾಲೆಯಲ್ಲಿ ಈ ಘಟನೆ ನಡೆದಿದೆ.
ಪರೀಕ್ಷೆಗಳನ್ನು ಬರೆದು ಮುಗಿಸಿದ ಬಳಿಕ 10ನೇ ತರಗತಿಯ ವಿದ್ಯಾರ್ಥಿನಿಯರೆಲ್ಲರೂ ಜತೆಗೂಡಿ, ಪರಸ್ಪರರ ಶರ್ಟ್‌ಗಳಲ್ಲಿ ಶುಭ ಸಂದೇಶಗಳನ್ನು ಬರೆಯುವ ಮೂಲಕ ‘ಪೆನ್ ಡೇ’ ಆಚರಿಸಿದ್ದರು. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದ ಶಾಲೆಯ ಪ್ರಾಾಂಶುಪಾಲರು, ಎಲ್ಲ ವಿದ್ಯಾರ್ಥಿನಿಯರಿಗೂ ಶರ್ಟ್ ಬಿಚ್ಚುವಂತೆ ಆದೇಶಿಸಿದ್ದಾರೆ. ಆಗ ವಿದ್ಯಾಾರ್ಥಿನಿಯರು ಕ್ಷಮೆ ಕೇಳಿದರೂ ಬಿಡದ ಪ್ರಾಾಂಶುಪಾಲರು, ಅಂಗಿಯನ್ನು ತೆಗೆಸಿಯೇ ಎಲ್ಲ 80 ವಿದ್ಯಾರ್ಥಿನಿಯರನ್ನೂ ಮನೆಗೆ ಕಳುಹಿಸಿದ್ದಾರೆ. ಬೇರೆ ದಾರಿಯಿಲ್ಲದೆ ಎಲ್ಲರೂ ಅಂಗಿ ಬಿಚ್ಚಿ, ಕೇವಲ ಬ್ಲೇಜರ್‌ನೊಂದಿಗೆ ಮನೆಗೆ ಮರಳಿದ್ದಾರೆ ಎಂದು ವಿದ್ಯಾರ್ಥಿಗಳ ಹೆತ್ತವರು ಆರೋಪಿಸಿದ್ದಾರೆ.
ಘಟನೆಯಿಂದ ಆಕ್ರೋಶಿತರಾದ ಹೆತ್ತವರು ಈ ಬಗ್ಗೆ ಶಾಲಾ ಆಡಳಿತ ಮಂಡಳಿಗೆ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿಯರೊಂದಿಗೂ ಮಾತುಕತೆ ನಡೆಸಿದ ಆಡಳಿತ ಮಂಡಳಿ, ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ತನಿಖೆಗೆ ಆದೇಶಿಸಿದೆ. ಜತೆಗೆ ತನಿಖೆಗೆ ವಿಶೇಷ ಸಮಿತಿಯನ್ನೂ ರಚಿಸಿದೆ. ಸಮಿತಿಯಲ್ಲಿ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್, ಜಿಲ್ಲಾ ಶಿಕ್ಷಣ ಅಧಿಕಾರಿ, ಜಿಲ್ಲಾ ಸಮಾಜ ಕಲ್ಯಾಾಣ ಅಧಿಕಾರಿ ಮತ್ತು ಉಪ ವಿಭಾಗೀಯ ಪೊಲೀಸ್ ಅಧಿಕಾರಿ ಇರಲಿದ್ದಾರೆ. ಸಮಿತಿಯ ವರದಿ ಆಧರಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಧನ್‌ಬಾದ್ ಜಿಲ್ಲಾಧಿಕಾರಿ ಮಾಧವಿ ಮಿಶ್ರಾ ತಿಳಿಸಿದ್ದಾರೆ.