Praggnanandhaa : ಪ್ರಜ್ಞಾನಂದಗೆ ಟಾಟಾ ಸ್ಟೀಲ್ ಮಾಸ್ಟರ್ಸ್‌ ಕಿರೀಟ
x
ಪ್ರಶಸ್ತಿ ಗೆದ್ದ ಪ್ರಜ್ಞಾನಂದ.

Praggnanandhaa : ಪ್ರಜ್ಞಾನಂದಗೆ ಟಾಟಾ ಸ್ಟೀಲ್ ಮಾಸ್ಟರ್ಸ್‌ ಕಿರೀಟ

Praggnanandhaa : ಸ್ಕೋರ್ ಸಮನಾದ ಕಾರಣ ಅಲ್ಪಾವಧಿಯ ಟೈಬ್ರೇಕರ್‌ ನಡೆಸಲಾಯಿತು. ಚೆನ್ನೈನ ಆಟಗಾರರಿಬ್ಬರ ಈ ಪೈಪೋಟಿಯಲ್ಲಿ ಪ್ರಜ್ಞಾನಂದ ಅವರನ್ನು 2–1 ರಿಂದ ಗುಕೇಶ್ ಅವರನ್ನು ಮಣಿಸಿದರು.


ಅಂತಾರಾಷ್ಟ್ರೀಯ ಚೆಸ್‌ನಲ್ಲಿ ಭಾರತದ ಚೆಸ್‌ಪಟುಗಳ ಪ್ರಾಬಲ್ಯ ಮುಂದುವರಿದಿದೆ. ಗ್ರ್ಯಾಂಡ್‌ಮಾಸ್ಟರ್‌ ಪ್ರಜ್ಞಾನಂದ ವಿಶ್ವ ಚಾಂಪಿಯನ್ ಗುಕೇಶ್ ಅವರನ್ನು ಸೋಲಿಸಿ ವರ್ಷದ ಮೊದಲ ಪ್ರಮುಖ ಟೂರ್ನಿಯಾದ ಟಾಟಾ ಸ್ಟೀಲ್ ಮಾಸ್ಟರ್ಸ್‌ನಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದಾರೆ.

ಈ ಟೂರ್ನಿಯ ಅಂತಿಮ ಸುತ್ತಿನ ಬಳಿಕ ಪ್ರಜ್ಞಾನಂದ ಮತ್ತು ಗುಕೇಶ್‌ ತಲಾ 8.5 ಪಾಯಿಂಟ್ಸ್ ಸಂಗ್ರಹಿಸಿದ್ದರು. ಇಬ್ಬರೂ 12ನೇ ಸುತ್ತಿನ ನಂತರ ಅಗ್ರಸ್ಥಾನ ಹಂಚಿಕೊಂಡಿದ್ದರು. ಅರ್ಜುನ್ ಇರಿಗೇಶಿ 13ನೇ ಸುತ್ತಿನಲ್ಲಿ ಗುಕೇಶ್ ಅವರನ್ನು ಸೋಲಿಸಿದರು. ಜರ್ಮನಿಯ ವಿನ್ಸೆಂಟ್ ಕೀಮರ್ ಅವರು ಪ್ರಜ್ಞಾನಂದ ಅವರನ್ನು ಮಣಿಸಿದ್ದರು.

ಸ್ಕೋರ್ ಸಮನಾದ ಕಾರಣ ಅಲ್ಪಾವಧಿಯ ಟೈಬ್ರೇಕರ್‌ ನಡೆಸಲಾಯಿತು. ಚೆನ್ನೈನ ಆಟಗಾರರಿಬ್ಬರ ಈ ಪೈಪೋಟಿಯಲ್ಲಿ ಪ್ರಜ್ಞಾನಂದ ಅವರನ್ನು 2–1 ರಿಂದ ಗುಕೇಶ್ ಅವರನ್ನು ಮಣಿಸಿದರು. ಮೊದಲ ಎರಡು ಗೇಮ್‌ಗಳಲ್ಲಿ ಇಬ್ಬರೂ ಒಂದೊಂದು ಪಂದ್ಯವನ್ನು ಗೆದ್ದರು. 2ನಿ.30 ಸೆಕೆಂಡುಗಳ ‘ಸಡನ್‌ ಡೆತ್‌‘ ಆಟದಲ್ಲಿ 19 ವರ್ಷದ ಪ್ರಜ್ಞಾನಂದ ಜಯಗಳಿಸಿದರು.

‘ನಾನಿನ್ನೂ ಗೆಲುವಿನ ಗುಂಗಿನಿಂದ ಹೊರಬಂದಿಲ್ಲ. ಈ ಸಂತಸವನ್ನು ಹೇಗೆ ಬಣ್ಣಿಸಬೇಕೆಂದು ತಿಳಿಯುತ್ತಿಲ್ಲ. ನಾನು ಗೆಲ್ಲುವೆನೆಂಬ ನಿರೀಕ್ಷೆಯೇ ಇರಲಿಲ್ಲ’ ಎಂದು ಪ್ರಜ್ಞಾನಂದ ಬರೆದಿದ್ದಾರೆ.

ವಿಶ್ವನಾಥನ್ ಆನಂದ್ ನಂತರ ಈ ಪ್ರಶಸ್ತಿ ಗೆದ್ದ ಭಾರತದ ಮೊದಲ ಆಟಗಾರ ಎಂಬ ಗೌರವ ಪ್ರಜ್ಞಾನಂದ ಅವರದಾಯಿತು. ಈ ಹಿಂದೆ ಕೋರಸ್‌ ಚೆಸ್‌ ಟೂರ್ನಿಯ ಎಂಬ ಹೆಸರು ಹೊಂದಿದ್ದ ಈ ಟೂರ್ನಿಯನ್ನು ಆನಂದ್ 2003, 2004 ಮತ್ತು 2006ರಲ್ಲಿ ಗೆದ್ದುಕೊಂಡಿದ್ದರು. 1989 ಮತ್ತು 1998 ರಲ್ಲಿ ಅವರು ಪ್ರಶಸ್ತಿ ಹಂಚಿಕೊಂಡಿದ್ದರು.

ಗುಕೇಶ್ ಸತತ ಎರಡನೇ ವರ್ಷ ನಿರಾಶೆ ಎದುರಿಸಿದರು. 2024ರಲ್ಲಿ ಅವರು ಅಗ್ರಸ್ಥಾನಕ್ಕೆ ಚೀನಾದ ವೀ ಯಿ ಜೊತೆ ಟೈ ಮಾಡಿಕೊಂಡಿದ್ದರು. ಆದರೆ ಟೈಬ್ರೇಕರ್‌ನಲ್ಲಿ ಚೀನಾದ ಆಟಗಾರ ಜಯಗಳಿಸಿದ್ದರು.

Read More
Next Story