Arvind Kejriwal: ಯಮುನೆಗೆ ವಿಷಪ್ರಾಶನ ಹೇಳಿಕೆ; ಹರಿಯಾಣದಲ್ಲಿ ಕೇಜ್ರಿವಾಲ್ ವಿರುದ್ಧ ಕೇಸ್‌
x
ಅರವಿಂದ್‌ ಕೇಜ್ರಿವಾಲ್‌

Arvind Kejriwal: ಯಮುನೆಗೆ ವಿಷಪ್ರಾಶನ ಹೇಳಿಕೆ; ಹರಿಯಾಣದಲ್ಲಿ ಕೇಜ್ರಿವಾಲ್ ವಿರುದ್ಧ ಕೇಸ್‌

Arvind Kejriwal: ಕೇಜ್ರಿವಾಲ್ ಹೇಳಿಕೆಗೆ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು "ಅವಾಸ್ತವಿಕ ಮತ್ತು ಉದ್ದೇಶಪೂರ್ವಕ" ಎಂದು ಜರೆದಿದೆ. . ಅವರು ಕೇಜ್ರಿವಾಲ್ ಅವರನ್ನು ಜನರಲ್ಲಿ ಭಯ ಹಬ್ಬಿಸುತ್ತಿದ್ದಾರೆ ಎಂದು ಕಿಡಿ ಕಾರಿದೆ.


ಯುಮನಾ ನದಿಗೆ ಹರಿಯಾಣದಲ್ಲಿ ವಿಷ ಪ್ರಾಶನ ಮಾಡಲಾಗುತ್ತಿದೆ ಎಂಬ ಹೇಳಿಕೆ ನೀಡಿದ ಆಮ್ ಆದ್ಮಿ ಪಾರ್ಟಿ (AAP) ನಾಯಕ ಅರವಿಂದ್ ಕೇಜ್ರಿವಾಲ್ (Arvind Kejriwal) ವಿರುದ್ಧ ಹರಿಯಾಣದ ಕುರುಕ್ಷೇತ್ರ ಜಿಲ್ಲೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಬೆಳವಣಿಗೆ ದೆಹಲಿಯ ವಿಧಾನಸಭಾ ಚುನಾವಣೆಗೆ ಒಂದು ದಿನ ಮೊದಲು ನಡೆದಿದ್ದು, ರಾಜಕೀಯ ವಲಯದಲ್ಲಿ ಚರ್ಚೆ ಸೃಷ್ಟಿಸಿದೆ.

ದೆಹಲಿಯ ಮಾಜಿ ಮುಖ್ಯಮಂತ್ರಿ ಹಾಗೂ ಆಪ್‌ ಪಕ್ಷದ ಕಾರ್ಯಕರ್ತರ ವಿರುದ್ಧ ಕುರುಕ್ಷೇತ್ರ ನಿವಾಸಿ ಮತ್ತು ವಕೀಲ ಜಗ್ಮೋಹನ್ ಮಂಚಂಡಾ ಅವರು ನೀಡಿದ ದೂರಿನಂತೆ ಶಹಾಬಾದ್ ಪೊಲೀಸ್ ಠಾಣೆಯಲ್ಲಿ ಕೇಸ್‌ ದಾಖಲಾಗಿದೆ. ಅಲ್ಲದೆ ಕೇಜ್ರಿವಾಲ್ ಹೇಳಿಕೆಗೆ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು "ಅವಾಸ್ತವಿಕ ಮತ್ತು ಉದ್ದೇಶಪೂರ್ವಕ" ಎಂದು ಜರೆದಿದೆ. . ಅವರು ಕೇಜ್ರಿವಾಲ್ ಅವರನ್ನು ಜನರಲ್ಲಿ ಭಯ ಹಬ್ಬಿಸುತ್ತಿದ್ದಾರೆ ಎಂದು ಕಿಡಿ ಕಾರಿದೆ. .

ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 192 (ಗಲಭೆ ಪ್ರಚೋದಿಸುವ ಉದ್ದೇಶ), 196 (1) (ಧರ್ಮ ಅಥವಾ ಜಾತಿ ಆಧಾರದ ಮೇಲೆ ವಿಭಜನೆ ಉಂಟುಮಾಡುವುದು) ಮತ್ತು 299 (ಯಾವುದೇ ಧರ್ಮ ಅಥವಾ ಅದರ ನಂಬಿಕೆಗಳನ್ನು ಅಪಮಾನಿಸುವ ಉದ್ದೇಶಪೂರ್ವಕ ಕೃತ್ಯ) ಸೆಕ್ಷನ್‌ಗಳಡಿ ಕೇಜ್ರಿವಾಲ್‌ ಮೇಲೆ ಕೇಸ್‌ ದಾಖಲಾಗಿದೆ.

ಕೇಜ್ರಿವಾಲ್ ಮತ್ತು ಆಪ್‌ ನಾಯಕರು ಚುನಾವಣೆ ವೇಳೆ ಜನರ ಮನಸ್ಸು ಬದಲಾಯಿಸಲು ಮತ್ತು ಮತಗಳನ್ನು ತಮ್ಮ ಕಡೆ ಸೆಳೆಯಲು ಸುಳ್ಳು ಮತ್ತು ದ್ವೇಷಪೂರಿತ ಹೇಳಿಕೆಗಳನ್ನು ನೀಡಿದ್ದಾರೆ ಎಂದು ದೂರುದಾರ ಆರೋಪಿಸಿದ್ದಾರೆ.

ಇದಕ್ಕಿಂತ ಹಿಂದೆ, ಆಪ್‌ ಪಕ್ಷದ ಮುಖಂಡ ಕೇಜ್ರಿವಾಲ್‌ ಹರಿಯಾಣ ಸರ್ಕಾರವನ್ನು ಟೀಕಿಸುತ್ತಾ, ಬಿಜೆಪಿ ಸರ್ಕಾರ ಕೈಗಾರಿಕಾ ತ್ಯಾಜ್ಯವನ್ನು ಯಮುನಾ ನದಿಗೆ ಸೇರಿಸುತ್ತಿದೆ. ಹರಿಯಾಣದ ಬಿಜೆಪಿ ಸರ್ಕಾರ ಜನರನ್ನು ಕೊಲ್ಲಲು ಯಮುನಾ ನದಿಯಲ್ಲಿ ವಿಷ ಸೇರಿಸುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದರು.

ಸಿಎಂ ಆತಿಶಿ ವಾಗ್ದಾಳಿ

ದೆಹಲಿ ಮುಖ್ಯಮಂತ್ರಿ ಆತಿಶಿ ಕೂಡ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿ, ಫೆಬ್ರವರಿ 5ರಂದು ನಡೆಯಲಿರುವ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಭಾರಿ ಹಿನ್ನಡೆ ಅನುಭವಿಸಲಿದೆ. ಅದನ್ನು ತಡೆಗಟ್ಟಲು ಮತ್ತು ಜನರಲ್ಲಿ ಗೊಂದಲ ಉಂಟುಮಾಡಲು ಉದ್ದೇಶಪೂರ್ವಕವಾಗಿ ದೆಹಲಿಯ ನೀರಿನ ಸರಬರಾಜಿಗೆ ತೊಂದರೆ ನೀಡುತ್ತಿದೆ ಎಂದು ಆರೋಪಿಸಿದ್ದರು.

ಕೇಜ್ರಿವಾಲ್ ತಮ್ಮ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ "ಬಿಜೆಪಿ ಸರ್ಕಾರ ಹರಿಯಾಣದಲ್ಲಿ ಯಮುನಾ ನದಿಗೆ ವಿಷ ಸೇರಿಸುತ್ತಿದೆ. . ಈ ನೀರನ್ನು ಕುಡಿದರೆ ದೆಹಲಿ ಜನರು ಸಾಯಬಹುದು . ಇದು ಬಿಜೆಪಿ ಸರ್ಕಾರದ ಅತ್ಯಂತ ಹೀನಾಯ ನಡೆ. ವಿಷಪೂರಿತ ನೀರನ್ನು ಶುದ್ಧೀಕರಣ ಘಟಕಗಳಲ್ಲೂ ಪರಿಶುದ್ಧಗೊಳಿಸಲು ಸಾಧ್ಯವಿಲ್ಲ. ದೆಹಲಿ ಜನರ ಸುರಕ್ಷತೆಗಾಗಿ, ಕೆಲವು ಪ್ರದೇಶಗಳಲ್ಲಿ ನೀರಿನ ಸರಬರಾಜನ್ನು ತಾತ್ಕಾಲಿಕವಾಗಿ ನಿಲ್ಲಿಸಬೇಕಾಗಿದೆ" ಎಂದು ಬರೆದುಕೊಂಡಿದ್ದರು.

Read More
Next Story