ಪ್ರಧಾನಿ ರಷ್ಯಾ, ಆಸ್ಟ್ರಿಯಾ ಭೇಟಿ ಜುಲೈ 8-10ಕ್ಕೆ
x

ಪ್ರಧಾನಿ ರಷ್ಯಾ, ಆಸ್ಟ್ರಿಯಾ ಭೇಟಿ ಜುಲೈ 8-10ಕ್ಕೆ


ನವದೆಹಲಿ, ಜುಲೈ 4 - ಪ್ರಧಾನಿ ನರೇಂದ್ರ ಮೋದಿ ಅವರು ಜುಲೈ 8 ರಿಂದ 9 ರವರೆಗೆ ರಷ್ಯಾಕ್ಕೆ ಎರಡು ದಿನಗಳ ಭೇಟಿ ನೀಡಲಿದ್ದಾರೆ.

ಎರಡು ದೇಶಗಳ ನಡುವಿನ ಬಹುಮುಖಿ ಒಪ್ಪಂದಗಳನ್ನು ಪುನಾಪರಿಶೀಲಿಸಲು ನಡೆಯಲಿರುವ 22 ನೇ ಭಾರತ-ರಷ್ಯಾ ವಾರ್ಷಿಕ ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಆನಂತರ, ಅವರು ಆಸ್ಟ್ರಿಯಾಕ್ಕೆ ಪ್ರಯಾಣಿಸಲಿದ್ದಾರೆ. ಇದು 41 ವರ್ಷಗಳಲ್ಲಿ ಆ ದೇಶಕ್ಕೆ ಭಾರತೀಯ ಪ್ರಧಾನಿಯೊಬ್ಬರ ಮೊದಲ ಭೇಟಿ ಇದಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ (ಎಂಇಎ) ತಿಳಿಸಿದೆ.

ಐದು ವರ್ಷಗಳ ನಂತರ ಮೋದಿಯವರ ಮೊದಲ ರಷ್ಯಾ ಪ್ರವಾಸ ಇದಾಗಿದೆ. 2019 ರಲ್ಲಿ ಅವರು ವ್ಲಾಡಿವೋಸ್ಟಾಕ್‌ನಲ್ಲಿ ನಡೆದ ಆರ್ಥಿಕ ಸಮಾವೇಶದಲ್ಲಿ ಭಾಗವಹಿಸಿದ್ದರು.

Read More
Next Story