ಕೆಲವು ಪಕ್ಷಗಳಿಂದ ನಕಾರಾತ್ಮಕ ರಾಜಕೀಯ: ಪ್ರಧಾನಿ ಟೀಕೆ
x
ಮುಂಬೈನಲ್ಲಿ ಶನಿವಾರ ನಡೆದ ವಿವಿಧ ಅಭಿವೃದ್ಧಿ ಯೋಜನೆಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ

ಕೆಲವು ಪಕ್ಷಗಳಿಂದ ನಕಾರಾತ್ಮಕ ರಾಜಕೀಯ: ಪ್ರಧಾನಿ ಟೀಕೆ


ಹೊಸದಿಲ್ಲಿ, ಜು.22 : ಲೋಕಸಭೆ ಚುನಾವಣೆಯಲ್ಲಿ ಜನ ತಮ್ಮ ತೀರ್ಪು ನೀಡಿದ್ದಾರೆ. ಮುಂದಿನ ಐದು ವರ್ಷ ದೇಶಕ್ಕಾಗಿ ಎಲ್ಲಾ ರಾಜಕೀಯ ಪಕ್ಷಗಳು ಒಟ್ಟಾಗಿ ಹೋರಾಡಬೇಕು ಎಂದು ಸಂಸತ್ತಿನ ಬಜೆಟ್ ಅಧಿವೇಶನ ಆರಂಭಕ್ಕೆ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಹೇಳಿದರು.

ʻಬಜೆಟ್ ಮುಂದಿನ ಐದು ವರ್ಷಗಳ ಪ್ರಯಾಣಕ್ಕೆ ದಿಕ್ಕನ್ನು ನೀಡುತ್ತದೆ. 2047 ರಲ್ಲಿ 'ವಿಕಸಿತ ಭಾರತʼದ ಕನಸು ನನಸಾಗಿಸಲು ಅಡಿಪಾಯ ಹಾಕುತ್ತದೆ ಎಂದು ಪ್ರಧಾನಿ ಹೇಳಿದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಮೋದಿ, ಕೆಲವು ಪಕ್ಷಗಳ ನಕಾರಾತ್ಮಕ ರಾಜಕೀಯವನ್ನು ಟೀಕಿಸಿದರು. ತಮ್ಮ ವೈಫಲ್ಯಗಳನ್ನು ಮರೆಮಾಚಲು ಸಂಸತ್ತಿನ ಸಮಯವನ್ನು ಬಳಸಿಕೊಂಡವು ಎಂದು ಹೇಳಿದರು.

ಕಳೆದ ಅಧಿವೇಶನದಲ್ಲಿ ಸಂಸತ್ತಿನಲ್ಲಿ ತಮ್ಮ ಧ್ವನಿಯನ್ನು ಹತ್ತಿಕ್ಕಲು ಪ್ರಯತ್ನಿಸಿದ ವಿರೋಧ ಪಕ್ಷಗಳ ವಿರುದ್ಧ ಪ್ರಧಾನಿ ವಾಗ್ದಾಳಿ ನಡೆಸಿದರು. ʻಅಂತಹ ತಂತ್ರಕ್ಕೆ ಪ್ರಜಾಪ್ರಭುತ್ವದಲ್ಲಿ ಸ್ಥಾನವಿಲ್ಲ. ಜನರಿಗೆ ನೀಡಿದ ಭರವಸೆಗಳನ್ನು ಜಾರಿಗೊಳಿಸಲು ತಮ್ಮ ಸರ್ಕಾರ ಮುಂದಾಗಿದೆʼ ಎಂದು ಹೇಳಿದರು.

ʻಇದು ಬಜೆಟ್ ಅಧಿವೇಶನ. ನೀಡಿದ ಭರವಸೆಗಳನ್ನು ಜಾರಿಗೊಳಿಸಲು ಮುಂದಾಗಿದ್ದೇವೆ. ಇದು ಅಮೃತ ಕಾಲದ ಪ್ರಮುಖ ಬಜೆಟ್ ಆಗಿದೆ. ನಮಗೆ ಐದು ವರ್ಷಗಳ ಕಾಲಾವಕಾಶವಿದ್ದು, ಈ ಬಜೆಟ್ ಆ ಪ್ರಯಾಣದ ದಿಕ್ಕನ್ನು ನಿರ್ಧರಿಸುತ್ತದೆ. 2047 ರಲ್ಲಿ ವಿಕಸಿತ ಭಾರತದ ಕನಸನ್ನು ನನಸಾಗಿಸಲು ಅಡಿಪಾಯ ಹಾಕುತ್ತದೆ. ಪ್ರಜಾಪ್ರಭುತ್ವದ ಹೆಮ್ಮೆಯ ಪಯಣದಲ್ಲಿ ಬಜೆಟ್ ಅಧಿವೇಶನ ಒಂದು ಪ್ರಮುಖ ತಾಣ,ʼ ಎಂದು ಮೋದಿ ಹೇಳಿದರು.

ʻ60 ವರ್ಷಗಳ ನಂತರ ಮತ್ತೆ ಮೂರನೇ ಅವಧಿಗೆ ಸರ್ಕಾರ ಅಧಿಕಾರಕ್ಕೆ ಬಂದಿದೆ,ʼ ಎಂದರು.

Read More
Next Story