Narendra Modi: ಸಹೋದ್ಯೋಗಿಗಳೊಂದಿಗೆ ಸಬರಮತಿ ರಿಪೋರ್ಟ್ ಸಿನಿಮಾ ವೀಕ್ಷಿಸಿದ ಮೋದಿ
ಫೆಬ್ರವರಿ 27, 2002 ರಂದು ಗೋಧ್ರಾದಲ್ಲಿ ಸಬರಮತಿ ಎಕ್ಸ್ಪ್ರೆಸ್ ರೈಲಿನಲ್ಲಿ ಸಂಭವಿಸಿದ ಅಗ್ನಿ ದುರಂತದ ಹಿಂದಿನ ಸತ್ಯವನ್ನು ಈ ಚಿತ್ರವು ಬಹಿರಂಗಪಡಿಸುತ್ತದೆ ಎಂದು ಚಿತ್ರ ತಂಡ ಹೇಳಿಕೊಂಡಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಸಂಸತ್ತಿನ ಗ್ರಂಥಾಲಯ ಕಟ್ಟಡದ ಬಾಲಯೋಗಿ ಸಭಾಂಗಣದಲ್ಲಿ ತಮ್ಮ ಸಂಪುಟದ ಹಲವಾರು ಸದಸ್ಯರು ಮತ್ತು ಆಡಳಿತ ಮೈತ್ರಿಕೂಟದ ಸಂಸದರೊಂದಿಗೆ 'ದಿ ಸಬರಮತಿ ರಿಪೋರ್ಟ್' ಚಲನಚಿತ್ರ ವೀಕ್ಷಿಸಿದರು.
ಹಿರಿಯ ನಟ ಜೀತೇಂದ್ರ ಮತ್ತು ಚಿತ್ರದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ., ರಾಶಿ ಖನ್ನಾ ಸೇರಿದಂತೆ ಹಲವು ನಟರು ಈ ಸಿನಿಮಾದಲ ಮುಖ್ಯ ಭೂಮಿಕೆಯಲ್ಲಿದ್ದಾರೆ. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮೋದಿ, ಪ್ರಧಾನಿಯಾದ ನಂತರ ತಾವು ನೋಡಿದ ಮೊದಲ ಚಿತ್ರ ಇದು ಎಂದು ಹೇಳಿದರು.
ಮೋದಿ ಅವರೊಂದಿಗೆ ಕೇಂದ್ರ ಸಚಿವರಾದ ಅಮಿತ್ ಶಾ, ರಾಜನಾಥ್ ಸಿಂಗ್, ನಿತಿನ್ ಗಡ್ಕರಿ ಮತ್ತು ಬಿಜೆಪಿ ಮಿತ್ರ ಜಿತನ್ ರಾಮ್ ಮಾಂಝಿ ಉಪಸ್ಥಿತರಿದ್ದರು. ಫೆಬ್ರವರಿ 27, 2002 ರಂದು ಗೋಧ್ರಾದಲ್ಲಿ ಸಬರಮತಿ ಎಕ್ಸ್ಪ್ರೆಸ್ ರೈಲಿನಲ್ಲಿ ಸಂಭವಿಸಿದ ಅಗ್ನಿ ದುರಂತದ ಹಿಂದಿನ ಸತ್ಯವನ್ನು ಈ ಚಿತ್ರವು ಬಹಿರಂಗಪಡಿಸುತ್ತದೆ ಎಂದು ಚಿತ್ರ ತಂಡ ಹೇಳಿಕೊಂಡಿದೆ.
ಮುಖ್ಯ ಪಾತ್ರದಲ್ಲಿ ನಟಿಸಿರುವ ವಿಕ್ರಾಂತ್ ಮಾಸ್ಸೆ , ಮೋದಿ ಅವರೊಂದಿಗೆ ಚಲನಚಿತ್ರವನ್ನು ನೋಡುವುದು ವಿಭಿನ್ನ ಅನುಭವ. ಅದನ್ನು ಪದಗಳಲ್ಲಿ ವ್ಯಕ್ತಪಡಿಸಲು ಸಾಧ್ಯವಿಲ್ಲ ಎಂದು ಹೇಳಿದರು. ಇದೇ ವೇಳೆ ಅವರು ಚಲನಚಿತ್ರವನ್ನು ವೀಕ್ಷಿಸುವಂತೆ ಜನರಿಗೆ ಮನವಿ ಮಾಡಿದರು. ಈ ಅನುಭವವು ಅವರ ವೃತ್ತಿಜೀವನದ ಅತ್ಯುನ್ನತ ಹಂತವಾಗಿದೆ ಎಂದು ಅವರು ಹೇಳಿದರು.
ಚಿತ್ರವನ್ನು ನೋಡಿದ ನಂತರ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ ಮೋದಿ, ಚಿತ್ರದ ತಯಾರಕರ ಪ್ರಯತ್ನವನ್ನು ಶ್ಲಾಘಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಜೀತೇಂದ್ರ, ತಮ್ಮ ಮಗಳು ಏಕ್ತಾ ಕಪೂರ್ ಅವರ ಕಾರಣದಿಂದಾಗಿ ಪ್ರಧಾನಿಯವರೊಂದಿಗೆ ಚಲನಚಿತ್ರವನ್ನು ನೋಡುತ್ತಿರುವುದು ಇದೇ ಮೊದಲು ಎಂದು ಹೆಮ್ಮೆ ಪಟ್ಟುಕೊಂಡರು.
ತೆರಿಗೆ ಮುಕ್ತ ಸಿನಿಮಾ
ಆಡಳಿತಾರೂಢ ಬಿಜೆಪಿ ಈ ಚಲನಚಿತ್ರವನ್ನು ಸಕ್ರಿಯವಾಗಿ ಪ್ರಚಾರ ಮಾಡಿದೆ, ಅದರ ಅನೇಕ ರಾಜ್ಯ ಸರ್ಕಾರಗಳು ಇದನ್ನು ತೆರಿಗೆ ಮುಕ್ತಗೊಳಿಸಿವೆ.
ಈ ಘಟನೆಯ ಸಮಯದಲ್ಲಿ ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದರು. ಅದರ ನಂತರ ಕೋಮು ಗಲಭೆಗಳು ನಡೆದವು ಮತ್ತು ಕೆಲವು ರೈಲು ಬೋಗಿಗಳಿಗೆ ಬೆಂಕಿ ಹಚ್ಚಿದ್ದಕ್ಕಾಗಿ ರಾಜ್ಯ ಪೊಲೀಸರು ಮುಸ್ಲಿಂ ಗುಂಪಿನ ಮೇಲೆ ಕೇಸ್ ದಾಖಲಿಸಿದ್ದರು. ಪೊಲೀಸರು ದೋಷಾರೋಪ ಪಟ್ಟಿ ಸಲ್ಲಿಸಿದ ಅನೇಕ ಆರೋಪಿಗ ಶಿಕ್ಷೆಗೆ ಗುರಿಯಾಗಿದ್ದರು.
ಕಾಂಗ್ರೆಸ್ ಮಿತ್ರ ಪಕ್ಷವಾದ ಆಗಿನ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್ ರಚಿಸಿದ ವಿಚಾರಣಾ ಆಯೋಗವು ಬೆಂಕಿ ಆಕಸ್ಮಿಕ ಎಂದು ಹೇಳಿದ್ದರಿಂದ ಈ ಘಟನೆಯು ದೊಡ್ಡ ರಾಜಕೀಯ ವಿವಾದ ಹುಟ್ಟುಹಾಕಿತ್ತು.