ನೀತಿ ಆಯೋಗ ಸಭೆ | 2047ರ ವೇಳೆಗೆ ಅಭಿವೃದ್ಧಿ ಹೊಂದಿದ ಭಾರತ: ಪ್ರಧಾನಿ
x

ನೀತಿ ಆಯೋಗ ಸಭೆ | 2047ರ ವೇಳೆಗೆ ಅಭಿವೃದ್ಧಿ ಹೊಂದಿದ ಭಾರತ: ಪ್ರಧಾನಿ


ʻಪ್ರತಿಯೊಬ್ಬ ಭಾರತೀಯನೂ 2047ರ ವೇಳೆಗೆ ಅಭಿವೃದ್ಧಿ ಹೊಂದಿದ ದೇಶವನ್ನು ನೋಡಲು ಬಯಸುತ್ತಾನೆ. ರಾಜ್ಯಗಳು ನೇರವಾಗಿ ಜನರೊಂದಿಗೆ ಸಂಪರ್ಕ ಹೊಂದಿರುವುದರಿಂದ, ಇದನ್ನು ಸಾಧಿಸಲು ಸಕ್ರಿಯ ಪಾತ್ರ ವಹಿಸಬಹುದು,ʼ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಶನಿವಾರ (ಜುಲೈ 27) ನೀತಿ ಆಯೋಗದ 9 ನೇ ಆಡಳಿತ ಮಂಡಳಿ ಸಭೆಯಲ್ಲಿ ಅವರು ಮಾತನಾಡಿ, ʻ2047 ದೇಶದ ಸ್ವಾತಂತ್ರ್ಯದ ಶತಮಾನೋತ್ಸವ ವರ್ಷ ಆಗಿರಲಿದೆ. ವಿಕಸಿತ ಭಾರತವು ಪ್ರತಿಯೊಬ್ಬ ದೇಶವಾಸಿಯ ಮಹತ್ವಾಕಾಂಕ್ಷೆಯಾಗಿದೆ. ರಾಜ್ಯಗಳು ಈ ಪ್ರಕ್ರಿಯೆಯಲ್ಲಿ ಸಕ್ರಿಯ ಪಾತ್ರ ವಹಿಸಬಹುದು,ʼ ಎಂದು ಹೇಳಿದರು.

ʻನಾವು ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದ್ದೇವೆ. ಶತಮಾನಕ್ಕೆ ಒಮ್ಮೆ ಬರುವ ಸಾಂಕ್ರಾಮಿಕ ರೋಗವನ್ನು ಸೋಲಿಸಿದ್ದೇವೆ. ನಮ್ಮ ಜನ ಉತ್ಸಾಹ ಮತ್ತು ಆತ್ಮವಿಶ್ವಾಸದಿಂದ ತುಂಬಿದ್ದಾರೆ. ಎಲ್ಲಾ ರಾಜ್ಯಗಳ ಸಂಯೋಜಿತ ಪ್ರಯತ್ನದಿಂದ ನಾವು ವಿಕಸಿತ ಭಾರತದ ಕನಸನ್ನು ನನಸಾಗಿಸಬಹುದು. ವಿಕಸಿತ ರಾಜ್ಯಗಳಿಂದ ವಿಕಸಿತ ಭಾರತ ಹೊಮ್ಮುತ್ತದೆ,ʼ ಎಂದರು.

ನೀತಿ ಆಯೋಗದ ಕಾರ್ಯಸೂಚಿ

ಪ್ರಧಾನಿ ಮುಖ್ಯಸ್ಥರಾಗಿರುವ ನೀತಿ ಆಯೋಗದ ಮಂಡಳಿಯಲ್ಲಿ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿ ಗಳು, ಕೇಂದ್ರಾಡಳಿತ ಪ್ರದೇಶಗಳ ಲೆಫ್ಟಿನೆಂಟ್ ಗವರ್ನರ್‌ಗಳು ಮತ್ತು ಹಲವಾರು ಕೇಂದ್ರ ಸಚಿವರು ಇರುತ್ತಾರೆ. ಇಂದಿನ ಸಭೆಯು 2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡುವ ಕುರಿತು ಚರ್ಚಿಸುವ ಉದ್ದೇಶ ಹೊಂದಿತ್ತು.

Read More
Next Story