ಚುನಾವಣಾ ಬಾಂಡ್‌: ಪ್ರಧಾನಿ ಸಮರ್ಥನೆ
x

ಚುನಾವಣಾ ಬಾಂಡ್‌: ಪ್ರಧಾನಿ ಸಮರ್ಥನೆ


ಚುನಾವಣೆ ಬಾಂಡ್‌ಗಳಿಂದಾಗಿ ಹಣದ ಮೂಲವನ್ನು ಕಂಡುಹಿಡಿಯಬಹುದು ಎಂದು ಪ್ರಧಾನಿ ಯೋಜನೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಫೆಬ್ರವರಿ 15 ರಂದು ಸುಪ್ರೀಂ ಕೋರ್ಟ್ ಬಾಂಡ್‌ಗಳನ್ನುಅಸಾಂವಿಧಾನಿಕ ಎಂದು ವಜಾಗೊಳಿಸಿತ್ತು. ಭಾನುವಾರ (ಮಾರ್ಚ್ 31) ಪ್ರಸಾರವಾದ ತಂತಿ ಟಿವಿಗೆ ನೀಡಿದ ಸಂದರ್ಶನದಲ್ಲಿ ಮೋದಿ, ʻಯಾವುದೂ ಪರಿಪೂರ್ಣವಲ್ಲ. ಅಪೂರ್ಣತೆಗಳನ್ನು ಪರಿಹರಿಸಬಹುದುʼ ಎಂದರು. ʻಚುನಾವಣೆ ಬಾಂಡ್‌ಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವವರು ಶೀಘ್ರದಲ್ಲೇ ಪಶ್ಚಾತ್ತಾಪ ಪಡುತ್ತಾರೆ. ಅದನ್ನು ಹಿನ್ನಡೆ ಎಂದು ಏಕೆ ಭಾವಿಸಬೇಕು?ʼ ಎಂದು ಟೀಕಿಸಿದರು.

ನ್ಯಾಯಾಲಯದ ಆದೇಶ: ಫೆಬ್ರವರಿ 15 ರಂದು ಸುಪ್ರೀಂ ಕೋರ್ಟ್ 2018 ರಲ್ಲಿ ಪರಿಚಯಿಸಿದ ಚುನಾವಣೆ ಬಾಂಡ್‌ ಯೋಜನೆಯನ್ನು ಅಸಾಂವಿಧಾನಿಕ ಎಂದು ಹೇಳಿತು. ಏಪ್ರಿಲ್ 2019 ರಿಂದ ಖರೀದಿಸಿದ ಮತ್ತು ಎನ್‌ಕ್ಯಾಶ್ ಮಾಡಿದ ಎಲ್ಲಾ ಬಾಂಡ್‌ಗಳ ವಿವರಗಳನ್ನು ಬಹಿರಂಗಪಡಿಸುವಂತೆ ಎಸ್‌ ಬಿಐ ಮತ್ತು ಚುನಾವಣೆ ಆಯೋಗಕ್ಕೆ ನಿರ್ದೇಶನ ನೀಡಿತು. ಆಡಳಿತಾರೂಢ ಬಿಜೆಪಿ ಈ ಯೋಜನೆ ಮೂಲಕ ಕಾರ್ಪೊರೇಟ್‌ ಕಂಪನಿ ಗಳಿಂದ ಅತಿ ಹೆಚ್ಚು ಹಣ ಸಂಗ್ರಹಿಸಿದೆ ಎಂದು ತಿಳಿದುಬಂದಿದೆ. ಕಾರ್ಪೊರೇಟ್‌ ಸಂಸ್ಥೆಗಳ ಮೇಲೆ ಐಟಿ, ಇಡಿ ಮತ್ತು ಸಿಬಿಐ ದಾಳಿ ಮತ್ತು ಆ ಕಂಪನಿಗಳು ಬಿಜೆಪಿಗೆ ಬಾಂಡ್‌ಗಳ ಮೂಲಕ ದೇಣಿಗೆ ನೀಡುವಿಕೆ ನಡುವಿನ ಸಂಬಂಧದ ಬಗ್ಗೆ ವಿರೋಧ ಪಕ್ಷಗಳು ಪ್ರತಿಭಟನೆ ನಡೆಸುತ್ತಿವೆ.

Read More
Next Story