ಪ್ರಧಾನಿ ಧ್ಯಾನ ಅಂತ್ಯ: ತಿರುವಳ್ಳುವರ್‌ಗೆ ಪುಷ್ಪ ನಮನ ಸಲ್ಲಿಕೆ
x

ಪ್ರಧಾನಿ ಧ್ಯಾನ ಅಂತ್ಯ: ತಿರುವಳ್ಳುವರ್‌ಗೆ ಪುಷ್ಪ ನಮನ ಸಲ್ಲಿಕೆ


ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಕನ್ಯಾಕುಮಾರಿಯ ವಿವೇಕಾನಂದ ಸ್ಮಾರಕದಲ್ಲಿ ತಮ್ಮ 45 ಗಂಟೆಗಳ ಧ್ಯಾನವನ್ನು ಮುಕ್ತಾಯಗೊಳಿಸಿದರು. ಆನಂತರ ತಮಿಳು ಸಂತ ಕವಿ ತಿರುವಳ್ಳುವರ್ ಅವರಿಗೆ ಪುಷ್ಪ ನಮನ ಸಲ್ಲಿಸಿದರು.

ಧ್ಯಾನವನ್ನು ಮುಕ್ತಾಯಗೊಳಿಸಿದ ಅವರು ಬಿಳಿ ವಸ್ತ್ರವನ್ನು ಧರಿಸಿ, ವಿವೇಕಾನಂದ ಸ್ಮಾರಕದ ಪಕ್ಕದಲ್ಲಿರುವ 133 ಅಡಿ ಎತ್ತರದ ತಿರುವಳ್ಳು ವರ್ ಪ್ರತಿಮೆಗೆ ಬೃಹತ್ ಹಾರವನ್ನು ಹಾಕಿದರು. ದೋಣಿ ಮೂಲಕ ಪ್ರತಿಮೆ ಸಂಕೀರ್ಣಕ್ಕೆ ಆಗಮಿಸಿದ್ದ ಅವರು ದೋಣಿ ಮೂಲಕವೇ ದಡವನ್ನು ತಲುಪಿದರು.

ಧ್ಯಾನದಲ್ಲಿ ನಿರತರಾಗಿದ್ದಾಗ ಪ್ರಧಾನಿ ಅವರು ಕೇಸರಿ ವಸ್ತ್ರ ಧರಿಸಿದ್ದರು. ಕನ್ಯಾಕುಮಾರಿಯು ಸೂರ್ಯೋದಯ ಮತ್ತು ಸೂರ್ಯಾಸ್ತಕ್ಕೆ ಹೆಸರುವಾಸಿಯಾಗಿದೆ. ವಿವೇಕಾನಂದ ಸ್ಮಾರಕ ತೀರದ ಸಮೀಪವಿರುವ ಸಣ್ಣ ದ್ವೀಪದಲ್ಲಿದೆ. ಈ ಸ್ಮಾರಕದಲ್ಲಿ, ಪ್ರಧಾನಮಂತ್ರಿಯವರು ಮೇ 30 ರ ಸಂಜೆಯಿಂದ 45 ಗಂಟೆಗಳ ಸುದೀರ್ಘ ಧ್ಯಾನ ಕೈಗೊಂಡಿದ್ದರು.

Read More
Next Story