ನೀತಿ ಆಯೋಗದ ಸಭೆ; ಮಮತಾ ಹಾಜರು, ನಿತೀಶ್ ಕುಮಾರ್ ಗೈರು
x

ನೀತಿ ಆಯೋಗದ ಸಭೆ; ಮಮತಾ ಹಾಜರು, ನಿತೀಶ್ ಕುಮಾರ್ ಗೈರು


ಪ್ರಧಾನಿ ನರೇಂದ್ರ ಮೋದಿ ಅವರು ನೀತಿ ಆಯೋಗದ 9 ನೇ ಆಡಳಿತ ಮಂಡಳಿ ಸಭೆಯ ಅಧ್ಯಕ್ಷತೆಯನ್ನು ಶನಿವಾರ (ಜುಲೈ 27) ವಹಿಸಿದ್ದರು.

ಮಂಡಳಿಯು ನೀತಿ ಆಯೋಗದ ಅತ್ಯುನ್ನತ ಸಂಸ್ಥೆಯಾಗಿದ್ದು, ಮುಖ್ಯಮಂತ್ರಿಗಳು, ಕೇಂದ್ರಾಡಳಿತ ಪ್ರದೇಶಗಳ ಲೆಫ್ಟಿನೆಂಟ್ ಗವರ್ನರ್‌ಗಳು ಮತ್ತು ಹಲವಾರು ಕೇಂದ್ರ ಮಂತ್ರಿಗಳನ್ನು ಒಳಗೊಂಡಿದೆ. ಪ್ರಧಾನಿ ಆಯೋಗದ ಅಧ್ಯಕ್ಷರಾಗಿರುತ್ತಾರೆ.

ನಿತೀಶ್ ಕುಮಾರ್ ಸಭೆಗೆ ಗೈರು: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಸಭೆಗೆ ಹಾಜರಾಗಿಲ್ಲ. ಉಪ ಮುಖ್ಯಮಂತ್ರಿಗಳಾದ ಸಾಮ್ರಾಟ್ ಚೌಧರಿ ಮತ್ತು ವಿಜಯ್ ಕುಮಾರ್ ಸಿನ್ಹಾ ರಾಜ್ಯವನ್ನು ಪ್ರತಿನಿಧಿಸಿದ್ದರು ಎಂದು ಅವರು ಹೇಳಿದರು.‌ ನಿತೀಶ್ ಗೈರುಹಾಜರಿಗೆ ಕಾರಣ ತಿಳಿದುಬಂದಿಲ್ಲ.

ʻನೀತಿ ಆಯೋಗದ ಸಭೆಗೆ ಸಿಎಂ ಗೈರಾಗುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಹಾಜರಾಗಿರಲಿಲ್ಲ; ಅಂದಿನ ಉಪ ಸಿಎಂ ಪ್ರತಿನಿಧಿಸಿದ್ದರು. ಈ ಬಾರಿಯೂ ಇಬ್ಬರೂ ಡಿಸಿಎಂಗಳು ಸಭೆಯಲ್ಲಿ ಪಾಲ್ಗೊಂಡಿದ್ದರು,ʼ ಎಂದು ಜೆಡಿಯು ವಕ್ತಾರ ನೀರಜ್ ಕುಮಾರ್ ತಿಳಿಸಿದರು.

ʻಬಿಹಾರದ ನಾಲ್ವರು ಕೇಂದ್ರ ಸಚಿವರು ಆಯೋಗದ ಸದಸ್ಯರಾಗಿದ್ದು, ಅವರು ಸಭೆಯಲ್ಲಿ ಉಪಸ್ಥಿತರಿರುತ್ತಾರೆ. ಈ ಬಗ್ಗೆ ಹೇಳಲು ಏನೂ ಇಲ್ಲ,ʼ ಎಂದು ಹೇಳಿದರು.

ಸಭೆಯಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಭಾಗವಹಿಸುತ್ತಿದ್ದಾರೆ.

Read More
Next Story