ಶಾಸಕರನ್ನು ಮೇಕೆಗಳಂತೆ ಖರೀದಿಸುವ ಮೋದಿ, ಕೊಬ್ಬಿಸಿ ಹಬ್ಬ ಮಾಡುತ್ತಾರೆ; ಖರ್ಗೆ ಲೇವಡಿ
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು 'ಮುಖ್ ಮೇ ರಾಮ್, ಬಗಲ್ ಮೇ ಚುರಿ' (ಕುರಿಮರಿಯ ಉಡುಪಿನಲ್ಲಿರುವ ತೋಳ) ಎಂದು ಖರ್ಗೆ ಹೇಳಿದರು
ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ಮುಂದುವರಿಸಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ. ಚುನಾಯಿತ ಜನಪ್ರತಿನಿಧಿಗಳನ್ನು ಮೇಕೆಗಳಂತೆ ಖರೀದಿ ಮಾಡಿ ಕೊಬ್ಬಿಸಿ ಹಬ್ಬ ಮಾಡುತ್ತಾರೆ ಎಂದು ಲೇವಡಿ ಮಾಡಿದರು. ಪ್ರತಿಪಕ್ಷಗಳ ಮೇಲೆ ಮೋದಿ ಸರ್ಕಾರದ ದಬ್ಬಾಳಿಕೆ ನಿರಂತರ ಎಂಬುದಾಗಿಯೂ ಆರೋಪಿಸಿದರು.
ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕೇಂದ್ರ ಸರ್ಕಾರವನ್ನು "ಅದಾನಿ ಮತ್ತು ಅಂಬಾನಿ" ಜೊತೆ ಸೇರಿಕೊಂಡು ನಡೆಸುತಿದ್ದಾರೆ ಎಂದು ಆರೋಪಿಸಿದರು.
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು 'ಮುಖ್ ಮೇ ರಾಮ್, ಬಗಲ್ ಮೇ ಚುರಿ' (ಕುರಿಮರಿಯ ಉಡುಪಿನಲ್ಲಿರುವ ತೋಳ) ಎಂದು ಖರ್ಗೆ ಅವರು ವ್ಯಂಗ್ಯ ಮಾಡಿದರು.
“ಮೋದಿ ಅವರು ಸರ್ಕಾರಗಳನ್ನು ಬೀಳಿಸುವುದರಲ್ಲಿ ನಿಸ್ಸೀಮರು. ಅವರು ಶಾಸಕರನ್ನು ಖರೀದಿಸುತ್ತಾರೆ. ಅವರಿಗೆ ಆಹಾರ ನೀಡುತ್ತಾರೆ ಕೊಬ್ಬಿದ ಮೇಲೆ ಹಬ್ಬ ಮಾಡುತ್ತಾರೆ,ʼʼ ಎಂದು ಖರ್ಗೆ ಆರೋಪಿಸಿದರು.
ಮೋದಿ ಮತ್ತು ಶಾ ವಿರೋಧ ಪಕ್ಷದ ನಾಯಕರ ವಿರುದ್ಧ ಇಡಿ, ಸಿಬಿಐ ಮತ್ತು ಇತರ ಕೇಂದ್ರೀಯ ಸಂಸ್ಥೆಗಳನ್ನು ಛೂ ಬಿಡುತ್ತಾರೆ. ನಾವು ಅದಕ್ಕೆ ಹೆದರುವುದಿಲ್ಲ. ನಾವು ಸ್ವಾತಂತ್ರ್ಯಕ್ಕಾಗಿ ಹೋರಾಡಿದವರು. ಪ್ರಾಣ ತ್ಯಾಗ ಮಾಡಿದವರು ಎಂದು ಖರ್ಗೆ ಹೇಳಿದರು.
ನಾಲ್ಕು ಜನರ ಕೈಯಲ್ಲಿ ಭಾರತದ ನಿಯಂತ್ರಣ
"ಮೋದಿ, ಶಾ, ಅದಾನಿ ಮತ್ತು ಅಂಬಾನಿ ದೇಶವನ್ನು ನಡೆಸುತ್ತಿದ್ದಾರೆ, ಆದರೆ ರಾಹುಲ್ ಗಾಂಧಿ ಮತ್ತು ನಾವು ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ಉಳಿಸಲು ಪ್ರಯತ್ನಿಸುತ್ತಿದ್ದೇವೆ" ಎಂದು ಅವರು ಹೇಳಿದರು.
ನಾವು 25 ವರ್ಷಗಳಿಂದ ಸಿಎಂ ಮತ್ತು ಪ್ರಧಾನಿಯಾಗಿ ಮೋದಿಯನ್ನು ಸಹಿಸಿಕೊಂಡು ಬಂದಿದ್ದೇವೆ. ಹಿಂದುಳಿದ ವರ್ಗದ ಜನರು ಮತ್ತು ಮಹಿಳೆಯರನ್ನು ಶೋಷಿಸುವವರನ್ನು ಮೋದಿ ಬೆಂಬಲಿಸುತ್ತಾರೆ. ಮಣಿಪುರಕ್ಕೆ ಭೇಟಿ ನೀಡಲು ಪ್ರಧಾನಿ ಮೋದಿ ಹೆದರುತ್ತಾರೆ. ನಾನು ಅವರಿಗೆ ಅಲ್ಲಿಗೆ ಹೋಗಲು ಧೈರ್ಯ ಮಾಡುತ್ತೇನೆ ಎಂದು ಕಾಂಗ್ರೆಸ್ ಅಧ್ಯಕ್ಷರು ಹೇಳಿದರು.