Physical Abuse: ದೆಹಲಿಯಲ್ಲಿ ಬ್ರಿಟನ್ ಮಹಿಳೆ ಮೇಲೆ ಅತ್ಯಾಚಾರ; ಹಂಪಿಯ ಘಟನೆ ಬೆನ್ನಲ್ಲೇ ಮತ್ತೊಂದು ಕೃತ್ಯ
x

Physical Abuse: ದೆಹಲಿಯಲ್ಲಿ ಬ್ರಿಟನ್ ಮಹಿಳೆ ಮೇಲೆ ಅತ್ಯಾಚಾರ; ಹಂಪಿಯ ಘಟನೆ ಬೆನ್ನಲ್ಲೇ ಮತ್ತೊಂದು ಕೃತ್ಯ

ದೆಹಲಿಯ ಮಹಿಪಾಲ್ ಪುರದ ಒಂದು ಲಾಡ್ಜ್​​ನಲ್ಲಿ ಮಹಿಳೆಯ ಮೇಲೆ ಆಕೆಯ ಗೆಳೆಯ ಕೈಲಾಶ್ ಅತ್ಯಾಚಾರ ಮಾಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಬ್ರಿಟನ್ ಮಹಿಳೆ ಮತ್ತು ದೆಹಲಿಯ ಕೈಲಾಶ್ ಇಬ್ಬರೂ ಇನ್ಸ್ಟಾಗ್ರಾಮ್ ಮೂಲಕ ಪರಿಚಯವಾಗಿದ್ದರು.


ಹಂಪಿ ಸಮೀಪದ ಸಾಣಾಪುರ ಕೆರೆ ಬಳಿ ಇತ್ತೀಚೆಗೆ ಇಸ್ರೇಲ್​ ಮಹಿಳೆ ಸೇರಿದಂತೆ ಇಬ್ಬರ ಮೇಲಿನ (Hampi Horror) ಅತ್ಯಾಚಾರ ಪ್ರಕರಣದ (Physical Abuse) ಬೇಸರ ಮಾಸುವ ಮುನ್ನವೇ ಅಂಥದ್ದೇ ಒಂದು ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ. ಇನ್‌ಸ್ಟಾಗ್ರಾಮ್‌ ಮೂಲಕ ಪರಿಚಯಗೊಂಡ ವ್ಯಕ್ತಿಯನ್ನು ಭೇಟಿಯಾಗಲು ದೆಹಲಿಗೆ ಬಂದಿದ್ದ ಬ್ರಿಟನ್​ ಪ್ರಜೆಯೊಬ್ಬಳ ಮೇಲೆ ಅತ್ಯಾಚಾರ ನಡೆದಿದೆ. ಮಹಿಪಾಲಪುರದ ಹೋಟೆಲ್‌ನಲ್ಲಿ ಈ ಘಟನೆ ನಡೆದಿದ್ದು, ಆರೋಪಿ ಕೈಲಾಶ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಜತೆಗಾರ ವಾಸಿಮ್ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ.

ದೆಹಲಿಯ ಮಹಿಪಾಲ್​​ಪುರದ ಲಾಡ್ಜ್​​ನಲ್ಲಿ ಮಹಿಳೆಯ ಮೇಲೆ ಆಕೆಯ ಗೆಳೆಯ ಕೈಲಾಶ್ ಅತ್ಯಾಚಾರ ಮಾಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಬ್ರಿಟನ್ ಮಹಿಳೆ ಮತ್ತು ದೆಹಲಿಯ ಕೈಲಾಶ್ ಇಬ್ಬರೂ ಇನ್ಸ್ಟಾಗ್ರಾಮ್ ಮೂಲಕ ಪರಿಚಯವಾಗಿದ್ದರು. ಇತ್ತೀಚೆಗೆ ಮಹಿಳೆ ಮಹಾರಾಷ್ಟ್ರ ಮತ್ತು ಗೋವಾ ಪ್ರವಾಸಕ್ಕಾಗಿ ಭಾರತಕ್ಕೆ ಬಂದಿದ್ದರು. ಈ ಸಮಯದಲ್ಲಿ ಮಹಿಳೆ ಕೈಲಾಶ್​ಗೆ ಕರೆ ಮಾಡಿ, "ನೀನೂ ಬಾ" ಎಂದು ಹೇಳಿದ್ದರು. ಆದರೆ, ಕೈಲಾಶ್ ತನಗೆ ಬರಲು ಸಾಧ್ಯವಿಲ್ಲ ಎಂದು ಹೇಳಿ ಆಕೆಯನ್ನು ದೆಹಲಿಗೆ ಕರೆಸಿಕೊಂಡಿದ್ದ

ಬ್ರಿಟನ್​ ಮಹಿಳೆ ಇದ್ದ ಲಾಡ್ಜ್​ಗೆ ಕೈಲಾಶ್ ಮತ್ತು ಆತನ ಗೆಳೆಯ ವಾಸಿಂ ಹೋಗಿ ಆಕೆಯ ಮೇಲೆ ಬಲಾತ್ಕಾರ ಮಾಡಿದ್ದರು. ಮರುದಿನ ಬೆಳಗ್ಗೆ ವಸಂತ್ ಕುಂಜ್ ಪೊಲೀಸ್ ಠಾಣೆಗೆ ಹೋಗಿ ಮಹಿಳೆ ದೂರು ನೀಡಿದ್ದರು. ನಂತರ ಪೊಲೀಸರು ಶಿಷ್ಟಾಚಾರದಂತೆ ಬ್ರಿಟಿಷ್ ಹೈ ಕಮಿಷನ್ ಗೆ ಮಾಹಿತಿ ನೀಡಿ ಅಗತ್ಯ ನೆರವು ಕಲ್ಪಿಸಿದ್ದಾರೆ.

ಹಂಪಿಯಲ್ಲಿ ಏನಾಗಿತ್ತು?

ಇದೇ ರೀತಿಯ ಭೀಕರ ಘಟನೆ ಮಾರ್ಚ್ 6ರಂದು ತುಂಗಭದ್ರಾ ಎಡದಂಡೆ ಕಾಲುವೆ ಬಳಿ ನಡೆದಿತ್ತು. ತಡರಾತ್ರಿಯವರೆಗೆ ಸಂಗೀತ ಕೇಳುತ್ತಾ ಕುಳಿತುಕೊಂಡಿದ್ದ ಇಸ್ರೇಲಿ ಮಹಿಳೆ ಮತ್ತು ಹೋಮ್ ಸ್ಟೇ ಮಾಲಕಿ ಮೇಲೆ 3 ಜನರು ಹಲ್ಲೆ ನಡೆಸಿ ಸಾಮೂಹಿಕ ಅತ್ಯಾಚಾರ ನಡೆಸಿದ್ದರು. ಈ ವೇಳೆ ಸ್ಥಳದಲ್ಲಿದ್ದ ಇತರೆ ಮೂರು ಪುರುಷರ ಮೇಲೂ ಹಲ್ಲೆ ಮಾಡಿ ಕಾಲುವೆಗೆ ತಳ್ಳಿದ್ದರು. ಈ ಪೈಕಿ ಒಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದರು. ಮೃತರನ್ನು ಒರಿಸ್ಸಾ ಮೂಲದ ಬೀಬಾಷಾ ಎಂದು ಗುರುತಿಸಲಾಗಿದೆ. ಸ್ಥಳೀಯ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

Read More
Next Story