ಪೇಟಿಎಂಗೆ ಆರ್‌ಬಿಐ 15 ದಿನ ಗಡುವು
ಮುಂಬೈ, ಫೆಬ್ರವರಿ 16 : ಆರ್‌ಬಿಐ ಗ್ರಾಹಕರ ಖಾತೆಗಳು, ವ್ಯಾಲೆಟ್‌ಗಳು ಮತ್ತು ಫಾಸ್ಟ್‌ಟ್ಯಾಗ್‌ಗಳಲ್ಲಿ ಠೇವಣಿ, ಕ್ರೆಡಿಟ್ ವಹಿವಾಟುಗಳು ಅಥವಾ ಟಾಪ್ ಅಪ್‌ಗಳನ್ನು ನಿಲ್ಲಿಸಲು ಪೇಟಿಎಂ ಪೇಮೆಂಟ್ ಬ್ಯಾಂಕ್(ಪಿಪಿಬಿಎಲ್)ಗೆ ಮಾರ್ಚ್ 15, 2024 ರವರೆಗೆ ಗಡುವು ನೀಡಿದೆ. ವ್ಯಾಪಾರಿಗಳು ಸೇರಿದಂತೆ ಗ್ರಾಹಕರ ಹಿತಾಸಕ್ತಿಯನ್ನು ಪರಿಗಣಿಸಿ ಈ ಆದೇಶ ನೀಡಲಾಗಿದೆ.
ಜನವರಿ 31 ರ ಸೆಂಟ್ರಲ್ ಬ್ಯಾಂಕಿನ ಆದೇಶದ ಪ್ರಕಾರ, ಫೆಬ್ರವರಿ 29 ರ ನಂತರ ಯಾವುದೇ ಗ್ರಾಹಕರ ಖಾತೆಗಳು, ಪ್ರಿಪೇಯ್ಡ್ ಉಪಕರಣಗಳು, ವ್ಯಾಲೆಟ್‌ಗಳು, ಫಾಸ್ಟ್‌ಟ್ಯಾಗ್‌ಗಳು ಮತ್ತು ರಾಷ್ಟ್ರೀಯ ಸಾಮಾನ್ಯ ಮೊಬಿಲಿಟಿ ಕಾರ್ಡ್‌ಗಳಲ್ಲಿ ಹೆಚ್ಚಿನ ಠೇವಣಿ, ಕ್ರೆಡಿಟ್ ವಹಿವಾಟುಗಳು ಅಥವಾ ಟಾಪ್-ಅಪ್‌ಗಳನ್ನು ನಿಲ್ಲಿಸಲು ಪೇಟಿಎಂ ಗೆ ಸೂಚಿಸಲಾಗಿತ್ತು.
ಪಿಪಿಬಿಎಲ್ ನ ಗ್ರಾಹಕ (ವ್ಯಾಪಾರಿಗಳು ಸೇರಿದಂತೆ)ರಿಗೆ ಪರ್ಯಾಯ ವ್ಯವಸ್ಥೆಗಳನ್ನು ಮಾಡಲು ಹೆಚ್ಚು ಸಮಯ ಬೇಕಾಗಬಹುದು ಮತ್ತು ಸಾರ್ವಜನಿಕ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು ಅವಧಿ ವಿಸ್ತರಿಸಲಾಗಿದೆ ಎಂದು ಆರ್ಬಿಐ ಹೇಳಿದೆ.
ʻಅಂತಹ ಗ್ರಾಹಕರಿಗೆ ಯಾವುದೇ ಅನನುಕೂಲ ಆಗದಂತೆ ಸ್ವಯಂಚಾಲಿತ ಸ್ವೀಪ್-ಇನ್ ಸ್ವೀಪ್-ಔಟ್' ಸೌಲಭ್ಯದ ಅಡಿಯಲ್ಲಿ ಪಾಲುದಾರ ಬ್ಯಾಂಕ್‌ಗಳೊಂದಿಗೆ ನಿಲುಗಡೆ ಮಾಡಲಾದ ಗ್ರಾಹಕರ ಠೇವಣಿಗಳನ್ನು ತಡೆರಹಿತವಾಗಿ ಹಿಂತೆಗೆದುಕೊಳ್ಳಲು ಬ್ಯಾಂಕ್ ಅನುವು ಮಾಡಿಕೊಡುತ್ತದೆ ಎಂದು ರಿಸರ್ವ್ ಬ್ಯಾಂಕ್ ಹೇಳಿದೆ.
ಶುಕ್ರವಾರ ಆರ್‌ಬಿಐ ಪಿಪಿಬಿಎಲ್‌ನ ಗ್ರಾಹಕರು ಮತ್ತು ಸಾರ್ವಜನಿಕರ ಅನುಕೂಲಕ್ಕಾಗಿ ಪದೇಪದೇ ಕೇಳಲಾಗುವ ಪ್ರಶ್ನೆಗಳ (ಎಫ್‌ಎಕ್ಯೂ) ಪಟ್ಟಿಯನ್ನು ಬಿಡುಗಡೆ ಮಾಡಿದೆ.
ನೋಡಲ್ ಖಾತೆ ಎಕ್ಸಿಸ್ ಬ್ಯಾಂಕಿಗೆ ವರ್ಗಾವಣೆ: ಪೇಟಿಎಂ ಬ್ರ್ಯಾಂಡ್ ಮಾಲೀಕ ಸಂಸ್ಥೆಯಾದ ಫಿನ್‌ಟೆಕ್ ಕಂಪನಿ ಒನ್97 ಕಮ್ಯುನಿಕೇಷನ್ಸ್ ತನ್ನ ನೋಡಲ್ ಖಾತೆಯನ್ನು ಆಕ್ಸಿಸ್ ಬ್ಯಾಂಕ್‌ಗೆ ವರ್ಗಾಯಿಸಿದೆ. ಆರ್‌ಬಿಐ ನಿಗದಿಪಡಿಸಿದ ಮಾರ್ಚ್ 15 ರ ಗಡುವಿನ ನಂತರ ಪೇಟಿಎಂ ಕ್ಯುಆರ್, ಸೌಂಡ್‌ಬಾಕ್ಸ್, ಕಾರ್ಡ್ ನಿರಂತರತೆಯನ್ನು ಅನುಮತಿಸುತ್ತದೆ. ಮಾರ್ಚ್ 15 ರೊಳಗೆ ಪಿಪಿಬಿಎಲ್ ನ ಗ್ರಾಹಕರು ಮತ್ತು ವ್ಯಾಪಾರಿಗಳು ತಮ್ಮ ಖಾತೆಗಳನ್ನು ಇತರ ಬ್ಯಾಂಕ್‌ಗಳಿಗೆ ವರ್ಗಾಯಿಸಲು ಆರ್‌ಬಿಐ ಸಲಹೆ ನೀಡಿದೆ. ಠೇವಣಿ ಮತ್ತು ಕ್ರೆಡಿಟ್ ವಹಿವಾಟುಗಳು ಸೇರಿದಂತೆ ಹೆಚ್ಚಿನ ಕಾರ್ಯಾಚರಣೆಗಳನ್ನು ಮುಚ್ಚಲು 15 ದಿನ ಕಾಲಾವಕಾಶ ನೀಡಿದೆ. ʻಕಂಪನಿಯು ತನ್ನ ನೋಡಲ್ ಖಾತೆಯನ್ನು ಆಕ್ಸಿಸ್ ಬ್ಯಾಂಕ್(ಎಸ್ಕ್ರೊ ಖಾತೆ ತೆರೆಯುವ ಮೂಲಕ)ಗೆ ವರ್ಗಾಯಿಸಿದ್ದು, ತಡೆರಹಿತ ವಹಿವಾಟು ಮುಂದುವರಿಸಲು ಪ್ರಯತ್ನಿಸುತ್ತಿದೆ.
ʻಪೇಟಿಎಂನ ಪಾವತಿ ಸೇವೆಗಳು ಒನ್97 ಕಮ್ಯುನಿಕೇಷನ್ಸ್ ನ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾಗಿದ್ದು, ಈಗಾಗಲೇ ಆಕ್ಸಿಸ್ ಬ್ಯಾಂಕಿನ ಸೇವೆಗಳನ್ನು ಬಳಸುತ್ತಿದೆʼ ಎಂದು ಪೇಟಿಎಂ ತಿಳಿಸಿದೆ. ಎಫ್‌ಎಕ್ಯುಗಳ ಪಟ್ಟಿಯಲ್ಲಿರುವ ಆರ್‌ಬಿಐ ಪೇಟಿಎಂ ಕ್ಯುಆರ್ ಕೋಡ್, ಸೌಂಡ್‌ಬಾಕ್ಸ್ ಅಥವಾ ಪಿಒಎಸ್ ಟರ್ಮಿನಲ್ ನ್ನು ಪಿಪಿಬಿಎಲ್ ಬದಲಿಗೆ ಇತರ ಬ್ಯಾಂಕ್‌ಗಳಿಗೆ ಲಿಂಕ್ ಮಾಡಿದರೆ, ಮಾರ್ಚ್ 15 ರ ನಂತರ ಬಳಸಬಹುದು ಎಂದು ಸ್ಪಷ್ಟಪಡಿಸಿದೆ.