Paris Olympics 2024 | ಅಥ್ಲೀಟ್‌ಗಳ ಪರೇಡ್‌ನಲ್ಲಿ 78 ಸದಸ್ಯರ ಭಾರತೀಯ ತಂಡ
x

Paris Olympics 2024 | ಅಥ್ಲೀಟ್‌ಗಳ ಪರೇಡ್‌ನಲ್ಲಿ 78 ಸದಸ್ಯರ ಭಾರತೀಯ ತಂಡ

ಒಲಿಂಪಿಕ್ಸ್‌ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಉದ್ಘಾಟನಾ ಸಮಾರಂಭವು ಕ್ರೀಡಾಂಗಣದಲ್ಲಿ ನಡೆಯುತ್ತಿಲ್ಲ; ಬದಲಾಗಿ, ಸೀನ್ ನದಿಯ ದಡದಲ್ಲಿ ನಡೆಯಿತು.


ಪ್ಯಾರಿಸ್ ಒಲಿಂಪಿಕ್ಸ್‌ನ ಉದ್ಘಾಟನೆ ಸಮಾರಂಭದಲ್ಲಿ ಪಿ.ವಿ. ಸಿಂಧು ಮತ್ತು ಅಚಂತಾ ಶರತ್ ಕಮಲ್ ನೇತೃತ್ವದ ಅಥ್ಲೀಟ್‌ಗಳ ಪರೇಡ್‌ನಲ್ಲಿ 78 ಕ್ರೀಡಾಪಟುಗಳು ಮತ್ತು 12 ಕ್ರೀಡಾ ವಿಭಾಗಗಳ ಅಧಿಕಾರಿಗಳು ಇರುತ್ತಾರೆ.

ಸಮಾರಂಭಕ್ಕೆ ಲಭ್ಯವಿರುವ ಎಲ್ಲಾ ಕ್ರೀಡಾಪಟುಗಳು ಪರೇಡ್‌ನ ಭಾಗವಾಗಲಿದ್ದಾರೆ ಎಂದು ಭಾರತೀಯ ಒಲಿಂಪಿಕ್ ಸಂಸ್ಥೆ (ಐಒಎ) ತಿಳಿಸಿದೆ. ʻಐಒಎ ಅಧ್ಯಕ್ಷೆ ಪಿ.ಟಿ. ಉಷಾ ಮತ್ತು ಚೆಫ್ ಡಿ ಮಿಷನ್ ಗಗನ್ ನಾರಂಗ್ ಅವರು ಪರೇಡ್‌ನಲ್ಲಿ ಅಥ್ಲೀಟ್‌ಗಳಿಗೆ ಆದ್ಯತೆ ನೀಡಿದ್ದಾರೆ,ʼ ಐಒಎ ಹೇಳಿದೆ.

ʻಅನೇಕರು ಶನಿವಾರ ಸ್ಪರ್ಧೆಗಳನ್ನು ಹೊಂದಿದ್ದಾರೆ. ತಯಾರಿಗೆ ಆದ್ಯತೆ ನೀಡುವ ಮತ್ತು ಉದ್ಘಾಟನೆ ಸಮಾರಂಭದಲ್ಲಿ ಭಾಗವಹಿಸದಿರುವ ಅವರ ನಿರ್ಧಾರವನ್ನು ಐಒಎ ಗೌರವಿಸಿದೆ,ʼ ಎಂದು ಹೇಳಿದೆ. ಧ್ವಜಾರೋಹಣ ಮಾಡುವ ಸಿಂಧು ಮತ್ತು ಶರತ್ ಕಮಲ್ ಅವರಲ್ಲದೆ, ಪ್ರಮುಖ ಕ್ರೀಡಾಪಟುಗಳಾದ ಬಿಲ್ಲುಗಾರ್ತಿ ದೀಪಿಕಾ ಕುಮಾರಿ, ಬಾಕ್ಸರ್ ಲೊವ್ಲಿನಾ ಬೊರ್ಗೊಹೈನ್, ಟೇಬಲ್ ಟೆನಿಸ್ ಆಟಗಾರ್ತಿ ಮನಿಕಾ ಬಾತ್ರಾ ಮತ್ತು ಟೆನಿಸ್ ಆಟಗಾರ ರೋಹನ್ ಬೋಪಣ್ಣ ಪರೇಡಿನಲ್ಲಿ ಪಾಲ್ಗೊಳ್ಳಲಿದ್ದಾರೆ.

ರೋವರ್‌ ಬಾಲರಾಜ್‌ ಪನ್ವಾರ್‌ ಗೆ ಶನಿವಾರ ಬೆಳಗ್ಗೆ ಪಂದ್ಯವಿದೆ. ಟ್ರ್ಯಾಕ್ ಮತ್ತು ಫೀಲ್ಡ್, ವೇಟ್‌ಲಿಫ್ಟಿಂಗ್ ಮತ್ತು ಕುಸ್ತಿ ತಂಡಗಳು ಇನ್ನೂ ಪ್ಯಾರಿಸ್‌ ತಲುಪಬೇಕಿದೆ. ಭಾರತೀಯ ಪುರುಷರ ಹಾಕಿ ತಂಡವು ಶನಿವಾರ ನ್ಯೂಜಿಲೆಂಡ್ ವಿರುದ್ಧ ಪಂದ್ಯ ಆಡಲಿದೆ. ಹೀಗಾಗಿ ಮೂವರು ಮೀಸಲು ಆಟಗಾರರು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.

ಒಲಿಂಪಿಕ್ಸ್‌ ನಲ್ಲಿ ದೇಶದ 47 ಮಹಿಳೆಯರು ಸೇರಿದಂತೆ 117 ಕ್ರೀಡಾಪಟುಗಳು ಪಾಲ್ಗೊಂಡಿದ್ದಾರೆ.

ಒಲಿಂಪಿಕ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಉದ್ಘಾಟನಾ ಸಮಾರಂಭವು ಕ್ರೀಡಾಂಗಣದ ಬದಲು ಸೀನ್ ನದಿ ದಡದಲ್ಲಿ ನಡೆಯುತ್ತಿದೆ. ಸುಮಾರು 90 ದೋಣಿಗಳಲ್ಲಿ 6,500 ಕ್ಕೂ ಹೆಚ್ಚು ಕ್ರೀಡಾಪಟುಗಳು ಪ್ಯಾರಿಸ್ಸಿನ ಸಾಂಪ್ರದಾಯಿಕ ಸ್ಮಾರಕಗಳ ಹಿಂದೆ ನೌಕಾಯಾನ ಮಾಡುತ್ತಾರೆ.

ಉದ್ಘಾಟನೆ ಸಮಾರಂಭದಲ್ಲಿ ಭಾಗವಹಿಸುತ್ತಿರುವ ಭಾರತೀಯ ಆಟಗಾರರೆಂದರೆ, ಧ್ವಜಾರೋಹಣ: ಪಿವಿ ಸಿಂಧು (ಬ್ಯಾಡ್ಮಿಂಟನ್) ಮತ್ತು ಅಚಂತಾ ಶರತ್ ಕಮಲ್ (ಟೇಬಲ್ ಟೆನಿಸ್).

ಬಿಲ್ಲುಗಾರಿಕೆ: ದೀಪಿಕಾ ಕುಮಾರಿ ಮತ್ತು ತರುಣದೀಪ್ ರೈ. ಬಾಕ್ಸಿಂಗ್: ಲೊವ್ಲಿನಾ ಬೊರ್ಗೊಹೈನ್. ಟೇಬಲ್ ಟೆನಿಸ್: ಮನಿಕಾ ಬಾತ್ರಾ ಟೆನಿಸ್: ರೋಹನ್ ಬೋಪಣ್ಣ, ಸುಮಿತ್ ನಗಲ್ ಮತ್ತು ಶ್ರೀರಾಮ್ ಬಾಲಾಜಿ.ಶೂಟಿಂಗ್: ಅಂಜುಮ್ ಮೌದ್ಗಿಲ್, ಸಿಫ್ಟ್ ಕೌರ್ ಸಮ್ರಾ, ಐಶ್ವರಿ ಪ್ರತಾಪ್ ಸಿಂಗ್ ತೋಮರ್ ಮತ್ತು ಅನೀಶ್. ಈಕ್ವೆಸ್ಟ್ರಿಯನ್: ಅನುಷ್ ಅಗರ್ವಾಲಾ. ಗಾಲ್ಫ್: ಶುಭಂಕರ್ ಶರ್ಮಾ. ಹಾಕಿ: ಕ್ರಿಶನ್ ಪಾಠಕ್, ನೀಲಕಂಠ ಶರ್ಮಾ ಮತ್ತು ಜುಗ್ರಾಜ್ ಸಿಂಗ್. ಜೂಡೋ: ತುಲಿಕಾ ಮಾನ್. ಸೇಲಿಂಗ್: ವಿಷ್ಣು ಸರವಣನ್ ಮತ್ತು ನೇತ್ರಾ ಕುಮನನ್. ಈಜು: ಶ್ರೀಹರಿ ನಟರಾಜ್ ಮತ್ತು ಧಿನಿಧಿ ದೇಸಿಂಗು.

Read More
Next Story