
ಯೋಧ ಪೂರ್ಣಂ ಸಾಹು
ಪಾಕ್ ವಶದಲ್ಲಿದ್ದ ಬಿಎಸ್‌ಎಫ್ ಯೋಧ ಪೂರ್ಣಂ ಸಾಹು ಭಾರತಕ್ಕೆ ಹಸ್ತಾಂತರ
ಬುಧವಾರ ಬೆಳಿಗ್ಗೆ 10.30ರ ಸುಮಾರಿಗೆ ಪಾಕಿಸ್ತಾನದ ರೇಂಜರ್‌ಗಳು ಯೋಧ ಪೂರ್ಣಂ ಸಾಹು ಅವರನ್ನು ಬಿಎಸ್‌ಎಫ್ ಅಧಿಕಾರಿಗಳಿಗೆ ಒಪ್ಪಿಸಿದರು. ಈ ಹಸ್ತಾಂತರವು ಶಾಂತಿಯುತವಾಗಿ ಮತ್ತು ಉಭಯ ದೇಶಗಳ ಶಿಷ್ಟಾಚಾರಗಳಿಗೆ ಅನುಗುಣವಾಗಿ ನೆರವೇರಿತು.
ಕಳೆದ ಏಪ್ರಿಲ್ 23 ರಂದು ಆಕಸ್ಮಿಕವಾಗಿ ಅಂತರರಾಷ್ಟ್ರೀಯ ಗಡಿ ರೇಖೆಯನ್ನು ದಾಟಿದ್ದರಿಂದ ಪಾಕಿಸ್ತಾನದ ಸೇನೆ ವಶಕ್ಕೆ ಪಡೆದಿದ್ದ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಯೋಧ ಪೂರ್ಣಂ ಸಾಹು ಅವರನ್ನು ಪಾಕಿಸ್ತಾನವು ಭಾರತಕ್ಕೆ ಹಸ್ತಾಂತರಿಸಿದೆ.
ಪಂಜಾಬ್‌ನ ಅಟ್ಟಾರಿ-ವಾಘಾ ಗಡಿ ಮುಂಭಾಗದಲ್ಲಿ ಈ ಹಸ್ತಾಂತರ ಪ್ರಕ್ರಿಯೆ ನಡೆದಿದೆ ಎಂದು ಸೇನಾಪಡೆ ತಿಳಿಸಿದೆ.
ಬಿಎಸ್‌ಎಫ್ ವಕ್ತಾರರು ಮಾಹಿತಿ ನೀಡಿದ ಪ್ರಕಾರ, ಬುಧವಾರ ಬೆಳಿಗ್ಗೆ 10.30ರ ಸುಮಾರಿಗೆ ಪಾಕಿಸ್ತಾನದ ರೇಂಜರ್‌ಗಳು ಯೋಧ ಪೂರ್ಣಂ ಸಾಹು ಅವರನ್ನು ಬಿಎಸ್‌ಎಫ್ ಅಧಿಕಾರಿಗಳಿಗೆ ಒಪ್ಪಿಸಿದರು. ಈ ಹಸ್ತಾಂತರವು ಶಾಂತಿಯುತವಾಗಿ ಮತ್ತು ಉಭಯ ದೇಶಗಳ ಶಿಷ್ಟಾಚಾರಗಳಿಗೆ ಅನುಗುಣವಾಗಿ ನೆರವೇರಿತು ಎಂದು ಅವರು ತಿಳಿಸಿದ್ದಾರೆ.
ಫಿರೋಜ್‌ಪುರ ಜಿಲ್ಲೆಯ ಭಾರತ-ಪಾಕಿಸ್ತಾನ ಅಂತರರಾಷ್ಟ್ರೀಯ ಗಡಿಯಲ್ಲಿ, ಪಹಲ್ಗಾಮ್‌ನಲ್ಲಿ ಉಗ್ರರು ದಾಳಿ ನಡೆಸಿದ ಒಂದು ದಿನದ ನಂತರ, ಅಂದರೆ ಏಪ್ರಿಲ್ 23ರಂದು ರೇಂಜರ್‌ಗಳು ಪೂರ್ಣಂ ಸಾಹು ಅವರನ್ನು ಬಂಧಿಸಿದ್ದರು. ಇದೀಗ ಅವರನ್ನು ಸುರಕ್ಷಿತವಾಗಿ ಭಾರತಕ್ಕೆ ಹಸ್ತಾಂತರಿಸಲಾಗಿದೆ.