2026ರ ಪದ್ಮ ಪ್ರಶಸ್ತಿ ಘೋಷಣೆ|ಅಂಕೇಗೌಡ, ಡಾ. ಸುರೇಶ್‌, ಸುಶೀಲಮ್ಮಗೆ ಪದ್ಮಶ್ರೀ ಗೌರವ
x

2026ನೇ ಸಾಲಿನ ಪದ್ಮ ಪ್ರಶಸ್ತಿಗಳನ್ನು ಕೇಂದ್ರ ಸರ್ಕಾರ ಘೋಷಿಸಿದ್ದು, ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಧಕರ ಆರಂಭಿಕ ಪಟ್ಟಿ ಪ್ರಕಟವಾಗಿದೆ.

2026ರ ಪದ್ಮ ಪ್ರಶಸ್ತಿ ಘೋಷಣೆ|ಅಂಕೇಗೌಡ, ಡಾ. ಸುರೇಶ್‌, ಸುಶೀಲಮ್ಮಗೆ ಪದ್ಮಶ್ರೀ ಗೌರವ

ಸಾಹಿತ್ಯ, ಶಿಕ್ಷಣ, ಸಮಾಜಸೇವೆ ಹಾಗೂ ವೈದ್ಯಕೀಯ ಕ್ಷೇತ್ರದಲ್ಲಿ ಮಾಡಿದ ಅಪೂರ್ವ ಸಾಧನೆಗಾಗಿ ಕರ್ನಾಟಕದ ಮಂಡ್ಯ ಜಿಲ್ಲೆಯ ಅಂಕೇಗೌಡ, ದಾವಣಗೆರೆಯ ಡಾ. ಹಾನಗವಾಡಿ ಸುರೇಶ್‌, ಬೆಂಗಳೂರಿನ ಸುಮಂಗಲಿ ಸೇವಾಶ್ರಮದ ಎಸ್‌.ಜಿ. ಸುಶೀಲಮ್ಮಗೆ ಪದ್ಮಶ್ರೀ ಪ್ರಶಸ್ತಿ ಸಂದಿದೆ.


Click the Play button to hear this message in audio format

2026ನೇ ಸಾಲಿನ ಪದ್ಮ ಪ್ರಶಸ್ತಿಗಳನ್ನು ಕೇಂದ್ರ ಸರ್ಕಾರ ಘೋಷಿಸಿದೆ. ಕರ್ನಾಟಕದ ಮಂಡ್ಯ ಜಿಲ್ಲೆಯ ಪುಸ್ತಕ ಮನೆಯ ಅಂಕೇಗೌಡ, ದಾವಣಗೆರೆಯ ಖ್ಯಾತ ವೈದ್ಯ ಡಾ. ಸುರೇಶ್‌ ಹಾನಗವಾಡಿ, ಸುಮಂಗಲಿ ಸೇವಾಶ್ರಮದ ಎಸ್‌.ಜಿ ಸುಶೀಲಮ್ಮ ಸೇರಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಧಕರಿಗೆ ಕೇಂದ್ರ ಸರ್ಕಾರ ಪದ್ಮ ಪ್ರಶಸ್ತಿಗಳನ್ನು ಘೋಷಿಸಿದೆ.

ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಲ್ಲಿ ಒಂದಾಗಿರುವ ಈ ಗೌರವಕ್ಕೆ ಪಾತ್ರರಾದವರ ಸಂಪೂರ್ಣ ಮತ್ತು ಅಧಿಕೃತ ಪಟ್ಟಿಯನ್ನು ಸರ್ಕಾರ ಇಂದು ಸಂಜೆ ಬಿಡುಗಡೆ ಮಾಡಲಿದೆ. ಸದ್ಯ ಬಿಡುಗಡೆಯಾಗಿರುವ ಆರಂಭಿಕ ಪಟ್ಟಿಯ ಪ್ರಕಾರ, ಸಾಹಿತ್ಯ, ಶಿಕ್ಷಣ, ಸಮಾಜ ಸೇವೆ, ವೈದ್ಯಕೀಯ ಮತ್ತು ಕಲೆ ಸೇರಿದಂತೆ ಹಲವು ಕ್ಷೇತ್ರಗಳ ಸಾಧಕರಿಗೆ ಪ್ರತಿಷ್ಠಿತ ಗೌರವ ನೀಡಲಾಗಿದೆ.

ವಿಶೇಷವಾಗಿ ಸಾಹಿತ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಅಪೂರ್ವ ಸಾಧನೆಗಾಗಿ ಮಂಡ್ಯ ಜಿಲ್ಲೆಯ ಅಂಕೇಗೌಡ ಅವರು ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇವರೊಂದಿಗೆ ಬ್ರಜಲಾಲ್ ಭಟ್, ಬುಧರಿ ತಾತಿ, ಭಗವಾನ್ ದಾಸ್ ರಾಯಕ್ವಾರ್, ಧಾರ್ಮಿಕ ಲಾಲ್ ಚುನ್ನಿ ಲಾಲ್ ಪಾಂಡ್ಯ, ಡಾ. ಶ್ಯಾಮ್ ಸುಂದರ್, ಚರಣ್ ಹೇಂಬ್ರಮ್ ಮತ್ತು ಕೆ. ಪಾಜನಿವೇಲ್ ಅವರಿಗೆ ‌ಪ್ರಶಸ್ತಿ ಸಂದಿದೆ.

ಪಟ್ಟಿಯಲ್ಲಿರುವ ಇತರ ಪ್ರಮುಖ ಸಾಧಕರು

ಪದ್ಮಶ್ರೀ 2026ರ ಪಟ್ಟಿಯಲ್ಲಿ ತಮಿಳುನಾಡಿನ ಡಾ. ಪುನ್ನಿಯಾಮೂರ್ತಿ ನಟೇಶನ್, ರಾಜಸ್ಥಾನದ ಗಫ್ರುದ್ದೀನ್ ಮೇವತಿ, ಮಹಾರಾಷ್ಟ್ರದ ಡಾ. ಆರ್ಮಿಡಾ ಫೆರ್ನಾಂಡಿಸ್ ಮತ್ತು ಭಿಕಲ್ಯಾ ಲಾಡಕ್ಯಾ ಧಿಂದಾ, ಉತ್ತರ ಪ್ರದೇಶದ ಚಿರಂಜಿ ಲಾಲ್ ಯಾದವ್, ತೆಲಂಗಾಣದ ಡಾ. ಕುಮಾರಸ್ವಾಮಿ ತಂಗರಾಜ್ ಮತ್ತು ಜಮ್ಮು-ಕಾಶ್ಮೀರದ ಡಾ. ಪದ್ಮಾ ಗುರ್ಮೆಟ್ ಅವರ ಹೆಸರುಗಳು ಇವೆ.

2026ರ ಪದ್ಮ ಪ್ರಶಸ್ತಿ ಪುರಸ್ಕೃತರ ಪೂರ್ಣ ಪಟ್ಟಿ

ಅಂಕೇಗೌಡ, ಆರ್ಮಿಡಾ ಫೆರ್ನಾಂಡಿಸ್, ಭಗವಾನ್ ದಾಸ್ ರಾಯಕ್ವಾರ್, ಭಿಕಲ್ಯಾ ಲಾಡಕ್ಯಾ ಧಿಂದಾ, ಬ್ರಜಲಾಲ್ ಭಟ್, ಬುಧರಿ ತಾತಿ, ಚರಣ್ ಹೇಂಬ್ರಮ್, ಚಿರಂಜಿ ಲಾಲ್ ಯಾದವ್, ಧಾರ್ಮಿಕ ಲಾಲ್ ಚುನ್ನಿ ಲಾಲ್ ಪಾಂಡ್ಯ, ಗಫ್ರುದ್ದೀನ್ ಮೇವತಿ ಜೋಗಿ, ಹೈಲಿ ವಾರ್, ಇಂದರ್ಜೀತ್ ಸಿಂಗ್ ಸಿದ್ಧು, ಕೆ. ಪಾಜನಿವೇಲ್, ಕೈಲಾಶ್ ಚಂದ್ರ ಪಂತ್, ಖೇಮ್ ರಾಜ್ ಸುಂದ್ರಿಯಾಲ್, ಕೊಲ್ಲಕ್ಕಾಯಿಲ್ ದೇವಕಿ ಅಮ್ಮಾ ಜಿ, ಕುಮಾರಸ್ವಾಮಿ ತಂಗರಾಜ್, ಮಹೇಂದ್ರ ಕುಮಾರ್ ಮಿಶ್ರಾ, ಮೀರ್ ಹಾಜಿಭಾಯಿ ಕಾಸಂಭಾಯಿ, ಮೋಹನ್ ನಗರ್, ನರೇಶ್ ಚಂದ್ರ ದೇವ್ ವರ್ಮಾ, ನಿಲೇಶ್ ವಿನೋದಚಂದ್ರ ಮಂಡಲವಾಲಾ, ನೂರುದ್ದೀನ್ ಅಹ್ಮದ್, ಓದುವಾರ್ ತಿರುತಾನಿ ಸ್ವಾಮಿನಾಥನ್, ಪದ್ಮಾ ಗುರ್ಮೆಟ್, ಪೊಖಿಲಾ ಲೇಕ್ತೆಪಿ, ಪುನ್ನಿಯಾಮೂರ್ತಿ ನಟೇಶನ್, ಆರ್. ಕೃಷ್ಣನ್, ರಘುಪತ್ ಸಿಂಗ್, ರಘುವೀರ್ ತುಕಾರಾಂ ಖೇಡ್ಕರ್, ರಾಜಸ್ಥಾಪತಿ ಕಾಳಿಯಪ್ಪ ಗೌಂಡರ್, ರಾಮಾ ರೆಡ್ಡಿ ಮಾಮಿಡಿ, ರಾಮಚಂದ್ರ ಗೋಡ್ಬೋಲೆ ಮತ್ತು ಸುನೀತಾ ಗೋಡ್ಬೋಲೆ, ಎಸ್. ಜಿ. ಸುಶೀಲಾ ಅಮ್ಮ, ಸಾಂಗ್ಯುಸಾಂಗ್ ಎಸ್. ಪೊಂಗೆನರ್, ಶಫಿ ಶೌಕ್, ಶ್ರೀರಂಗ್ ದೇವಬಾ ಲಾಡ್, ಶ್ಯಾಮ್ ಸುಂದರ್, ಸಿಮಾಂಚಲ್ ಪಾತ್ರೋ, ಸುರೇಶ್ ಹನಗವಾಡಿ, ತಗಾ ರಾಮ್ ಭೀಲ್, ತೇಚಿ ಗುಬಿನ್, ತಿರುವಾರೂರು ಭಕ್ತವತ್ಸಲಂ, ವಿಶ್ವ ಬಂಧು, ಯುಮ್ನಾಮ್ ಜಾತ್ರಾ ಸಿಂಗ್.

ಪ್ರತಿ ವರ್ಷ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಘೋಷಿಸುವ ಪದ್ಮ ಪ್ರಶಸ್ತಿಗಳು (ಪದ್ಮ ವಿಭೂಷಣ, ಪದ್ಮ ಭೂಷಣ ಮತ್ತು ಪದ್ಮಶ್ರೀ) ಭಾರತದ ಅತ್ಯುನ್ನತ ನಾಗರಿಕ ಗೌರವಗಳಾಗಿವೆ. 1954ರಲ್ಲಿ ಸ್ಥಾಪನೆಯಾದ ಈ ಪ್ರಶಸ್ತಿಗಳನ್ನು ಕಲೆ, ಸಾಹಿತ್ಯ, ಕ್ರೀಡೆ, ವೈದ್ಯಕೀಯ, ಸಮಾಜ ಸೇವೆ ಸೇರಿದಂತೆ ವಿವಿಧ ರಂಗಗಳಲ್ಲಿ ಅಸಾಧಾರಣ ಸಾಧನೆ ಮಾಡಿದವರಿಗೆ ನೀಡಲಾಗುತ್ತದೆ. ಸರ್ಕಾರಿ ನೌಕರರು (ವೈದ್ಯರು ಮತ್ತು ವಿಜ್ಞಾನಿಗಳನ್ನು ಹೊರತುಪಡಿಸಿ) ಈ ಪ್ರಶಸ್ತಿಗೆ ಅರ್ಹರಾಗಿರುವುದಿಲ್ಲ.

Read More
Next Story