‘ಜೈ ಪ್ಯಾಲೆಸ್ತೀನ್’  ಘೋಷಣೆ ಕೂಗಿದ ಒವೈಸಿ
x

‘ಜೈ ಪ್ಯಾಲೆಸ್ತೀನ್’ ಘೋಷಣೆ ಕೂಗಿದ ಒವೈಸಿ


ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಅವರು ಲೋಕಸಭೆಯಲ್ಲಿ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದ ನಂತರ ʻಜೈ ಪ್ಯಾಲೆಸ್ತೀನ್ʼ ಎಂದು ಘೋಷಣೆ ಕೂಗಿದರು. ಆದರೆ, ಇದಕ್ಕೆ ಕೆಲವು ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಹಂಗಾಮಿ ಸ್ಪೀಕರ್ ಅದನ್ನು ಕಡತದಲ್ಲಿ ದಾಖಲಿಸುವುದಿಲ್ಲ ಎಂದು ಹೇಳಿದರು.

ಹೈದರಾಬಾದ್‌ನಿಂದ ಲೋಕಸಭೆಗೆ ಸತತ ಐದನೇ ಬಾರಿ ಆಯ್ಕೆಯಾಗಿರುವ ಓವೈಸಿ, ಬಿಜೆಪಿಯ ಕೊಂಪೆಲ್ಲಾ ಮಾಧವಿಲತಾ ಅವರನ್ನು 3,38,087 ಮತಗಳಿಂದ ಸೋಲಿಸಿದ್ದಾರೆ.

ಘೋಷಣೆ, ಪ್ರತಿಘೋಷಣೆ: ಪ್ರಮಾಣವಚನ ಸ್ವೀಕಾರಕ್ಕೆ ಓವೈಸಿ ಅವರ ಹೆಸರು ಕರೆದಾಗ, ಬಿಜೆಪಿಯ ಕೆಲ ಸಂಸದರು ಜೈ ಶ್ರೀರಾಮ್ ಮತ್ತು ಭಾರತ್ ಮಾತಾ ಕಿ ಜೈ ಎಂದು ಕೂಗಿದರು. ಪ್ರಮಾಣವಚನ ಸ್ವೀಕರಿಸಿದ ನಂತರ ಓವೈಸಿ, ಜೈ ಭೀಮ್, ಜೈ ಪ್ಯಾಲೆಸ್ತೀನ್, ಜೈ ತೆಲಂಗಾಣ ಮತ್ತು ಅಲ್ಲಾಹು ಅಕ್ಬರ್ ಎಂದು ಘೋಷಣೆ ಕೂಗಿದರು.

ʻಜೈ ಪ್ಯಾಲೆಸ್ತೀನ್ʼ ಘೋಷಣೆಯನ್ನು ಕೆಲವು ಬಿಜೆಪಿ ನಾಯಕರು ವಿರೋಧಿಸಿದರು. ಅದು ದಾಖಲೆಯಾಗುವುದಿಲ್ಲ ಎಂದು ಹಂಗಾಮಿ ಸ್ಪೀಕರ್ ಹೇಳಿದರು.

Read More
Next Story