ಆಪರೇಷನ್ ಸಿಂಧೂರ್​ ಬಗ್ಗೆ ಹೇಳಿಕೆ; ಶಾಸಕ ಕೊತ್ತನೂರು ಮಂಜುನಾಥ್ ವಿರುದ್ಧ ದೂರು ದಾಖಲು
x

ಆಪರೇಷನ್ ಸಿಂಧೂರ್​ ಬಗ್ಗೆ ಹೇಳಿಕೆ; ಶಾಸಕ ಕೊತ್ತನೂರು ಮಂಜುನಾಥ್ ವಿರುದ್ಧ ದೂರು ದಾಖಲು

ಶಾಸಕರ ಈ ಹೇಳಿಕೆಯು ಭಾರತ ದೇಶಕ್ಕೆ ಮತ್ತು ಭಾರತೀಯ ಸೇನೆಗೆ ಕಳಂಕ ಹಚ್ಚುವ ಮಾತುಗಳನ್ನಾಡಿ ದೇಶದ್ರೋಹದ ಕಾರ್ಯವನ್ನು ಎಸಗಿದ್ದಾರೆ ಎಂದು ದೂರುದಾರರು ಆರೋಪಿಸಿದ್ದಾರೆ.


ಕೋಲಾರ ವಿಧಾನಸಭಾ ಕ್ಷೇತ್ರದ ಶಾಸಕ ಕೊತ್ತೂರು ಮಂಜುನಾಥ್ ಅವರು ಭಾರತೀಯ ಸೇನೆಯ "ಆಪರೇಷನ್ ಸಿಂಧೂರ್" ಕಾರ್ಯಾಚರಣೆಯ ಬಗ್ಗೆ ನೀಡಿದ ವಿವಾದಾತ್ಮಕ ಹೇಳಿಕೆಗೆ ಸಂಬಂಧಿಸಿದಂತೆ ಬನಶಂಕರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಬೆಂಗಳೂರು ನಾಗರಿಕ ಹಕ್ಕು ಹೋರಾಟ ಸಮಿತಿ (ರಿ) ಉಪಾಧ್ಯಕ್ಷರಾದ ಗಣೇಶ್ ಸಿಂಗ್ ಬಿ. ಅವರು ಈ ದೂರು ದಾಖಲಿಸಿದ್ದಾರೆ.


ಕಾಶ್ಮೀರದ ಪಹಲ್ಗಾಮ್‌ನಲ್ಲಿ 26 ಮಂದಿ ಹಿಂದೂ ಪುರುಷರನ್ನು ಅವರ ಕುಟುಂಬದವರ ಸಮ್ಮುಖದಲ್ಲೇ ಹತ್ಯೆ ಮಾಡಿದ್ದ ಪಾಕಿಸ್ತಾನಿ ಉಗ್ರರಿಗೆ ಪ್ರತಿಕ್ರಿಯೆಯಾಗಿ ಭಾರತವು "ಆಪರೇಷನ್ ಸಿಂಧೂರ್" ಹೆಸರಿನಲ್ಲಿ ಮಿಲಿಟರಿ ಕಾರ್ಯಾಚರಣೆ ನಡೆಸಿತ್ತು. ಈ ಕಾರ್ಯಾಚರಣೆಯಲ್ಲಿ ಪಾಕಿಸ್ತಾನದ 9 ಉಗ್ರ ನೆಲೆಗಳು ಮತ್ತು 8 ವಾಯು ನೆಲೆಗಳನ್ನು ನಾಶಪಡಿಸುವುದಲ್ಲದೆ, ಪಾಕಿಸ್ತಾನಕ್ಕೆ ಸೇರಿದ ಎಫ್​- 16 ಯುದ್ಧ ವಿಮಾನ, ಚೀನಾ ದೇಶದ ಕ್ಷಿಪಣಿಗಳು ಮತ್ತು ಡ್ರೋನ್‌ಗಳನ್ನು ನಾಶಪಡಿಸುವ ಮೂಲಕ ಭಾರತೀಯ ಸೇನೆಯು ಪರಾಕ್ರಮವನ್ನು ಪ್ರದರ್ಶಿಸಿತು. ಈ ಕಾರ್ಯಾಚರಣೆಗೆ ಇಡೀ ವಿಶ್ವದಾದ್ಯಂತ ಪ್ರಶಂಸೆ ವ್ಯಕ್ತವಾಗುತ್ತಿರುವ ಸನ್ನಿವೇಶದಲ್ಲಿ. ಶಾಸಕ ಕೊತ್ತೂರು ಮಂಜುನಾಥ್ ಅವರು ಮೇ 16 ರಂದು ಮಾಧ್ಯಮಗಳೊಂದಿಗೆ ಮಾತನಾಡುತ್ತಾ, “ಭಾರತೀಯ ಸೇನೆ 04 ವಿಮಾನಗಳನ್ನು ಅತ್ತಿಂದ ಇತ್ತ ಇತ್ತಿಂದ ಅತ್ತ ಹಾರಾಡಿಸಿ ಬಡಾಯಿಕೊಚ್ಚಿಕೊಳ್ಳುತ್ತಿದೆ. ಪಾಕಿಸ್ತಾನದ ಮೇಲೆ ಭಾರತೀಯ ಸೇನೆ ನಡೆಸಿರುವ ದಾಳಿಗೆ ಸಾಕ್ಷ್ಯಗಳೇನು?” ಎಂಬ ಹೇಳಿಕೆ ನೀಡಿರುವುದಾಗಿ ದೂರಿನಲ್ಲಿ ಆರೋಪಿಸಲಾಗಿದೆ.

ಶಾಸಕರ ಈ ಹೇಳಿಕೆಯು ಭಾರತ ದೇಶಕ್ಕೆ ಮತ್ತು ಭಾರತೀಯ ಸೇನೆಗೆ ಕಳಂಕ ಹಚ್ಚುವ ಮಾತುಗಳನ್ನಾಡಿ ದೇಶದ್ರೋಹದ ಕಾರ್ಯವನ್ನು ಎಸಗಿದ್ದಾರೆ ಎಂದು ದೂರುದಾರರು ಆರೋಪಿಸಿದ್ದಾರೆ. ತಮ್ಮ ದೇಶದ್ರೋಹದ ಮಾತುಗಳ ಮೂಲಕ 140 ಕೋಟಿ ಭಾರತೀಯರ ಭಾವನೆಗಳಿಗೆ ಧಕ್ಕೆ ತಂದಿರುವ ಹಾಗೂ ಬಹಿರಂಗವಾಗಿ ಭಾರತ ದೇಶ ಮತ್ತು ಭಾರತೀಯ ಸೇನೆಗೆ ಅವಮಾನಕರ ಮಾತುಗಳನ್ನಾಡಿ ದೇಶದ್ರೋಹದ ಕಾರ್ಯವನ್ನು ಎಸಗಿರುವ ಶಾಸಕ ಕೊತ್ತೂರು ಮಂಜುನಾಥ್ ಅವರ ವಿರುದ್ಧ ಕೂಡಲೇ ದೇಶದ್ರೋಹದ ಪ್ರಕರಣ ಮತ್ತು ಕ್ರಿಮಿನಲ್ ಪ್ರಕರಣವನ್ನು ದಾಖಲಿಸುವ ಸಂಬಂಧ ಕಾನೂನು ರೀತ್ಯಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ದೂರುದಾರ ಗಣೇಶ್ ಸಿಂಗ್ ಬಿ. ಮನವಿ ಮಾಡಿದ್ದಾರೆ.

ಏನಿದು ವಿವಾದ?

ಮೇ15 ರಂದು ಕೋಲಾರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಕೊತ್ತೂರು ಮಂಜುನಾಥ್, “ಆಪರೇಷನ್ ಸಿಂಧೂರ್” ಕಾರ್ಯಾಚರಣೆಯನ್ನು “ಬೂಟಾಟಿಕೆ” ಎಂದು ಹೇಳಿದ್ದರು ಎಂದು ಆರೋಪಿಸಲಾಗಿದೆ. “ನಾಲ್ಕು ವಿಮಾನಗಳನ್ನು ಕಳುಹಿಸಿ ಏನೂ ಮಾಡಿಲ್ಲ. ಇದು 26-28 ಜನರ ಸಾವಿಗೆ ಪರಿಹಾರವೇ? ಇದು ಮಹಿಳೆಯರಿಗೆ ಸಮಾಧಾನವೇ? ಇದು ಗೌರವವೇ?” ಎಂದು ಅವರು ಪ್ರಶ್ನಿಸಿದ್ದರು.

ಆಪರೇಷನ್ ಸಿಂಧೂರ್". ಈ ಕಾರ್ಯಾಚರಣೆಯ ಪರಿಣಾಮವನ್ನು ಮತ್ತು ಸರ್ಕಾರದ ದಾವೆಗಳನ್ನು ಪ್ರಶ್ನಿಸಿದ ಶಾಸಕರು, “100 ಉಗ್ರರನ್ನು ಕೊಂದಿದ್ದೇವೆ ಎಂದು ಯಾರನ್ನು ಕೊಂದಿದ್ದಾರೆ? ಗಡಿಯಲ್ಲಿ ಭದ್ರತೆ ಏಕಿಲ್ಲ? ಉಗ್ರರ ಗುರುತೇನು?” ಎಂದು ಕೇಳಿದ್ದರು. .

Read More
Next Story