ಒಡಿಶಾ: ಸುಭದ್ರಾ ಯೋಜನೆಗೆ ಪ್ರಧಾನಿ ಚಾಲನೆ
x
ಭುವನೇಶ್ವರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಿದರು.

ಒಡಿಶಾ: ಸುಭದ್ರಾ ಯೋಜನೆಗೆ ಪ್ರಧಾನಿ ಚಾಲನೆ


ಭುವನೇಶ್ವರ: ಒಡಿಶಾ ಸರ್ಕಾರದ ಮಹಿಳಾ ಕೇಂದ್ರಿತ ಸುಭದ್ರಾ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಚಾಲನೆ ನೀಡಿದರು. ಜೊತೆಗೆ, ರಾಜ್ಯದಲ್ಲಿ 3,800 ಕೋಟಿ ರೂ.ಗೂ ಹೆಚ್ಚು ವೆಚ್ಚದ ರೈಲ್ವೆ ಮತ್ತು ರಾಷ್ಟ್ರೀಯ ಹೆದ್ದಾರಿ ಯೋಜನೆಗಳನ್ನು ಅನಾವರಣಗೊಳಿಸಿದರು.

ಮೋದಿ ಅವರು ಇಲ್ಲಿನ ಜನತಾ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ 1,000 ಕೋಟಿ ರೂ. ವೆಚ್ಚದ ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ಚಾಲನೆ ನೀಡಿದರು.ರಾಜ್ಯದಲ್ಲಿ 2,871 ಕೋಟಿ ರೂ. ವೆಚ್ಚದ ರೈಲ್ವೆ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು ಮತ್ತು ದೇಶಕ್ಕೆ ಸಮರ್ಪಿಸಿದರು.

ಸುಭದ್ರಾ ಯೋಜನೆಯಡಿ 21-60 ವರ್ಷದೊಳಗಿನ ಅರ್ಹ ಫಲಾನುಭವಿಗಳು 2024-25 ರಿಂದ 2028-29 ರ ನಡುವಿನ ಐದು ವರ್ಷಗಳ ಅವಧಿಯಲ್ಲಿ 50,000 ರೂ. ಪಡೆಯಲಿದ್ದಾರೆ. ಸಮಾನ ಕಂತುಗಳಲ್ಲಿ ವಾರ್ಷಿಕ 10,000 ರೂ. ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಮಾಡಲಾಗುತ್ತದೆ. ಈ ಯೋಜನೆಗೆ ಇದುವರೆಗೆ 76 ಲಕ್ಷ ಮಹಿಳೆಯರು ನೋಂದಾಯಿಸಿಕೊಂಡಿದ್ದಾರೆ.

ಸುಭದ್ರಾ ಯೋಜನೆಯಡಿ 25 ಲಕ್ಷಕ್ಕೂ ಹೆಚ್ಚು ಮಹಿಳಾ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ 1,250 ಕೋಟಿ ರೂ. ವರ್ಗಾಯಿಸಲಾಯಿತು.

Read More
Next Story