ಚುನಾವಣೆ 2024: ಸ್ಪರ್ಧಿಸುವ ರಾಜಕೀಯ ಪಕ್ಷಗಳ ಸಂಖ್ಯೆ ಶೇ. 104 ಹೆಚ್ಚಳ
x
ಎಡಿಆರ್ ಪ್ರಕಾರ, ಚುನಾವಣೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುತ್ತಿರುವ ರಾಜಕೀಯ ಪಕ್ಷಗಳ ಸಂಖ್ಯೆ ಹೆಚ್ಚುತ್ತಿದೆ

ಚುನಾವಣೆ 2024: ಸ್ಪರ್ಧಿಸುವ ರಾಜಕೀಯ ಪಕ್ಷಗಳ ಸಂಖ್ಯೆ ಶೇ. 104 ಹೆಚ್ಚಳ


ಹೊಸದಿಲ್ಲಿ, ಮೇ 29- 2009 ರಿಂದ 2024 ರ ಅವಧಿಯಲ್ಲಿ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ರಾಜಕೀಯ ಪಕ್ಷಗಳ ಸಂಖ್ಯೆಯಲ್ಲಿ ಶೇ.104 ರಷ್ಟು ಹೆಚ್ಚಳವಾಗಿದೆ ಎಂದು ಎಡಿಆರ್ ಹೇಳಿದೆ.

ವಿಶ್ಲೇಷಣೆ ಪ್ರಕಾರ, 2019 ರಲ್ಲಿ 677, 2014 ರಲ್ಲಿ 464 ಮತ್ತು 2009 ರಲ್ಲಿ 368 ಪಕ್ಷಗಳು ಚುನಾವಣೆಯಲ್ಲಿ ಸ್ಪರ್ಧಿಸಿದ್ದರೆ, 2024 ರಲ್ಲಿ 751 ಪಕ್ಷಗಳು ಪ್ರಕ್ರಿಯೆಯಲ್ಲಿ ಭಾಗವಹಿಸುತ್ತಿವೆ. ಇದು ಶೇ.104ರಷ್ಟು ಹೆಚ್ಚಳ.

ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಮತ್ತು ನ್ಯಾಷನಲ್ ಎಲೆಕ್ಷನ್ ವಾಚ್ 2024ರ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿರುವ 8,337 ಅಭ್ಯರ್ಥಿಗಳು ಸಲ್ಲಿಸಿದ ಪ್ರಮಾಣಪತ್ರಗಳ ವಿಶ್ಲೇಷಣೆ ನಡೆಸಿದೆ. 8,360 ಅಭ್ಯರ್ಥಿಗಳ ಪೈಕಿ ರಾಷ್ಟ್ರೀಯ ಪಕ್ಷಗಳ 1,333, ರಾಜ್ಯ ಪಕ್ಷಗಳ 532, ನೋಂದಾಯಿತ ಗುರುತಿಸಲ್ಪಡ ಪಕ್ಷಗಳ 2,580 ಮತ್ತು 3,915 ಸ್ವತಂತ್ರ ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಕ್ರಿಮಿನಲ್‌ ಪ್ರಕರಣಗಳು: ರಾಷ್ಟ್ರೀಯ ಪಕ್ಷಗಳ 1,333 ಅಭ್ಯರ್ಥಿಗಳ ಪೈಕಿ 443 ಅಭ್ಯರ್ಥಿಗಳು ಕ್ರಿಮಿನಲ್ ಪ್ರಕರಣ ಹೊಂದಿದ್ದು, ಇವರಲ್ಲಿ 295 ಮಂದಿ ಗಂಭೀರ ಕ್ರಿಮಿನಲ್ ಆರೋಪ ಎದುರಿಸುತ್ತಿದ್ದಾರೆ. ರಾಜ್ಯ ಪಕ್ಷಗಳ ಅಭ್ಯರ್ಥಿಗಳು ಹೆಚ್ಚಿನ ಕ್ರಿಮಿನಲ್‌ ಪ್ರಕರಣ ಹೊಂದಿದ್ದಾರೆ. 532 ಅಭ್ಯರ್ಥಿಗಳಲ್ಲಿ 249 ಅಭ್ಯರ್ಥಿಗಳು ಕ್ರಿಮಿನಲ್ ಮೊಕದ್ದ ಮೆ ಮತ್ತು 169 ಮಂದಿ ಗಂಭೀರ‌ ಕ್ರಿಮಿನಲ್ ಆರೋಪ ಎದುರಿಸುತ್ತಿದ್ದಾರೆ.ನೋಂದಾಯಿತ ಗುರುತಿಸಲ್ಪಡದ ಪಕ್ಷಗಳ ಅಭ್ಯರ್ಥಿಗಳು ಕಡಿಮೆ ಪ್ರಕರಣಗಳನ್ನುಹೊಂದಿದ್ದಾರೆ. 2,580 ಅಭ್ಯರ್ಥಿಗಳಲ್ಲಿ 401 ಅಭ್ಯರ್ಥಿ ಗಳು ಕ್ರಿಮಿನಲ್ ಪ್ರಕರಣ ಮತ್ತು 316 ಮಂದಿ ಗಂಭೀರ ಆರೋಪ ಎದುರಿಸುತ್ತಿದ್ದಾರೆ. 3,915 ಸ್ವತಂತ್ರ ಅಭ್ಯರ್ಥಿಗಳಲ್ಲಿ 550 ಮಂದಿ ಕ್ರಿಮಿನಲ್‌ ಮತ್ತು 411 ಮಂದಿ ಗಂಭೀರ ಕ್ರಿಮಿನಲ್ ಆರೋಪ‌ ಎದುರಿಸುತ್ತಿದ್ದಾರೆ.

ಆಸ್ತಿ ವಿವರ: 8,337 ಅಭ್ಯರ್ಥಿಗಳಲ್ಲಿ 2,572 ಮಂದಿ ಕೋಟ್ಯಧಿಪತಿಗಳು. ರಾಷ್ಟ್ರೀಯ ಪಕ್ಷಗಳ 1,333 ಅಭ್ಯರ್ಥಿಗಳಲ್ಲಿ 906 ಮಂದಿ, ರಾಜ್ಯ ಪಕ್ಷಗಳ 532 ರಲ್ಲಿ 421 ಮಂದಿ, ನೋಂದಾಯಿತ ಮಾನ್ಯತೆ ಪಡೆಯದ ಪಕ್ಷಗಳ 2,580ರಲ್ಲಿ 572 ಮತ್ತು 3,915 ಸ್ವತಂತ್ರ ಅಭ್ಯರ್ಥಿಗಳಲ್ಲಿ 673 ಮಂದಿ ಕೋಟ್ಯಧಿಪತಿಗಳು ಇದ್ದಾರೆ.

Read More
Next Story