ಅಯೋಧ್ಯೆ ತೀರ್ಪಿನಲ್ಲಿ ಜಾತ್ಯತೀತತೆಗೆ ಮಾನ್ಯತೆ ನೀಡದಿರುವುದು ನ್ಯಾಯದ ವಿಡಂಬನೆ: ನ್ಯಾಯಮೂರ್ತಿ ನಾರಿಮನ್
ಪ್ರಥಮ ನ್ಯಾಯಮೂರ್ತಿ ಎ.ಎಂ.ಅಹ್ಮದಿ ಅವರ ಸ್ಮರಣಾರ್ಥ ಆಯೋಜಿಸಿದ್ದ ಜಾತ್ಯತೀತತೆ ಮತ್ತು ಭಾರತೀಯ ಸಂವಿಧಾನ' ಉಪನ್ಯಾಸದಲ್ಲಿ ಮಾತನಾಡುತ್ತಾ ಅವರು ಅಯೋಧ್ಯೆ ತೀರ್ಪನ್ನು ಉಲ್ಲೇಖಿಸಿದರು.
ರಾಮಜನ್ಮಭೂಮಿ-ಬಾಬರಿ ಮಸೀದಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಪ್ರಕಟಿಸಿರುವ 2019 ರ ತೀರ್ಪಿನ ಕುರಿತು ಮಾತನಾಡಿದ ಸುಪ್ರೀಂ ಕೋರ್ಟ್ನ ಮಾಜಿ ನ್ಯಾಯಮೂರ್ತಿ ಆರ್ ಎಫ್ ನಾರಿಮನ್, ಇದು ಜಾತ್ಯತೀತ ತತ್ವಕ್ಕೆ ನ್ಯಾಯ ಒದಗಿಸದ ನ್ಯಾಯದ ದೊಡ್ಡ ವಿಡಂಬನೆ ಎಂದು ಬಣ್ಣಿಸಿದ್ದಾರೆ.
ಪ್ರಥಮ ನ್ಯಾಯಮೂರ್ತಿ ಎ.ಎಂ.ಅಹ್ಮದಿ ಅವರ ಸ್ಮರಣಾರ್ಥ ಆಯೋಜಿಸಿದ್ದ ಜಾತ್ಯತೀತತೆ ಮತ್ತು ಭಾರತೀಯ ಸಂವಿಧಾನ' ಉಪನ್ಯಾಸದಲ್ಲಿ ಮಾತನಾಡುತ್ತಾ ಅವರು ಅಯೋಧ್ಯೆ ತೀರ್ಪನ್ನು ಉಲ್ಲೇಖಿಸಿದರು. ಪೂಜಾ ಸ್ಥಳಗಳ (ವಿಶೇಷ ನಿಬಂಧನೆಗಳು) ಕಾಯ್ದೆ 1991 ಎತ್ತಿಹಿಡಿದಿದ್ದರಿಂದ ಈ ತೀರ್ಪು ಸಣ್ಣ ಅಂತರವನ್ನು ಹೊಂದಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ದೇಶಾದ್ಯಂತ ಪ್ರತಿದಿನ ತಲೆಯೆತ್ತುತ್ತಿರುವ ಧಾರ್ಮಿಕ ಸ್ಥಳಗಳ ವಿವಾದಗಳನ್ನು ಕೊನೆಗೊಳಿಸಲು ಪೂಜಾ ಸ್ಥಳಗಳ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು ಎಂದು ಅವರು ಹೇಳಿದರು.
"ನನ್ನ ಅಭಿಪ್ರಾಯದಲ್ಲಿ, ಈ ಪ್ರಕರಣದಲ್ಲಿ ನ್ಯಾಯದ ದೊಡ್ಡ ವಿಡಂಬನೆಯೆಂದರೆ ಇಲ್ಲಿ ಜಾತ್ಯತೀತತೆಗೆ ಪ್ರಾಮುಖ್ಯತೆಯನ್ನೇ ನೀಡಲಾಗಿಲ್ಲ" ಎಂದು ನ್ಯಾಯಮೂರ್ತಿ ನಾರಿಮನ್ ಹೇಳಿದ್ದಾರೆ. ಮಸೀದಿಯನ್ನು ನೆಲಸಮಗೊಳಿಸುವುದು ಕಾನೂನುಬಾಹಿರ ಎಂದು ಹೇಳಿದ ನ್ಯಾಯಾಲಯ ವಿವಾದಿತ ಭೂಮಿಯನ್ನು ಮಂಜೂರು ಮಾಡಲು ನ್ಯಾಯಾಲಯ ನೀಡಿದ ತರ್ಕವನ್ನು ನ್ಯಾಯಮೂರ್ತಿ ನಾರಿಮನ್ ಒಪ್ಪಲಿಲ್ಲ.
"ಇಂದು ನಾವು ದೇಶಾದ್ಯಂತ ಇದೇ ರೀತಿಯ ಪ್ರಕರಣಗಳನ್ನು ನೋಡುತ್ತಿದ್ದೇವೆ. ಮಸೀದಿಗಳ ವಿರುದ್ಧ ಮಾತ್ರವಲ್ಲದೆ ದರ್ಗಾಗಳ ವಿರುದ್ಧವೂ ಮೊಕದ್ದಮೆಗಳನ್ನು ಹೂಡುತ್ತಿರುವುದನ್ನು ಕಾಣಬಹುದು. ನನ್ನ ಪ್ರಕಾರ ಇದೆಲ್ಲವೂ ಕೋಮು ಸಾಮರಸ್ಯ ಧಕ್ಕೆಗೆ ಕಾರಣವಾಗಬಹುದು. ಇದೆಲ್ಲವನ್ನೂ ನಿವಾರಣೆ ಮಾಡುವ ನಿವಾರಿಸುವ ಏಕೈಕ ಮಾರ್ಗವೆಂದರೆ. ತೀರ್ಪಿನ ಐದು ಪುಟಗಳನ್ನು ಪ್ರತಿ ಜಿಲ್ಲಾ ನ್ಯಾಯಾಲಯ ಮತ್ತು ಹೈಕೋರ್ಟ್ನಲ್ಲಿ ಓದುವಂತೆ ಮಾಡುವುದು. ಯಾಕೆಂದರೆ ಆ ಐದು ಪುಟಗಳು ಸರ್ವೋಚ್ಚ ನ್ಯಾಯಾಲಯದ ಘೋಷಣೆಯಾಗಿದ್ದು ಎಲ್ಲವೂ ಅವರ ವ್ಯಾಪ್ತಿಗೆ ಒಳಪಡುತ್ತದೆ" ಎಂದು ಅವರು ಹೇಳಿದರು.
ಮಸೀದಿ ಧ್ವಂಸ ಪ್ರಕರಣದ ಎಲ್ಲಾ ಆರೋಪಿಗಳನ್ನು ಖುಲಾಸೆಗೊಳಿಸಿದ ವಿಶೇಷ ಸಿಬಿಐ ನ್ಯಾಯಾಧೀಶ ಸುರೇಂದ್ರ ಯಾದವ್ ಅವರು ನಿವೃತ್ತಿ ಬಳಿಕ ಉತ್ತರ ಪ್ರದೇಶದಲ್ಲಿ ಉಪ ಲೋಕಾಯುಕ್ತರಾಗಿ ಕೆಲಸ ಮಾಡಿರುವುದನ್ನೂ ಅವರು ನಾರಿಮನ್ ಈ ಸಂದರ್ಭದಲ್ಲಿ ಸ್ಮರಿಸಿದರು. "ಇದು ಈ ದೇಶದ ಪರಿಸ್ಥಿತಿ" ಎಂದು ಅವರು ಹೇಳಿದರು.