ಸೈಬರ್‌ ದಾಳಿಯಲ್ಲ, ಸಮಸ್ಯೆ ಪರಿಹರಿಸಲಾಗಿದೆ: ಕ್ರೌಡ್‌ಸ್ಟ್ರೈಕ್ ಸಿಇಒ
x
ಮೈಕ್ರೋಸಾಫ್ಟ್‌ ಜಾಗತಿಕ ತಂತ್ರಜ್ಞಾನ ನಿಲುಗಡೆಯಿಂದ ನ್ಯೂಯಾರ್ಕ್‌ನ ಟೈಮ್ಸ್ ಸ್ಕ್ವೇರ್‌ನಲ್ಲಿ ಕಂಡುಬಂದ ದೃಶ್ಯ

ಸೈಬರ್‌ ದಾಳಿಯಲ್ಲ, ಸಮಸ್ಯೆ ಪರಿಹರಿಸಲಾಗಿದೆ: ಕ್ರೌಡ್‌ಸ್ಟ್ರೈಕ್ ಸಿಇಒ

ಕ್ರೌಡ್‌ಸ್ಟ್ರೈಕಿನ ನಿರಂತರ ನವೀಕರಣಗಳು ಲಭ್ಯವಿವೆ ಎಂದು ಸಿಇಒ ಜಾರ್ಜ್ ಕರ್ಟ್ಜ್ ಹೇಳಿದ್ದಾರೆ. ಸಮುದಾಯ ಮತ್ತು ಉದ್ಯಮಕ್ಕೆ ನವೀಕರಣಗಳನ್ನು ನೀಡುವುದನ್ನು ಮುಂದುವರಿಸಲಾಗುತ್ತದೆ ಎಂದಿದ್ದಾರೆ.


ವಿಶ್ವದಾದ್ಯಂತ ಶುಕ್ರವಾರ ಸಂಭವಿಸಿದ ಅತಿ ದೊಡ್ಡ ಐಟಿ ಸ್ಥಗಿತಕ್ಕೆ ಮೈಕ್ರೋಸಾಫ್ಟ್ ವಿಂಡೋಸ್‌ಗೆ ಉತ್ಪನ್ನದ ನವೀಕರಣ ಕಾರಣವೇ ಹೊರತು ಸೈಬರ್‌ ದಾಳಿ ಅಲ್ಲ ಎಂದು ಸೈಬರ್ ಭದ್ರತಾ ಸಂಸ್ಥೆಯಾದ ಕ್ರೌಡ್‌ಸ್ಟ್ರೈಕ್‌ ಹೇಳಿದೆ.

ವಿಂಡೋಸ್ ನ ಫಾಲ್ಕನ್ ಕಂಟೆಂಟ್ ಉನ್ನತೀಕರಣದಲ್ಲಿನ ಸಮಸ್ಯೆಯಿಂದಾಗಿ ಸಮಸ್ಯೆ ಉಂಟಾಗಿದೆ. ಸಮಸ್ಯೆಯನ್ನು ಗುರುತಿಸಿ, ಪ್ರತ್ಯೇಕಿಸಿ ಮತ್ತು ಸರಿಪಡಿಸಲಾಗಿದೆ ಎಂದು ಕ್ರೌಡ್‌ಸ್ಟ್ರೈಕ್‌ನ ಸಿಇಒ ಜಾರ್ಜ್ ಕರ್ಟ್ಜ್ ಹೇಳಿದರು.

ʻತಮ್ಮ ಕಂಪನಿ ಪರಿಸ್ಥಿತಿಯ ಗಂಭೀರತೆಯನ್ನು ಅರ್ಥಮಾಡಿಕೊಂಡಿದ್ದು, ಅನನುಕೂಲ ಮತ್ತು ಅಡಚಣೆಗೆ ವಿಷಾದಿಸುತ್ತದೆ. ನಮ್ಮ ಗ್ರಾಹಕರು ಸಂಪೂರ್ಣವಾಗಿ ಸಂರಕ್ಷಿಸಲ್ಪಟ್ಟಿದ್ದಾರೆ. ಕಂಪನಿ ಎಲ್ಲಾ ಗ್ರಾಹಕರ ಕಂಪ್ಯೂಟರ್‌ಗಳು ಮಾಹಿತಿ ಉಳಿಸಿಕೊಂಡಿರುವುದನ್ನು ಖಚಿತಪಡಿಸಿಕೊಳ್ಳಲು ಕೆಲಸ ಮಾಡುತ್ತಿದೆ. ಅವರು ಗ್ರಾಹಕರಿಗೆ ಉದ್ಧೇಶಿತ ಸೇವೆಗಳನ್ನು ನೀಡಬಬಹುದುʼ ಎಂದು ಭರವಸೆ ನೀಡಿದರು.

ನಿರಂತರ ನವೀಕರಣ ಲಭ್ಯ: ನಿರಂತರ ನವೀಕರಣಗಳು ಲಭ್ಯವಿವೆ ಎಂದು ಕ್ರೌಡ್‌ಸ್ಟ್ರೈಕ್ ನ ವೆಬ್‌ಸೈಟ್‌, ಲಿಂಕ್ಡ್‌ಇನ್‌ ಮತ್ತು ಎಕ್ಸ್‌ನಲ್ಲಿನ ಅವರ ಪೋಸ್ಟ್‌ಗಳಲ್ಲಿ ಕರ್ಟ್ಜ್ ಹೇಳಿದ್ದಾರೆ. ಸಮುದಾಯ ಮತ್ತು ಉದ್ಯಮಕ್ಕೆ ನವೀಕರಣಗಳನ್ನು ನೀಡುವುದನ್ನು ಮುಂದುವರಿಸಲಾಗುತ್ತದೆ ಎಂದರು.

ಮ್ಯಾಕ್ ಮತ್ತು ಲಿನಕ್ಸ್‌ ಗಳ ಮೇಲೆ ಕ್ರೌಡ್‌ಸ್ಟ್ರೈಕ್ ಪರಿಣಾಮ ಬೀರಿಲ್ಲ.ಸಂಸ್ಥೆಗಳು ಕ್ರೌಡ್‌ಸ್ಟ್ರೈಕ್ ಪ್ರತಿನಿಧಿಗಳೊಂದಿಗೆ ಸಂವಹನ ನಡೆಸಲು ಅಧಿಕೃತ ಚಾನೆಲ್‌ಗಳನ್ನೇ ಬಳಸಿಕೊಳ್ಳಬೇಕು. ಕ್ರೌಡ್‌ಸ್ಟ್ರೈಕ್ ಗ್ರಾಹಕರ ಭದ್ರತೆ ಮತ್ತು ಸ್ಥಿರತೆಯನ್ನು ಖಚಿತಪಡಿಸಿಕೊಳ್ಳಲು ತನ್ನ ತಂಡವನ್ನು ಸಂಪೂರ್ಣವಾಗಿ ಸಜ್ಜುಗೊಳಿಸಿದೆ ಎಂದು ಭರವಸೆ ನೀಡಿದರು.

ವಿಮಾನಯಾನ ಅಸ್ತವ್ಯಸ್ತ: ಭಾರತ ಮತ್ತು ಇತರೆಡೆಗಳಲ್ಲಿ ಶುಕ್ರವಾರ (ಜುಲೈ 19) ವಿಮಾನಗಳು ರದ್ದು ಅಥವಾ ವಿಳಂಬವಾಗಿದ್ದರಿಂದ, ವಿಮಾನ ನಿಲ್ದಾಣಗಳಲ್ಲಿ ಗೊಂದಲ ಕಂಡುಬಂದಿತ್ತು. ವಿಮಾನಯಾನ ಕ್ಷೇತ್ರವಲ್ಲದೆ, ಬ್ಯಾಂಕಿಂಗ್, ದಲ್ಲಾಳಿಗಳು, ಆಸ್ಪತ್ರೆಗಳು, ಮಾಧ್ಯಮಗಳು ಮತ್ತು ಇತರ ಕ್ಷೇತ್ರಗಳ ಮೇಲೆ ಪರಿಣಾಮ ಬೀರಿತು. ಸುಮಾರು 10 ಬ್ಯಾಂಕ್‌ಗಳು ಮತ್ತು ಎನ್‌ಬಿಎಫ್‌ಸಿಗಳು ಸಣ್ಣ ಅಡೆತಡೆಗಳನ್ನು ಎದುರಿಸಿದವು. ಆದರೆ, ಅದನ್ನು ಸರಿಪಡಿಸಲಾಗುತ್ತಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಹೇಳಿದೆ.

Read More
Next Story