
ಕೇಂದ್ರದ ಅಧಿಕೃತ ನಾಮಿನಿ ವಿಜಯ ಕಿಶೋರ್ ರಾಹತ್ಕರ್
ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷರಾಗಿ ವಿಜಯ ಕಿಶೋರ್ ನೇಮಕ
ರಾಷ್ಟ್ರೀಯ ಮಹಿಳಾ ಆಯೋಗದ (ಎನ್‌ಸಿಡಬ್ಲ್ಯು) ಅಧ್ಯಕ್ಷರಾಗಿ ವಿಜಯ ಕಿಶೋರ್ ರಹತ್ಕರ್ ಅವರನ್ನು ನಾಮನಿರ್ದೇಶನ ಮಾಡಲಾಗಿದೆ.
ರಾಷ್ಟ್ರೀಯ ಮಹಿಳಾ ಆಯೋಗದ (ಎನ್‌ಸಿಡಬ್ಲ್ಯು) ಅಧ್ಯಕ್ಷರಾಗಿ ವಿಜಯ ಕಿಶೋರ್ ರಹತ್ಕರ್ ಅವರನ್ನು ಕೇಂದ್ರವು ಅಧಿಕೃತವಾಗಿ ನಾಮನಿರ್ದೇಶನ ಮಾಡಿದೆ.
'ರಾಷ್ಟ್ರೀಯ ಮಹಿಳಾ ಆಯೋಗ ಕಾಯ್ದೆ - 1990ರ ಸೆಕ್ಷನ್ 3ರ ಅಡಿಯಲ್ಲಿ ವಿಜಯಾ ಅವರನ್ನು ನೇಮಿಸಲಾಗಿದ್ದು, ಅಧಿಕಾರಾವಧಿ ಮೂರು ವರ್ಷ ಅಥವಾ ಅವರಿಗೆ 65 ವರ್ಷ ಆಗುವವರೆಗೆ ಇರಲಿದೆ' ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಶನಿವಾರ ಹೇಳಿಕೆ ಬಿಡುಗಡೆ ಮಾಡಿದೆ. ಕಿಶೋರ್ ರಹತ್ಕರ್ ಅವರ ಅಧಿಕಾರಾವಧಿಯು ತಕ್ಷಣವೇ ಪ್ರಾರಂಭವಾಗಲಿದೆ.
ವಿಜಯಾ ಅವರೊಂದಿಗೆ ಎನ್‌ಸಿಡಬ್ಲ್ಯುನ ನೂತನ ಸದಸ್ಯರನ್ನಾಗಿ ಡಾ. ಅರ್ಚನಾ ಮಜುಂದಾರ್ ಅವರನ್ನು ಮೂರು ವರ್ಷದ ಅವಧಿಗೆ ನೇಮಿಸಿರುವುದಾಗಿಯೂ ಹೇಳಿಕೆಯಲ್ಲಿ ತಿಳಿಸಲಾಗಿದೆ.
Next Story