ಲೋಕಸಭೆ ಚುನಾವಣೆ 2024: ಚಂಡೀಗಢ ಮೇಯರ್ ಚುನಾವಣೆ ನಂತರ ಹೆಚ್ಚಿದ ಇವಿಎಂ ಆತಂಕ
x
ಇವಿಎಂ ಬಳಕೆ ವಿರೋಧಿಸಿ ಪ್ರತಿಭಟನೆ

ಲೋಕಸಭೆ ಚುನಾವಣೆ 2024: ಚಂಡೀಗಢ ಮೇಯರ್ ಚುನಾವಣೆ ನಂತರ ಹೆಚ್ಚಿದ ಇವಿಎಂ ಆತಂಕ

ಇವಿಎಂ ಬಳಕೆಗೆ ವಿರೋಧ ಪಕ್ಷಗಳಿಂದ ವಿರೋಧ


ಲೋಕಸಭೆ ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿ ಇರುವಾಗ ವಿದ್ಯುನ್ಮಾನ ಮತಯಂತ್ರಗಳ (ಇವಿಎಂ) ನಿಖರತೆ ಮತ್ತು ನ್ಯಾಯಯುತ ಬಳಕೆಯ ಬಗ್ಗೆ ವಿರೋಧ ಪಕ್ಷಗಳು ಅನುಮಾನ ವ್ಯಕ್ತಪಡಿಸಿವೆ.

ಇವಿಎಂಗಳ ಸತ್ಯಾಸತ್ಯತೆಯ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಯಾಗುತ್ತಿದ್ದು, ಕೆಲವೆಡೆ ಪ್ರತಿಭಟನೆ ಸಹ ನಡೆದಿದೆ.

ಆದರೆ, ಈ ಬಗ್ಗೆ ಭಾರತದ ಚುನಾವಣಾ ಆಯೋಗದಿಂದ (ಇಸಿಐ) ಯಾವುದೇ ಸ್ಪಷ್ಟತೆ ಸಿಕ್ಕಿಲ್ಲ. ಮತದಾರರ ಮನಸ್ಸಿನಲ್ಲಿ ಮೂಡಿರುವ ಅನುಮಾನಗಳನ್ನು ಸಂಪೂರ್ಣವಾಗಿ ನಿವಾರಿಸಲು ಯಾವುದೇ ಕ್ರಮ ತೆಗೆದುಕೊಂಡಿಲ್ಲ.

ಇವಿಎಂ ವಿರುದ್ಧ ಪ್ರತಿಭಟನೆ

ಈ ಹಿನ್ನೆಲೆಯಲ್ಲಿ ಇವಿಎಂ ವಿರುದ್ಧ ಹೋರಾಟ ನಡೆಸಲು ಕಾಂಗ್ರೆಸ್ ಹಾಗೂ ಹಲವು ಸಂಘಟನೆಗಳು ನಿರ್ಧರಿಸಿವೆ.

ಈ ಸಂಘಟನೆಗಳ ಕಾರ್ಯಕರ್ತರು, ಸಾಮಾಜಿಕ ಕಾರ್ಯಕರ್ತರು ಮತ್ತು ಕಾಂಗ್ರೆಸ್ ಹಿರಿಯ ಮುಖಂಡ ದಿಗ್ವಿಜಯ ಸಿಂಗ್ ನೇತೃತ್ವದಲ್ಲಿ ಫೆಬ್ರವರಿ 22 ರಂದು ಬೆಳಿಗ್ಗೆ ಇವಿಎಂಗಳ ಬಳಕೆ ಅಥವಾ ಸಂಶಯಾಸ್ಪದ ಇವಿಎಂಗಳ ವಿರುದ್ಧ ಪ್ರತಿಭಟನೆ ನಡೆಯಿತು.

ದೆಹಲಿಯ ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ದಿಗ್ವಿಜಯ ಸಿಂಗ್ ಹಾಗೂ ಪ್ರತಿಭಟನಾ ನಿರತರನ್ನು ಎರಡು ಗಂಟೆಗಳ ವರೆಗೆ ಬಂಧಿಸಲಾಗಿತ್ತು.

ಅಲ್ಲದೇ ಇವಿಎಂ ಹಟಾವೋ ಮೋರ್ಚಾ ಕಾರ್ಯಕರ್ತರು ದೆಹಲಿಯ ಜಂತರ್ ಮಂತರ್‌ನಲ್ಲಿ ಸೇರುವುದಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡಿರಲಿಲ್ಲ.

ರೈತರು ದೆಹಲಿ ಚಲೋ ಆಂದೋಲನ ಪ್ರಾರಂಭಿಸಿದ ನಂತರ ಐದು ಅಥವಾ ಅದಕ್ಕಿಂತ ಹೆಚ್ಚು ವ್ಯಕ್ತಿಗಳು ಸಭೆ ಸೇರುವುದನ್ನು ನಿಷೇಧಿಸಲಾಗಿದೆ.

ಈ ತಿಂಗಳ ಆರಂಭದಲ್ಲಿ ದೆಹಲಿಯಲ್ಲಿ ಸೆಕ್ಷನ್ 144 ಸಿಆರ್ ಪಿಸಿಯನ್ನು ವಿಧಿಸಲಾಗಿದೆ.

ಇವಿಎಂನ ಪ್ರಮುಖ ಮೂರು ಸಂಶೋಧನೆಗಳು ಈ ರೀತಿ ಇವೆ

ಎ) ಇವಿಎಂ ಹ್ಯಾಕಿಂಗ್, ಟ್ಯಾಂಪರಿಂಗ್ ಮತ್ತು ನಕಲಿ ಮತದಾನ ಸಾಬೀತುಪಡಿಸಬಹುದಾದ ಗ್ಯಾರಂಟಿಗಳನ್ನು ಒದಗಿಸುವುದಿಲ್ಲ

ಬಿ) VVPAT (ಮತದಾರ-ಪರಿಶೀಲಿಸಬಹುದಾದ ಪೇಪರ್ ಟ್ರಯಲ್) ವ್ಯವಸ್ಥೆಯು ಮತ ಚಲಾಯಿಸುವ ಮೊದಲು ಸ್ಲಿಪ್ ಅನ್ನು ಪರಿಶೀಲಿಸಲು ಮತದಾರರಿಗೆ ಅನುಮತಿಸುವುದಿಲ್ಲ

ಸಿ) ಎಂಡ್ ಟು ಎಂಡ್ (ಇ2ಇ) ವೆರಿಫೈಬಿಲಿಟಿ ಇಲ್ಲದ ಕಾರಣ, ಪ್ರಸ್ತುತ ಇವಿಎಂ ವ್ಯವಸ್ಥೆಯ ವಿನ್ಯಾಸವೇ ಪ್ರಜಾಸತ್ತಾತ್ಮಕ ಚುನಾವಣೆಗಳಿಗೆ ಅನರ್ಹವಾಗಿದೆ ಎನ್ನುವುದು ಮೂರು ಪ್ರಮುಖ ಅಂಶಗಳಾಗಿವೆ.

ಚಂಡೀಗಢ ಮೇಯರ್ ಚುನಾವಣೆ

ಮತಗಳ ಮರು ಎಣಿಕೆಯ ನಂತರ ಚಂಡೀಗಢ ಮೇಯರ್ ಚುನಾವಣೆಯ ಫಲಿತಾಂಶವನ್ನು ಸುಪ್ರೀಂ ಕೋರ್ಟ್‌ ಪ್ರಕಟಿಸಿತ್ತು. ಚುನಾವಣಾ ಸಂದರ್ಭದಲ್ಲಿ ಮತಗಳನ್ನು ತಿರುಚಿರುವುದು ಕಂಡುಬಂದಿತ್ತು.

ಇವಿಎಂ ವಿರುದ್ಧ ಸಾರ್ವಜನಿಕರು ಮತ್ತು ರಾಜಕಾರಣಿಗಳು ಟೀಕಿಸುತ್ತಿದ್ದು, ಕೆಲವು ಕಾಂಗ್ರೆಸ್‌ ನಾಯಕರು ಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Read More
Next Story