ಭಾಷಣದ ಮಧ್ಯೆ ಅಸ್ವಸ್ಥರಾದ ಮಲ್ಲಿಕಾರ್ಜುನ ಖರ್ಗೆ, ವೈದ್ಯರಿಂದ ಚಿಕಿತ್ಸೆ, ಆರೋಗ್ಯ ಸ್ಥಿರ
ಜಮ್ಮು ಕಾಶ್ಮೀರ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದ ಖರ್ಗೆ ಅವರಿಗೆ ಭಾಷಣದ ವೇಳೆ ತಲೆ ಸುತ್ತು ಕಾಣಿಸಿಕೊಂಡು, ನಿತ್ರಾಣರಾದರು. ಆಗ ವೇದಿಕೆ ಮೇಲಿದ್ದವರು ಖರ್ಗೆ ಅವರನ್ನುಕುರ್ಚಿ ಮೇಲೆ ಕೂರಿಸಿದರು. ವೈದ್ಯರ ಚಿಕಿತ್ಸೆ ಬಳಿಕ ಮಲ್ಲಿಕಾರ್ಜುನ ಖರ್ಗೆ ಅವರ ಆರೋಗ್ಯ ಸುಧಾರಿಸಿದೆ
ಭಾಷಣದ ಮಧ್ಯೆ ಅಸ್ವಸ್ಥರಾದ ಮಲ್ಲಿಕಾರ್ಜುನ ಖರ್ಗೆ, ವೈದ್ಯರಿಂದ ಚಿಕಿತ್ಸೆ, ಆರೋಗ್ಯ ಸ್ಥಿರಜಮ್ಮು ಕಾಶ್ಮೀರದ ಕಥುವಾ ಜಿಲ್ಲೆಯಲ್ಲಿ ಭಾನುವಾರ ಸಾರ್ವಜನಿಕ ರ್ಯಾಲಿ ಉದ್ದೇಶಿಸಿ ಮಾತನಾಡುವಾಗ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಅಸ್ವಸ್ಥಗೊಂಡ ಘಟನೆ ವರದಿಯಾಗಿದೆ. ಕೂಡಲೇ ವೈದ್ಯರು ಖರ್ಗೆ ಅವರಿಗೆ ಚಿಕಿತ್ಸೆ ನೀಡಿದ್ದು, ಅವರ ಆರೋಗ್ಯ ಸ್ಥಿರವಾಗಿದೆ.
ಕಥುವಾದಲ್ಲಿ ಶನಿವಾರ ನಡೆದ ಉಗ್ರರ ಕಾರ್ಯಾಚರಣೆಯಲ್ಲಿ ಹುತಾತ್ಮರಾದ ಹೆಡ್ ಕಾನ್ಸ್ಟೆಬಲ್ಗೆ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿ, ಸಾರ್ವಜನಿಕ ಭಾಷಣ ಮಾಡುತ್ತಿದ್ದರು. ಈ ವೇಳೆ ತಲೆ ಸುತ್ತು ಕಾಣಿಸಿಕೊಂಡು, ನಿತ್ರಾಣರಾದರು. ಆದರೂ ತುಸು ಕಾಲ ಭಾಷಣ ಮುಂದುವರಿಸಿದರು. ಆಗ ವೇದಿಕೆ ಮೇಲಿದ್ದವರು ಖರ್ಗೆ ಅವರನ್ನುಕುರ್ಚಿ ಮೇಲೆ ಕೂರಿಸಿದರು. ವೈದ್ಯರ ಚಿಕಿತ್ಸೆ ಬಳಿಕ ಮಲ್ಲಿಕಾರ್ಜುನ ಖರ್ಗೆ ಅವರ ಆರೋಗ್ಯ ಸುಧಾರಿಸಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಗುಲಾಮ್ ಅಹ್ಮದ್ ಮಿರ್ ತಿಳಿಸಿದರು.
ಜಮ್ಮು ಕಾಶ್ಮೀರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರಕ್ಕೆ ಖರ್ಗೆ ಅವರು ಜಸ್ರೋಟಾಕ್ಕೆ ಬಂದಿದ್ದರು.
ಜಮ್ಮು ಕಾಶ್ಮೀರ ಕಾಂಗ್ರೆಸ್ ಉಪಾಧ್ಯಕ್ಷ ರವೀಂದ್ರ ಶರ್ಮಾ ಮಾತನಾಡಿ, ಖರ್ಗೆ ಅವರಿಗೆ ತಲೆಸುತ್ತು ಬಂದಿದ್ದು, ಅವರನ್ನು ಕೋಣೆಗೆ ಕರೆದೊಯ್ಯಲಾಯಿತು. ವೈದ್ಯರ ಚಿಕಿತ್ಸೆ ಬಳಿಕ ಚೇತರಿಸಿಕೊಂಡು ಉದಂಪುರದಲ್ಲಿ ಆಯೋಜಿಸಿದ್ದ ಎರಡನೇ ಸಾರ್ವಜನಿಕ ರ್ಯಾಲಿಗೆ ತೆರೆಳಿದರು ಎಂದು ಮೂಲಗಳು ತಿಳಿಸಿವೆ.