Delhi Polls : ಡೆಲ್ಲಿಯಲ್ಲಿ ಬಿಜೆಪಿಯಿಂದ ಮತದಾರರ ಪಟ್ಟಿ ತಿರುಚುವಿಕೆ : ಕೇಜ್ರಿವಾಲ್‌ ಆರೋಪ
x
ಅರವಿಂದ್‌ ಕೇಜ್ರಿವಾಲ್‌

Delhi Polls : ಡೆಲ್ಲಿಯಲ್ಲಿ ಬಿಜೆಪಿಯಿಂದ ಮತದಾರರ ಪಟ್ಟಿ ತಿರುಚುವಿಕೆ : ಕೇಜ್ರಿವಾಲ್‌ ಆರೋಪ

Delhi Polls: ಪ್ರಬಲ ಅಭ್ಯರ್ಥಿಗಳು ಅಥವಾ ಸಮಸ್ಯೆಗಳನ್ನು ಪ್ರಸ್ತುತಪಡಿಸಲು ವಿಫಲವಾದ ನಂತರ ಬಿಜೆಪಿ "ಅನ್ಯಾಯದ ವಿಧಾನಗಳ" ಮೂಲಕ ಚುನಾವಣೆಗಳನ್ನು ಗೆಲ್ಲಲು ಪ್ರಯತ್ನಿಸುತ್ತಿದೆ ಎಂದು ಕೇಜ್ರಿವಾಲ್‌ ಆರೋಪಿಸಿದರು.


ದಿಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಮತದಾರರ ಪಟ್ಟಿಯನ್ನು ತಿರುಚಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಎಎಪಿ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಭಾನುವಾರ (ಡಿಸೆಂಬರ್‌ ೨೯) ಆರೋಪಿಸಿದ್ದಾರೆ.

ರಾಜ್ಯಸಭಾ ಸಂಸದ ರಾಘವ್ ಚಡ್ಡಾ ಮತ್ತು ದೆಹಲಿ ಮುಖ್ಯಮಂತ್ರಿ ಅತಿಶಿ ಅವರೊಂದಿಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೇಜ್ರಿವಾಲ್, ಪ್ರಬಲ ಅಭ್ಯರ್ಥಿಗಳು ಅಥವಾ ಸಮಸ್ಯೆಗಳನ್ನು ಪ್ರಸ್ತುತಪಡಿಸಲು ವಿಫಲವಾದ ನಂತರ ಬಿಜೆಪಿ "ಅನ್ಯಾಯದ ವಿಧಾನಗಳ" ಮೂಲಕ ಚುನಾವಣೆಗಳನ್ನು ಗೆಲ್ಲಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು.

"ಬಿಜೆಪಿ ಈಗಾಗಲೇ ಚುನಾವಣೆಯಲ್ಲಿ ಸೋತಿದೆ. ಅವರಿಗೆ ಮುಖ್ಯಮಂತ್ರಿ ಅಭ್ಯರ್ಥಿ ಅಥವಾ ಸರಿಯಾದ ಅಭ್ಯರ್ಥಿಗಳಿಲ್ಲ. ಅವರು ಕುಟಿಲತೆಯ ಮೂಲಕ ಗೆಲ್ಲುವ ತಂತ್ರ ಮಾಡುತ್ತಿದ್ದಾರೆ. ಆದರೆ ನಾವು ಅವರನ್ನು ಯಶಸ್ವಿಯಾಗಲು ಬಿಡುವುದಿಲ್ಲ" ಎಂದು ಕೇಜ್ರಿವಾಲ್ ಹೇಳಿದರು.

ಒಂದು ಕ್ಷೇತ್ರದಲ್ಲಿ ಮಾತ್ರ ಬಿಜೆಪಿ 11,000 ಮತದಾರರ ಹೆಸಲು ಅರ್ಜಿ ಸಲ್ಲಿಸಿದೆ, ಆದರೆ ಮುಖ್ಯ ಚುನಾವಣಾ ಆಯುಕ್ತರ ಮಧ್ಯಪ್ರವೇಶದಿಂದ ಈ ಕ್ರಮ ನಿಲ್ಲಿಸಲಾಗಿದೆ ಎಂದು ದೆಹಲಿಯ ಮಾಜಿ ಮುಖ್ಯಮಂತ್ರಿ ಆರೋಪಿಸಿದರು.

"ನಾವು ಇದನ್ನು ಬಹಿರಂಗಪಡಿಸಿದ್ದೇವೆ. ಅದೃಷ್ಟವಶಾತ್ ಪ್ರಕ್ರಿಯೆಯನ್ನು ನಿಲ್ಲಿಸಲಾಗಿದೆ. ಡಿಸೆಂಬರ್ 15 ರಂದು ದೊಡ್ಡ ಪ್ರಮಾಣದ ಕಾರ್ಯಾಚರಣೆ ಪ್ರಾರಂಭವಾಗಿದ್ದು, 5,000 ಮತದಾರರ ಅಳಿಸುವಿಕೆ ಅರ್ಜಿಗಳು ಮತ್ತು 7,500 ಹೆಚ್ಚುವರಿ ವಿನಂತಿಗಳನ್ನು ತಮ್ಮ ವಿಧಾನಸಭಾ ಕ್ಷೇತ್ರವಾದ ನವದೆಹಲಿಯಲ್ಲಿ ಸಲ್ಲಿಸಲಾಗಿದೆ ಎಂದು ಕೇಜ್ರಿವಾಲ್ ಹೇಳಿದರು.

ಈ ಅಳಿಸಿ ಹಾಕುವ ಪ್ರಕ್ರಿಯೆ ಕ್ಷೇತ್ರದ ಶೇಕಡಾ 12ರಷ್ಟು ಮತಗಳನ್ನು ಬದಲಾಯಿಸಬಹುದು ಎಂದು ಅವರು ದೂರಿದಿದ್ದಾರೆ.

ಆಗಸ್ಟ್ 20 ಮತ್ತು ಅಕ್ಟೋಬರ್ 20 ರ ನಡುವೆ ನಡೆಸಿದ ಸಂಕ್ಷಿಪ್ತ ಪರಿಷ್ಕರಣೆಯ ನಂತರ ಅಕ್ಟೋಬರ್ 29 ರಂದು ಪ್ರಕಟವಾದ ಮತದಾರರ ಪಟ್ಟಿಯ ಪ್ರಕಾರ ಕ್ಷೇತ್ರದ ಒಟ್ಟು ಮತದಾರರ ಸಂಖ್ಯೆ 106,873 ಎಂದು ಕೇಜ್ರಿವಾಲ್‌ ಮಾಹಿತಿ ನೀಡಿದ್ದಾರೆ.

ಆಪರೇಷನ್‌ ಕಮಲ ಶುರು

ಆಪರೇಷನ್ ಕಮಲ ಈಗ ನನ್ನ ಕ್ಷೇತ್ರ ತಲುಪಿದೆ. ಚುನಾವಣಾ ಫಲಿತಾಂಶವನ್ನು ಬದಲಾಯಿಸಲು ಅವರು ಮತದಾರರ ಪಟ್ಟಿಯನ್ನು ತಿರುಚಲು ಪ್ರಯತ್ನಿಸುತ್ತಿದ್ದಾರೆ" ಎಂದು ಕೇಜ್ರಿವಾಲ್ ಆರೋಪಿಸಿದರು.

"ಈ ರೀತಿಯ ಕುತಂತ್ರವು ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುತ್ತದೆ. ಇಂತಹ ದುಷ್ಕೃತ್ಯಗಳನ್ನು ತಡೆಗಟ್ಟಲು ಚುನಾವಣಾ ಆಯೋಗವು ತನ್ನ ಕಟ್ಟುನಿಟ್ಟಾದ ಮೇಲ್ವಿಚಾರಣೆ ಮುಂದುವರಿಸಬೇಕೆಂದು ನಾವು ಮನವಿ ಮಾಡುತ್ತೇವೆ" ಎಂದು ಅವರು ಹೇಳಿದರು.

ಈ ಆರೋಪಗಳಿಗೆ ಬಿಜೆಪಿ ಇನ್ನೂ ಪ್ರತಿಕ್ರಿಯಿಸಿಲ್ಲ.

Read More
Next Story