
Pahalgam Terror Attack: ಆಘಾತ, ಸಂತಾಪ; ಭಾರತ ಪ್ರವಾಸದಲ್ಲಿರುವ ಅಮೆರಿಕ ಉಪಾಧ್ಯಕ್ಷ ವಿಷಾದ
ಪ್ರಧಾನಿ ನರೇಂದ್ರ ಮೋದಿ ಅವರ ಟ್ವೀಟ್ಗೆ ಪ್ರತಿಯಾಗಿ ಜೆ. ಡಿ ವ್ಯಾನ್ಸ್ ಅವರು ಈ ಟ್ವೀಟ್ ಮಾಡಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಪಾಲ್ಗಾಮ್ನಲ್ಲಿ ಭಯೋತ್ಪಾದಕ ದಾಳಿಯಲ್ಲಿ ಕರ್ನಾಟಕದ ಇಬ್ಬರು ಸೇರಿದಂತೆ 27 ಜನ ಮೃತಪಟ್ಟಿದ್ದಾರೆ. ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಭಾರತ ಪ್ರವಾಸದಲ್ಲಿರುವ ನಡುವೆಯೇ ಉಗ್ರರ ದಾಳಿ ನಡೆದಿದೆ. ಈ ನಡುವೆ ಅಮೆರಿಕದ ಅಧ್ಯಕ್ಷರು. “ಭಾರತದ ಜನರೊಂದಿಗೆ ನಾವಿದ್ದೇವೆ, ಮೃತರಿಗಾಗಿ ಪ್ರಾರ್ಥನೆಗಳು,” ಎಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಉಷಾ ಮತ್ತು ನಾನು ಭಾರತದ ಪಹಲ್ಗಾಮ್ ನಲ್ಲಿ ನಡೆದ ಆಘಾತಕಾರಿ ಭಯೋತ್ಪಾದಕ ದಾಳಿಯ ಸಂತ್ರಸ್ತರಿಗೆ ನಮ್ಮ ಸಂತಾಪ ವ್ಯಕ್ತಪಡಿಸುತ್ತೇವೆ. ಕಳೆದ ಕೆಲವು ದಿನಗಳಿಂದ, ನಾವು ಈ ದೇಶದ ಮತ್ತು ಇಲ್ಲಿನ ಜನರ ಸೌಂದರ್ಯ ಹಾಗೂ ಪ್ರೀತಿಯಲ್ಲಿ ಮಿಂದಿದ್ದೆವು. ಈ ಭಯಾನಕ ದಾಳಿಗೆ ಅವರು ಶೋಕಿಸುತ್ತಿರುವಾಗ ನಮ್ಮ ಪ್ರಾರ್ಥನೆಗಳು ಅವರೊಂದಿಗೆ ಇವೆ ಎಂದ ವಾನ್ಸ್ ಬರೆದುಕೊಂಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಟ್ವೀಟ್ಗೆ ಪ್ರತಿಯಾಗಿ ಜೆ. ಡಿ ವ್ಯಾನ್ಸ್ ಅವರು ಈ ಟ್ವೀಟ್ ಮಾಡಿದ್ದಾರೆ.
ಕಾಶ್ಮೀರ ದಾಳಿಯ ಜವಾಬ್ದಾರಿಯನ್ನು ಲಷ್ಕರ್-ಎ-ತೊಯ್ಬಾ ಬೆಂಬಲಿತ ಟಿಆರ್ಎಫ್ ಭಯೋತ್ಪಾದಕ ಸಂಘಟನೆ ಹೊತ್ತುಕೊಂಡಿದ್ದು, ಈ ಘಟನೆಯು ಭಾರತದ ಭದ್ರತಾ ಸವಾಲುಗಳನ್ನು ಮತ್ತೊಮ್ಮೆ ಎತ್ತಿ ತೋರಿಸಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಶ್ರೀನಗರಕ್ಕೆ ದೌಡಾಯಿಸಿದ್ದು, ಭದ್ರತಾ ವ್ಯವಸ್ಥೆಯನ್ನು ಪರಿಶೀಲಿಸಿದ್ದಾರೆ. ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ತುರ್ತು ಸಭೆ ನಡೆಸಿ, ರಾಜ್ಯದ ಅಧಿಕಾರಿಗಳನ್ನು ಕಾಶ್ಮೀರಕ್ಕೆ ಕಳುಹಿಸಿದ್ದಾರೆ. ಪ್ರಧಾನಿ ಮೋದಿ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದಾರೆ.
ವ್ಯಾನ್ಸ್‌ರ ಸಂತಾಪ ಸಂದೇಶವು ಈ ದುರಂತದ ಸಂದರ್ಭದಲ್ಲಿ ಭಾರತಕ್ಕೆ ಅಂತರರಾಷ್ಟ್ರೀಯ ಸಮುದಾಯದ ಬೆಂಬಲ ಎಂದು ಬಣ್ಣಿಸಲಾಗಿದೆ. ಭಾರತ ಮತ್ತು ಅಮೆರಿಕದ ನಡುವಿನ ಸಹಕಾರವು ವ್ಯಾಪಾರ, ರಕ್ಷಣೆ ಮತ್ತು ಭದ್ರತೆಯ ಕ್ಷೇತ್ರಗಳಲ್ಲಿ ಮತ್ತಷ್ಟು ಗಟ್ಟಿಯಾಗುವ ಸಾಧ್ಯತೆಯಿದೆ.