ಹಿಂದಿನ ಸರಕಾರದ ನಿರ್ಧಾರಗಳನ್ನು ಪರಿಶೀಲಿಸಲು ನಿತೀಶ್‌ ಕುಮಾರ್‌ ಕರೆ
x

ಹಿಂದಿನ ಸರಕಾರದ ನಿರ್ಧಾರಗಳನ್ನು ಪರಿಶೀಲಿಸಲು ನಿತೀಶ್‌ ಕುಮಾರ್‌ ಕರೆ

ನಿತೀಶ್‌ ಕುಮಾರ್ ಹಿಂದಿನ ಆಡಳಿತದಲ್ಲಿ ಆರ್ ಜೆಡಿ "ಭ್ರಷ್ಟಾಚಾರದಲ್ಲಿ" ತೊಡಗಿಸಿಕೊಂಡಿದೆ. ಅದರ ಬಗ್ಗೆ ತನಿಖೆಯನ್ನು ಪ್ರಾರಂಭಿಸುತ್ತೇನೆ ಎಂದು ಅವರು ತಿಳಿಸಿದ್ದಾರೆ.


Click the Play button to hear this message in audio format

ಪಾಟ್ನಾ: ಹಿಂದಿನ ಮಹಾಘಟಬಂಧನ್ ಸರ್ಕಾರದ ಮಾಜಿ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಮತ್ತು ಇಬ್ಬರು ಆರ್ ಜೆಡಿ ಸಚಿವ ಲಲಿತ್ ಯಾದವ್ ಮತ್ತು ರಮಾನಂದ್ ಯಾದವ್ ಅವರ ನೇತೃತ್ವದಲ್ಲಿ ಇಲಾಖೆಗಳ ಎಲ್ಲಾ ನಿರ್ಧಾರಗಳನ್ನು ಪರಿಶೀಲಿಸಲು ಎನ್ ಡಿಎ ಸರಕಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಆದೇಶಿಸಿದ್ದಾರೆ.

ಫೆಬ್ರವರಿ 16 ರಂದು ಸಿಎಂ ನೇತೃತ್ವದ ಕ್ಯಾಬಿನೆಟ್ ಸೆಕ್ರೆಟರಿಯೇಟ್ ಇಲಾಖೆ ಹೊರಡಿಸಿದ ಪತ್ರದಲ್ಲಿ ಆರೋಗ್ಯ, ರಸ್ತೆ ನಿರ್ಮಾಣ, ನಗರಾಭಿವೃದ್ಧಿ ಮತ್ತು ವಸತಿ ಮತ್ತು ಗ್ರಾಮೀಣ ಕಾಮಗಾರಿ ಇಲಾಖೆಗಳ ಅಧಿಕಾರಿಗಳು ಹಿಂದಿನ ರಾಜ್ಯದಲ್ಲಿ ಇದ್ದ ಮೈತ್ರಿ ಸರಕಾರ ಮಹಾಘಟಬಂಧನ್ ಅವಧಿಯಲ್ಲಿ ತೆಗೆದುಕೊಂಡ ನಿರ್ಧಾರಗಳನ್ನು ಪರಿಶೀಲಿಸುವಂತೆ ತಿಳಿಸಲಾಗಿದೆ. ಈ ವಿಭಾಗಗಳ ನೇತೃತ್ವವನ್ನು ತೇಜಸ್ವಿ ಯಾದವ್ ವಹಿಸಿದ್ದರು.

ಅಲ್ಲದೆ ಹಿಂದಿನ ಸರ್ಕಾರದಲ್ಲಿ ಆರ್‌ ಜೆಡಿ ಮಾಜಿ ಮಂತ್ರಿಗಳಾದ ಲಲಿತ್ ಯಾದವ್ ಮತ್ತು ರಮಾನಂದ್ ಯಾದವ್ ಅವರು ತೆಗೆದುಕೊಂಡ ನಿರ್ಧಾರಗಳನ್ನು ಪರಿಶೀಲಿಸಲು ಸಾರ್ವಜನಿಕ ಆರೋಗ್ಯ ಎಂಜಿನಿಯರಿಂಗ್ ಇಲಾಖೆ (PHED) ಮತ್ತು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಉನ್ನತ ಅಧಿಕಾರಿಗಳನ್ನು ಸರ್ಕಾರ ಕೇಳಿದೆ.

ಫೆಬ್ರವರಿ 12 ರಂದು ರಾಜ್ಯ ವಿಧಾನಸಭೆಯಲ್ಲಿ ವಿಶ್ವಾಸಮತದಲ್ಲಿ ಗೆದ್ದ ನಿತೀಶ್‌ ಕುಮಾರ್ ಹಿಂದಿನ ಆಡಳಿತದಲ್ಲಿ ಆರ್ಜೆಡಿ "ಭ್ರಷ್ಟಾಚಾರ"ದಲ್ಲಿ ತೊಡಗಿಸಿಕೊಂಡಿದೆ. ಅದರ ಬಗ್ಗೆ ತನಿಖೆಯನ್ನು ಪ್ರಾರಂಭಿಸುತ್ತೇನೆ ಎಂದು ಅವರು ತಿಳಿಸಿದ್ದಾರೆ.

ಸಂಪುಟ ಸಚಿವಾಲಯದ ನಿರ್ಧಾರವನ್ನು ಶ್ಲಾಘಿಸಿದ ಜೆಡಿಯು ಹಿರಿಯ ನಾಯಕ ನೀರಜ್ ಕುಮಾರ್, ಬಿಹಾರದ ಎನ್ಡಿಎ ಸರ್ಕಾರ ತೆಗೆದುಕೊಂಡಿರುವ ನಿರ್ಧಾರ ಉತ್ತಮವಾಗಿದೆ. ಆರ್‌ಜೆಡಿ ಮಂತ್ರಿಗಳು ತೆಗೆದುಕೊಂಡ ಎಲ್ಲಾ ನಿರ್ಧಾರಗಳನ್ನು ಈಗ ಪರಿಶೀಲಿಸಲಾಗುತ್ತದೆ ಮತ್ತು ಸಂಶೋಧನೆಗಳ ಆಧಾರದ ಮೇಲೆ ತನಿಖೆಗೆ ಆದೇಶಿಸಲಾಗುತ್ತದೆ. ಆ ನಾಯಕರ (RJD) ತಪ್ಪಿತಸ್ಥರ ವಿರುದ್ಧ ಕ್ರಮವನ್ನು ಪ್ರಾರಂಭಿಸಲಾಗುವುದು ಎಂದು ತಿಳಿಸಿದ್ದಾರೆ.

ಎನ್‌ ಡಿಎ ಸರ್ಕಾರದ ನಿರ್ಧಾರದ ಬಗ್ಗೆ ಪ್ರತಿಕ್ರಿಯಿಸಿದ ಆರ್ಜೆಡಿ ಬಿಹಾರ ಘಟಕದ ವಕ್ತಾರ ಮೃತ್ಯುಂಜಯ್ ತಿವಾರಿ, 'ನಮ್ಮ ನಾಯಕ ತೇಜಸ್ವಿ ಯಾದವ್ಗೆ ಸಿಎಂ ಮತ್ತು ಬಿಜೆಪಿ ನಾಯಕರು ಹೆದರುತ್ತಿದ್ದಾರೆ, ಹಿಂದಿನ ಮಹಾಘಟಬಂಧನ್ ಸರ್ಕಾರ ಸಾಕಷ್ಟು ಜನಸ್ನೇಹಿ ಕೆಲಸಗಳನ್ನು ಮಾಡಿದೆ ಮತ್ತು ಉದ್ಯೋಗದಂತಹ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡಿದೆ. ಏಳರಿಂದ ಎಂಟು ಲಕ್ಷ ಯುವಕರಿಗೆ ಮತ್ತು ಸಮಾಜದ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ದುರ್ಬಲ ವರ್ಗಗಳಿಗೆ ಸಾಮಾಜಿಕ ಭದ್ರತೆಯನ್ನು ಒದಗಿಸಿದೆ. ಆರ್‌ ಜೆಡಿ ಯಾವುದೇ ತನಿಖೆಗೆ ಹೆದರುವುದಿಲ್ಲ. ಅವರು (ಎನ್‌ ಡಿಎ ಸರ್ಕಾರ) ಅವರು ಏನು ಬೇಕಾದರೂ ಮಾಡಲಿ ಎಂದು ತಿವಾರಿ ಹೇಳಿದ್ದಾರೆ.

Read More
Next Story