ಭಯಪಡುವ ಅಗತ್ಯವಿಲ್ಲ; ಸಾಕಷ್ಟು ತೈಲ ಲಭ್ಯವಿದೆ: ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ
x
ಗಾಬರಿಗೊಳ್ಳಲು ಯಾವುದೇ ಕಾರಣವಿಲ್ಲ, ಜಗತ್ತಿನಲ್ಲಿ ಸಾಕಷ್ಟು ತೈಲ ಲಭ್ಯವಿದೆ ಎಂದು ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಹೇಳಿದ್ದಾರೆ

ಭಯಪಡುವ ಅಗತ್ಯವಿಲ್ಲ; ಸಾಕಷ್ಟು ತೈಲ ಲಭ್ಯವಿದೆ: ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ

ಮಧ್ಯಪ್ರಾಚ್ಯ ಸಂಘರ್ಷದ ಸಂಭವನೀಯ ವಿಸ್ತರಣೆಯಿಂದ ಉಂಟಾಗುವ ಯಾವುದೇ ಸಂಭಾವ್ಯ ತೈಲ ಪೂರೈಕೆ ಅಡೆತಡೆಗಳನ್ನು ದೇಶವು ನಿರ್ವಹಿಸಬಹುದು ಎಂದು ತೈಲ ಸಚಿವ ಹರ್ದೀಪ್ ಸಿಂಗ್ ಪುರಿ ಮಂಗಳವಾರ ದೆಹಲಿಯಲ್ಲಿ ತಿಳಿಸಿದ್ದಾರೆ.


Click the Play button to hear this message in audio format

ಮಧ್ಯಪ್ರಾಚ್ಯ ಸಂಘರ್ಷದ ಸಂಭವನೀಯ ವಿಸ್ತರಣೆಯಿಂದ ಉಂಟಾಗುವ ಯಾವುದೇ ಸಂಭಾವ್ಯ ತೈಲ ಪೂರೈಕೆ ಅಡೆತಡೆಗಳನ್ನು ಭಾರತ ನಿರ್ವಹಿಸಲಿದೆ ಎಂದು ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಮಂಗಳವಾರ ದೆಹಲಿಯಲ್ಲಿ ತಿಳಿಸಿದ್ದಾರೆ.

ಅಕ್ಟೋಬರ್ 1 ರ ಕ್ಷಿಪಣಿ ದಾಳಿಗೆ ಇರಾನ್ ವಿರುದ್ಧ ಇಸ್ರೇಲ್ ಪ್ರತೀಕಾರ ತೀರಿಸಿಕೊಳ್ಳುತ್ತದೆಯೇ ಎಂದು ತೈಲ ಮಾರುಕಟ್ಟೆ ನಿರೀಕ್ಷಿಸಿರುವಂತೆಯೇ ಅಂತರರಾಷ್ಟ್ರೀಯ ತೈಲ ಬೆಲೆಗಳು ಕೇವಲ ಒಂದು ವಾರದ ಅವಧಿಯಲ್ಲಿ ಪ್ರತಿ ಬ್ಯಾರೆಲ್‌ಗೆ ಸುಮಾರು USD 70 ರಿಂದ ಬ್ಯಾರೆಲ್‌ಗೆ USD 79 ಕ್ಕೆ ಏರಿದೆ.

ದೇಶವು ಇಂಧನ ಆಮದಿನ ಬಗ್ಗೆ ಗಾಬರಿಯಾಗುವ ಅವಶ್ಯಕತೆ ಇಲ್ಲ. ಜಗತ್ತಿನಲ್ಲಿ ಸಾಕಷ್ಟು ತೈಲ ಲಭ್ಯವಿದೆ. ಭಾರತವು ವಿಶ್ವದ ಮೂರನೇ ಅತಿದೊಡ್ಡ ತೈಲ-ಆಮದು ಮಾಡಿಕೊಳ್ಳುವ ರಾಷ್ಟ್ರವಾಗಿದೆ. ಅದರ ಕಚ್ಚಾ ತೈಲ ಅಗತ್ಯಗಳನ್ನು ಪೂರೈಸಲು ಶೇಕಡಾ 85 ಕ್ಕಿಂತ ಹೆಚ್ಚು ಆಮದಿನ ಮೇಲೆ ಅವಲಂಬಿತವಾಗಿದೆ. ಪರಿಸ್ಥಿತಿಯನ್ನು ನಿರ್ವಹಣೆ ಮಾಡಬಹುದಾಗಿದ್ದು, ಈ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ. ಈ ಬಗ್ಗೆ ನಮಗೆ ವಿಶ್ವಾಸವಿದೆ ಎಂದು ಅವರು ಹೇಳಿದರು.

ಓಮನ್ ಮತ್ತು ಇರಾನ್ ನಡುವೆ ಇರುವ ಹಾರ್ಮುಜ್ ಜಲಸಂಧಿಯು ಪರ್ಷಿಯನ್ ಕೊಲ್ಲಿಯನ್ನು ಒಮಾನ್ ಕೊಲ್ಲಿ ಮತ್ತು ಅರೇಬಿಯನ್ ಸಮುದ್ರದೊಂದಿಗೆ ಸಂಪರ್ಕಿಸುತ್ತದೆ. ಜಾಗತಿಕ ತೈಲದ ಐದನೇ ಒಂದು ಭಾಗವು ಜಲಸಂಧಿಯ ಮೂಲಕ ಹರಿಯುತ್ತದೆ. ಎಲ್ಲಾ ಪ್ರಮುಖ ತೈಲ ಉತ್ಪಾದಕ ದೇಶಗಳಾಗಿರುವ ಸೌದಿ ಅರೇಬಿಯಾ, ಇರಾಕ್, ಕುವೈತ್ ಮತ್ತು ಯುಎಇ ಈ ಜಲಸಂಧಿಯ ಮೂಲಕ ತೈಲವನ್ನು ರಫ್ತು ಮಾಡುತ್ತವೆ. ಸೌದಿ ಅರೇಬಿಯಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಮಾತ್ರ ಹಾರ್ಮುಜ್ ಜಲಸಂಧಿಯನ್ನು ಅವಲಂಬಿಸದೆ ಸ್ವತಂತ್ರ ಪೈಪ್‌ಲೈನ್‌ಗಳನ್ನು ಹೊಂದಿದ್ದು, ಅವುಗಳ ಮೂಲಕ ತೈಲ ರಫ್ತು ಮಾಡುತ್ತವೆ.

ಜನವರಿ 2023 ರಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳಲ್ಲಿ ಕಡಿತದ ಭರವಸೆ ಇತ್ತು. ಭಾರತ ಆಮದು ಮಾಡಿಕೊಳ್ಳುವ ಕಚ್ಚಾ ತೈಲದ ಬೆಲೆ ಸೆಪ್ಟೆಂಬರ್‌ನಲ್ಲಿ ಪ್ರತಿ ಬ್ಯಾರೆಲ್‌ಗೆ ಸರಾಸರಿ USD 73.69 ರಷ್ಟಿತ್ತು. ಮಾರ್ಚ್‌ನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಲೀಟರ್‌ಗೆ 2 ರೂಪಾಯಿಗಳಷ್ಟು ಕಡಿತಗೊಳಿಸಿದಾಗ ಸುಮಾರು ಬ್ಯಾರೆಲ್‌ಗೆ USD 83-84 ರಿಂದ ಕಡಿಮೆಯಾಗಿದೆ. ಆದರೆ ಈಗ ಯುದ್ಧದ ಪರಿಸ್ಥಿತಿ ಇಂಧನಗಳ ಬೆಲೆಗಳು ಕಡಿಮೆಯಾಗುವ ಭರವಸೆಯನ್ನು ಹುಸಿಗೊಳಿಸಿದೆ.

Read More
Next Story