ತಿಹಾರ್‌ ಜೈಲಿನಿಂದ ಹೊರಬಂದ ಪ್ರಬೀರ್ ಪುರ್ಕಾಯಸ್ಥ
x

ತಿಹಾರ್‌ ಜೈಲಿನಿಂದ ಹೊರಬಂದ ಪ್ರಬೀರ್ ಪುರ್ಕಾಯಸ್ಥ

ಅವರ ಬಂಧನ ʻಅಸಿಂಧುʼ ಎಂದು ಸುಪ್ರೀಂ ಕೋರ್ಟ್‌ ಹೇಳಿತ್ತು


ನವದೆಹಲಿ, ಮೇ 15- ನ್ಯೂಸ್‌ಕ್ಲಿಕ್ ಸಂಸ್ಥಾಪಕ ಮತ್ತು ಪ್ರಧಾನ ಸಂಪಾದಕ ಪ್ರಬೀರ್ ಪುರ್ಕಾಯಸ್ಥ ಅವರನ್ನು ತಿಹಾರ್ ಜೈಲಿನಿಂದ ಬುಧವಾರ ಬಿಡುಗಡೆ ಮಾಡಲಾಗಿದೆ.

ಸುಪ್ರೀಂ ಕೋರ್ಟ್ ಅವರ ಬಂಧನವನ್ನು ʻಅಸಿಂಧುʼ ಎಂದು ಘೋಷಿಸಿದ ಕೆಲವೇ ಗಂಟೆಗಳ ನಂತರ ಅವರು ಬಿಡುಗಡೆಯಾಗಿದ್ದಾರೆ. ಅವರು 2023ರ ನವೆಂಬರ್ 2 ರಿಂದ ಜೈಲಿನಲ್ಲಿದ್ದರು.

ಚೀನಾ ಪರ ಪ್ರಚಾರ ಮಾಡಲು ಹಣ ಪಡೆದ ಆರೋಪದ ಮೇಲೆ ದೆಹಲಿ ಪೊಲೀಸ್ ವಿಶೇಷ ದಳವು 2023ರ ಅಕ್ಟೋಬರ್ 3 ರಂದು ಕಾನೂನುಬಾಹಿರ ಚಟುವಟಿಕೆ(ತಡೆಗಟ್ಟುವಿಕೆ) ಕಾಯ್ದೆ (ಯುಎಪಿಎ) ಅಡಿಯಲ್ಲಿ ಅವರನ್ನು ಬಂಧಿಸಿತ್ತು.

ಅವರ ವಕೀಲ ಅರ್ಷ್‌ದೀಪ್ ಸಿಂಗ್ ಖುರಾನಾ ಪ್ರಕಾರ, ʻರಾತ್ರಿ 9 ಗಂಟೆಗೆ ಅವರು ರೋಹಿಣಿ ಸೆರೆಮನೆ ಸಂಖ್ಯೆ 10 ರಿಂದ ಹೊರಬಂದರು. ಕುಟುಂಬದ ಸದಸ್ಯರು ಮತ್ತು ಸ್ನೇಹಿತರು ಜೈಲು ಸಂಕೀರ್ಣದ ಹೊರಗೆ ಅವರನ್ನು ಬರಮಾಡಿಕೊಂಡರು.

ʻಸಂವಿಧಾನದ 20, 21 ಮತ್ತು 22 ನೇ ವಿಧಿಯಡಿ ಜೀವಿಸುವ ಹಕ್ಕು ಮತ್ತು ವೈಯಕ್ತಿಕ ಸ್ವಾತಂತ್ರ್ಯ ʻಅತ್ಯಂತ ಪವಿತ್ರʼ ಮೂಲಭೂತ ಹಕ್ಕು. ಯುಎಪಿಎ ಅಥವಾ ಇನ್ನಿತರ ಕಾಯಿದೆಯಡಿ ಬಂಧಿಸಲ್ಪಟ್ಟ ವ್ಯಕ್ತಿಗೆ ಬಂಧನಕ್ಕೆ ಕಾರಣವೇನು ಎಂಬುದನ್ನು ತಿಳಿದುಕೊಳ್ಳುವ ಮೂಲಭೂತ ಮತ್ತು ಶಾಸನಬದ್ಧ ಹಕ್ಕು ಇದೆ,ʼ ಎಂದು ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ ಮತ್ತು ಸಂದೀಪ್ ಮೆಹ್ತಾ ಅವರ ಪೀಠ ಹೇಳಿತ್ತು. ಅಂಥ ಲಿಖಿತ ಪ್ರತಿಯನ್ನು ಬಂಧಿತನಿಗೆ ʻಸಹಜವಾಗಿ ಮತ್ತು ವಿನಾಯಿತಿ ಇಲ್ಲದೆ ಬೇಗನೆʼ ಒದಗಿಸಬೇಕು ಎಂದು ನ್ಯಾಯಾಲಯ ಹೇಳಿತ್ತು.

2023ರ ಅಕ್ಟೋಬರ್ 13 ರಂದು ದೆಹಲಿ ಹೈಕೋರ್ಟ್ ತನ್ನ ಬಂಧನ ಮತ್ತು ಪೊಲೀಸ್ ಕಸ್ಟಡಿ ಕುರಿತ ಅರ್ಜಿಯನ್ನು ವಜಾಗೊಳಿಸಿದ ಆದೇಶವನ್ನು ಪ್ರಶ್ನಿಸಿ ಪುರ್ಕಾಯಸ್ಥ ಅರ್ಜಿ ಸಲ್ಲಿಸಿದ್ದರು.

Read More
Next Story