ಸ್ಟ್ರೇಂಜರ್ ಥಿಂಗ್ಸ್ -5 ಪ್ರಸಾರ ವೇಳೆಯೇ ನೆಟ್‌ಫ್ಲಿಕ್ಸ್ ಸ್ಥಗಿತ; ಸಾವಿರಾರು ಬಳಕೆದಾರರಿಗೆ ನಿರಾಸೆ
x

ನೆಟ್‌ಫ್ಲಿಕ್ಸ್ ಸ್ಥಗಿತ

'ಸ್ಟ್ರೇಂಜರ್ ಥಿಂಗ್ಸ್ -5' ಪ್ರಸಾರ ವೇಳೆಯೇ ನೆಟ್‌ಫ್ಲಿಕ್ಸ್ ಸ್ಥಗಿತ; ಸಾವಿರಾರು ಬಳಕೆದಾರರಿಗೆ ನಿರಾಸೆ

ಹೊಸ ಸಂಚಿಕೆಗಳು ಪ್ರಸಾರ ಆರಂಭಿಸಿದ ಕೆಲವೇ ನಿಮಿಷಗಳಲ್ಲಿ ಬಳಕೆದಾರರ ಮೊಬೈಲ್ ಪರದೆಗಳು ಫ್ರೀಜ್ ಆಗಿವೆ. ಆ್ಯಪ್‌ಗಳು ಸ್ಥಗಿತಗೊಂಡಿವೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ದೂರುಗಳ ಸುರಿಮಳೆಯಾಗಿದೆ.


Click the Play button to hear this message in audio format

ಅಮೆರಿಕದಲ್ಲಿ ಬುಧವಾರ ಸಂಜೆ ನೆಟ್‌ಫ್ಲಿಕ್ಸ್ ಸೇವೆಯಲ್ಲಿ ಭಾರೀ ವ್ಯತ್ಯಯ ಉಂಟಾಗಿದೆ. ತಾಂತ್ರಿಕ ಸ್ಥಗಿತದಿಂದಾಗಿ ಸಾವಿರಾರು ಬಳಕೆದಾರರಿಗೆ ಸ್ಟ್ರೀಮಿಂಗ್ ಸೇವೆ ಸ್ಥಗಿತಗೊಂಡಿದ್ದು, ಇದರ ಪರಿಣಾಮ ಭಾರತದಲ್ಲಿಯೂ ತಾಂತ್ರಿಕ ದೋಷಗಳು ಕಂಡುಬಂದಿವೆ.

'ಸ್ಟ್ರೇಂಜರ್ ಥಿಂಗ್ಸ್ ಸೀಸನ್ 5 ಸರಣಿ -1' ಬಿಡುಗಡೆಯಾದ ಸಮಯದಲ್ಲೇ ಈ ಅಡಚಣೆ ಸಂಭವಿಸಿದ್ದು, ಇದು ವೀಕ್ಷಕರ ಆಕ್ರೋಶಕ್ಕೆ ಕಾರಣವಾಗಿದೆ. ಹೊಸ ಸಂಚಿಕೆಗಳು ಪ್ರಸಾರ ಆರಂಭಿಸಿದ ಕೆಲವೇ ನಿಮಿಷಗಳಲ್ಲಿ, ಬಳಕೆದಾರರ ಮೊಬೈಲ್ ಪರದೆಗಳು ಫ್ರೀಜ್ ಆಗಿವೆ. ಆ್ಯಪ್‌ಗಳು ಸ್ಥಗಿತಗೊಂಡಿವೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ದೂರುಗಳ ಸುರಿಮಳೆಯಾಗಿದೆ.

ಬಳಕೆದಾರರ ವರದಿಗಳನ್ನು ಕ್ರೋಢೀಕರಿಸುವ 'ಡೌನ್‌ಡೆಕ್ಟರ್' ಪ್ರಕಾರ, ವರದಿ ಸಿದ್ಧಪಡಿಸುವ ಹೊತ್ತಿಗೆ ಅಮೆರಿಕದಲ್ಲಿ 8,000ಕ್ಕೂ ಹೆಚ್ಚು ಸಮಸ್ಯೆಗಳ ವರದಿಗಳು ದಾಖಲಾಗಿದ್ದವು. ಇವುಗಳಲ್ಲಿ ಬಹುಪಾಲು ವರದಿಗಳು ಸ್ಟ್ರೀಮಿಂಗ್ ವೈಫಲ್ಯಕ್ಕೆ ಸಂಬಂಧಿಸಿದ್ದಾಗಿದ್ದರೆ, ಗಣನೀಯ ಪ್ರಮಾಣದ ದೂರುಗಳು ಸರ್ವರ್ ಸಂಪರ್ಕ ದೋಷ ಸೂಚಿಸಿವೆ. ಅಷ್ಟೇ ಅಲ್ಲ, ಇದೇ ಅವಧಿಯಲ್ಲಿ ಭಾರತದಲ್ಲಿಯೂ ನೂರಾರು ಬಳಕೆದಾರರು ಇದೇ ರೀತಿಯ ತಾಂತ್ರಿಕ ದೋಷಗಳನ್ನು ವರದಿ ಮಾಡಿದ್ದಾರೆ.

ಡೌನ್‌ಡೆಕ್ಟರ್‌ನ ವಿಶ್ಲೇಷಣೆಯ ಪ್ರಕಾರ, ಶೇ. 51ರಷ್ಟು ದೂರುಗಳು ಸ್ಟ್ರೀಮಿಂಗ್ ಸಮಸ್ಯೆಗಳಿಗೆ ಮತ್ತು ಶೇ. 41ರಷ್ಟು ಸರ್ವರ್ ಸಂಬಂಧಿತ ಸಮಸ್ಯೆಗಳಿಗೆ ಸಂಬಂಧಿಸಿವೆ. ಈ ಸ್ಥಗಿತಕ್ಕೆ ಕಾರಣವೇನು ಎಂಬುದರ ಕುರಿತು ವರದಿ ಪ್ರಕಟವಾಗುವ ವೇಳೆಗೆ ನೆಟ್‌ಫ್ಲಿಕ್ಸ್ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ.

ಅನೇಕ ಬಳಕೆದಾರರು ಪರದೆಗಳು ಫ್ರೀಜ್ ಆಗಿರುವ, ನಿರಂತರವಾಗಿ ಲೋಡಿಂಗ್ ಆಗುತ್ತಿರುವ ಮತ್ತು ಶೀರ್ಷಿಕೆಗಳನ್ನು ತೆರೆಯಲು ನಿರಾಕರಿಸಿದ ಆ್ಯಪ್‌ಗಳ ಸ್ಕ್ರೀನ್‌ಶಾಟ್‌ಗಳನ್ನು ಹಂಚಿಕೊಂಡಿದ್ದಾರೆ. ಸಾಮಾಜಿಕ ಮಾಧ್ಯಮ 'X' ನಲ್ಲಿ ಅಭಿಮಾನಿಗಳು ನೆಟ್‌ಫ್ಲಿಕ್ಸ್‌ ತಾಂತ್ರಿಕ ದೋಷದ ಮತ್ತು 'ಸ್ಟ್ರೇಂಜರ್ ಥಿಂಗ್ಸ್' ಪ್ರೀಮಿಯರ್‌ ಪೋಸ್ಟರ್‌ಗಳನ್ನು ಜೋಡಿಸಿ ಹಂಚಿಕೊಂಡಿದ್ದಾರೆ.

"ನಾನು ಬೆಳಿಗ್ಗೆ 1 ಗಂಟೆಯವರೆಗೆ ಎಚ್ಚರವಾಗಿದ್ದು, ತಕ್ಷಣವೇ ನೆಟ್‌ಫ್ಲಿಕ್ಸ್ ಸ್ಥಗಿತಗೊಂಡಿದೆ" ಎಂದು ಒಬ್ಬ ಬಳಕೆದಾರರು ಬರೆದರೆ, "ಸ್ಟ್ರೇಂಜರ್ ಥಿಂಗ್ಸ್ ನೋಡಲು ಇಡೀ ದಿನ ಕಾದಿದ್ದೆ, ಈಗ ನೆಟ್‌ಫ್ಲಿಕ್ಸ್ ಡೌನ್" ಎಂದು ಇನ್ನೊಬ್ಬರು ಬೇಸರ ವ್ಯಕ್ತಪಡಿಸಿದ್ದಾರೆ.

"ನನಗೆ ನೆಟ್‌ಫ್ಲಿಕ್ಸ್ ಡೌನ್ ಆಗಿದೆ ಅನಿಸುತ್ತಿದೆ, ಅಯ್ಯೋ!" ಎಂದು ಮತ್ತೊಬ್ಬ ಅಭಿಮಾನಿ ಹೇಳಿದ್ದಾರೆ. "ಹೊಸ 'ಸ್ಟ್ರೇಂಜರ್ ಥಿಂಗ್ಸ್' ಸಂಚಿಕೆಗಳನ್ನು ಮುಗಿಸುವವರೆಗೆ ನಾನು ಈ ಆ್ಯಪ್‌ನಿಂದ ದೂರ ಉಳಿಯುತ್ತೇನೆ, ಏಕೆಂದರೆ ಯಾವುದೇ ಸ್ಪಾಯ್ಲರ್‌ಗಳು ಸಿಗಬಾರದು" ಎಂದು ಒಬ್ಬ ಬಳಕೆದಾರರು ಆತಂಕ ವ್ಯಕ್ತಪಡಿಸಿದ್ದಾರೆ.

'ಸ್ಟ್ರೇಂಜರ್ ಥಿಂಗ್ಸ್' ಸರಣಿಯು ನೆಟ್‌ಫ್ಲಿಕ್ಸ್‌ನ ಪ್ಲಾಟ್‌ಫಾರ್ಮ್ ಮೇಲೆ ಒತ್ತಡ ಹೇರುತ್ತಿರುವುದು ಇದೇ ಮೊದಲಲ್ಲ. ಜುಲೈ 2022 ರಲ್ಲಿ, ಸೀಸನ್ 4 ರ ಅಂತಿಮ ಎರಡು ಸಂಚಿಕೆಗಳು ಬಿಡುಗಡೆಯಾದಾಗಲೂ ನೆಟ್‌ಫ್ಲಿಕ್ಸ್ ಅಲ್ಪಾವಧಿಗೆ ಸ್ಥಗಿತಗೊಂಡಿತ್ತು.

Read More
Next Story