NEET UG| ಫಲಿತಾಂಶ ಪ್ರಕಟ, ರಾಜಸ್ಥಾನದ ಮಹೇಶ್‌ ಕುಮಾರ್‌ಗೆ ಫಸ್ಟ್‌ ರ್ಯಾಂಕ್‌
x
ಸಾಂದರ್ಭಿಕ ಚಿತ್ರ

NEET UG| ಫಲಿತಾಂಶ ಪ್ರಕಟ, ರಾಜಸ್ಥಾನದ ಮಹೇಶ್‌ ಕುಮಾರ್‌ಗೆ ಫಸ್ಟ್‌ ರ್ಯಾಂಕ್‌

ಅಸ್ಸಾಮಿ, ಬಂಗಾಳಿ, ಇಂಗ್ಲಿಷ್, ಗುಜರಾತಿ, ಹಿಂದಿ, ಕನ್ನಡ, ಮಲಯಾಳಂ, ಮರಾಠಿ, ಒಡಿಯಾ, ಪಂಜಾಬಿ, ತಮಿಳು, ತೆಲುಗು ಮತ್ತು ಉರ್ದು ಸೇರಿದಂತೆ ಒಟ್ಟು 13 ಭಾಷೆಗಳಲ್ಲಿ ಪರೀಕ್ಷೆ ನಡೆಸಲಾಗಿತ್ತು.


ವೈದ್ಯಕೀಯ ಅರ್ಹತಾ ಪರೀಕ್ಷೆಯ (ನೀಟ್‌ ಯುಜಿ) 2025ನೇ ಸಾಲಿನ ಫಲಿತಾಂಶ ಪ್ರಕಟಗೊಂಡಿದ್ದು ರಾಜಸ್ಥಾನದ ಮಹೇಶ್‌ ಕುಮಾರ್‌ ಪ್ರಥಮ ಮತ್ತು ಮಧ್ಯಪ್ರದೇಶದ ಉತ್ಕರ್ಷ್‌ ಅವಧಿಯಾ ದ್ವಿತೀಯ ರ್ಯಾಂಕ್‌ ಪಡೆದಿದ್ದಾರೆ. ಇದೇ ವೇಳೆ ಕರ್ನಾಟಕದ ಆರು ಮಂದಿ ಅಗ್ರ 100 ಶ್ರೇಯಾಂಕದೊಳಗೆ ಸ್ಥಾನ ಪಡೆದಿದ್ದಾರೆ.

ಮೇ 14ರಂದು ದೇಶಾದ್ಯಂತ ಪರೀಕ್ಷೆ ನಡೆದಿದ್ದು, 5,468 ಕೇಂದ್ರಗಳಲ್ಲಿ 22 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಅಸ್ಸಾಮಿ, ಬಂಗಾಳಿ, ಇಂಗ್ಲಿಷ್, ಗುಜರಾತಿ, ಹಿಂದಿ, ಕನ್ನಡ, ಮಲಯಾಳಂ, ಮರಾಠಿ, ಒಡಿಯಾ, ಪಂಜಾಬಿ, ತಮಿಳು, ತೆಲುಗು ಮತ್ತು ಉರ್ದು ಸೇರಿದಂತೆ ಒಟ್ಟು 13 ಭಾಷೆಗಳಲ್ಲಿ ಪರೀಕ್ಷೆ ನಡೆಸಲಾಗಿತ್ತು.

ಪರೀಕ್ಷೆಗೆ ಹಾಜರಾಗಿದ್ದ 22,09,218 ವಿದ್ಯಾರ್ಥಿಗಳಲ್ಲಿ 12,36,531 ಮಂದಿ ಉತ್ತೀರ್ಣರಾಗಿದ್ದಾರೆ. ಈ ಪೈಕಿ 5,14,063 ವಿದ್ಯಾರ್ಥಿಗಳು, 7,22, 462 ವಿದ್ಯಾರ್ಥಿನಿಯರು ಹಾಗೂ ಆರು ಮಂದಿ ಲಿಂಗತ್ವ ಅಲ್ಪಸಂಖ್ಯಾತರಿದ್ದಾರೆ.

ಕರ್ನಾಟಕದ ನಿಖಿಲ್‌ ಸೊನ್ನದ್​ ೧೨, ರುಚಿರಾ ಗುಪ್ತಾ 22, ತೇಜಸ್ ಶೈಲೇಶ್ ಗೋಟ್ಗಲ್ಕರ್ 38, ಪ್ರಾಂಶು ಜಹಗೀದಾರ್‌ 42, ಹರಿಣಿ ಶ್ರೀರಾಮ್‌ 72ನೇ, ದಿಗಂತ್‌ ಎಸ್‌. 80ನೇ ರ್ಯಾಂಕ್‌ ಪಡೆದಿದ್ದಾರೆ.

ಫಲಿತಾಂಶ ಪರಿಶೀಲಿಸುವುದು ಹೇಗೆ?

ಮೊದಲು ನೀಟ್‌ (NEET) ಅಧಿಕೃತ ವೆಬ್‌ಸೈಟ್ neet.nta.nic.in ಗೆ ಹೋಗಿ.

ಮುಖಪುಟದಲ್ಲಿ NEET UG 2025 ಫಲಿತಾಂಶ ಲಿಂಕ್ ಅನ್ನು ಕ್ಲಿಕ್ ಮಾಡಿ.

ನಂತರ ನಿಮ್ಮ ಲಾಗಿನ್ ಆಗಲು ದಾಖಲೆಗಳನ್ನು ನಮೂದಿಸಿ.

ನಿಮ್ಮ ಫಲಿತಾಂಶ ಪರಿಶೀಲಿಸಿ ನಂತರ ಸ್ಕೋರ್‌ಕಾರ್ಡ್ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ. ವ

Read More
Next Story