NEET-UG SCAM: ಪ್ರಮುಖ ಆರೋಪಿ ಸೇರಿದಂತೆ ಇಬ್ಬರ ಬಂಧನ
ಹೊಸದಿಲ್ಲಿ, ಜು.16 - ಜಾರ್ಖಂಡ್‌ನ ಹಜಾರಿಬಾಗ್‌ನಲ್ಲಿ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯ ಟ್ರಂಕ್‌ನಿಂದ ಪ್ರಶ್ನೆಪತ್ರಿಕೆ ಕಳವು ಮಾಡಿದ ಆರೋಪದ ಮೇಲೆ ಪ್ರಕರಣದ ಪ್ರಮುಖ ಆರೋಪಿ ಸೇರಿದಂತೆ ಇಬ್ಬರನ್ನು ಸಿಬಿಐ ಬಂಧಿಸಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.
ಈ ಎರಡು ಬಂಧನಗಳೊಂದಿಗೆ, ನೀಟ್-ಯುಜಿ ಪ್ರವೇಶ ಪರೀಕ್ಷೆಯಲ್ಲಿ ಬಂಧಿತರ ಸಂಖ್ಯೆ 14 ಆಗಿದೆ ಎಂದು ಹೇಳಿದ್ದಾರೆ. ಜಮ್‌ಶೆಡ್‌ಪುರದ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ 2017 ರ ಬ್ಯಾಚಿನ ಸಿವಿಲ್ ಎಂಜಿನಿಯರ್ ಪಂಕಜ್ ಕುಮಾರ್ ಅಲಿಯಾಸ್ ಆದಿತ್ಯ ಮತ್ತು ಬೊಕಾರೊ ನಿವಾಸಿ ಕುಮಾರ್ ಅವರನ್ನು ಪಾಟ್ನಾದಿಂದ ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.
ಪ್ರಶ್ನೆಪತ್ರಿಕೆಯನ್ನು ಕಳವು ಮಾಡಿ ಗ್ಯಾಂಗಿನ ಇತರ ಸದಸ್ಯರಿಗೆ ರವಾನಿಸಲು ಕುಮಾರ್ ಅವರಿಗೆ ಸಹಾಯ ಮಾಡಿದ ಆರೋಪದ ಮೇಲೆ ರಾಜು ಸಿಂಗ್ ಎಂಬುವರನ್ನು ಹಜಾರಿಬಾಗ್‌ನಿಂದ ಸಿಬಿಐ ಬಂಧಿಸಿದೆ.
ವೈದ್ಯಕೀಯ ಪ್ರವೇಶ ಪರೀಕ್ಷೆಯಲ್ಲಿನ ಅಕ್ರಮಗಳ ಬಗ್ಗೆ ತನಿಖೆ ನಡೆಸುತ್ತಿರುವ ಸಿಬಿಐ, ಆರು ಎಫ್‌ಐಆರ್ ದಾಖಲಿಸಿದೆ. ಬಿಹಾರದ ಎಫ್‌ಐಆರ್ ಪ್ರಶ್ನೆಪತ್ರಿಕೆ ಸೋರಿಕೆಗೆ ಮತ್ತು ಗುಜರಾತ್, ರಾಜಸ್ಥಾನ, ಮಹಾರಾಷ್ಟ್ರದ ಎಫ್‌ಐಆರ್‌ಗಳು ನಕಲಿ ಅಭ್ಯರ್ಥಿ ಮತ್ತು ವಂಚನೆಗೆ ಸಂಬಂಧಿಸಿವೆ. ಏಜೆನ್ಸಿಯ ಸ್ವಂತ ಎಫ್‌ಐಆರ್ ಪರೀಕ್ಷೆಯಲ್ಲಿನ ಅಕ್ರಮಗಳ ಕುರಿತು ಸಮಗ್ರ ತನಿಖೆಗೆ ಸಂಬಂಧಿಸಿದೆ.