ಒಡಿಶಾ, ತೆಲಂಗಾಣದಲ್ಲಿ ಎನ್‌ಡಿಎ ಸರ್ಕಾರ: ಅಮಿತ್ ಶಾ
x

ಒಡಿಶಾ, ತೆಲಂಗಾಣದಲ್ಲಿ ಎನ್‌ಡಿಎ ಸರ್ಕಾರ: ಅಮಿತ್ ಶಾ


ʻದಕ್ಷಿಣ ಮತ್ತು ಪೂರ್ವ ಭಾರತದಿಂದ ಭಾರತೀಯ ಜನತಾ ಪಕ್ಷ (ಬಿಜೆಪಿ) ಅತಿ ಹೆಚ್ಚು ಲೋಕಸಭಾ ಸ್ಥಾನಗಳನ್ನು ಗೆಲ್ಲಲಿದೆ,ʼ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಭವಿಷ್ಯ ನುಡಿದಿದ್ದಾರೆ.

ತೃಣಮೂಲ ಕಾಂಗ್ರೆಸ್ ಆಡಳಿತವಿರುವ ಪಶ್ಚಿಮ ಬಂಗಾಳದ 42 ಲೋಕಸಭೆ ಸ್ಥಾನಗಳ ಪೈಕಿ 24-30, ಬಿಜೆಡಿ ಆಡಳಿತವಿರುವ ಒಡಿಶಾದಲ್ಲಿ 21ರಲ್ಲಿ 17 ಮತ್ತು ಕಾಂಗ್ರೆಸ್ ಆಡಳಿತವಿರುವ ತೆಲಂಗಾಣದಲ್ಲಿ 17 ರಲ್ಲಿ 10 ಸ್ಥಾನಗಳನ್ನು ಬಿಜೆಪಿ ಗೆಲ್ಲಲಿದೆ ಎಂದು ಶಾ ‌ತಿಳಿಸಿದ್ದಾರೆ.

ʻಒಡಿಶಾದಲ್ಲಿ 147 ವಿಧಾನಸಭೆ ಸ್ಥಾನಗಳ ಪೈಕಿ 75 ಸ್ಥಾನ ಗೆಲ್ಲುವ ವಿಶ್ವಾಸವಿದ್ದು, ಆಂಧ್ರಪ್ರದೇಶದಲ್ಲಿ ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟ ಅಧಿಕಾರಕ್ಕೆ ಬರಲಿದೆ,ʼ ಎಂದು ಹೇಳಿದರು.

ಅತಿ ದೊಡ್ಡ ಪಕ್ಷ: ಪಶ್ಚಿಮ ಬಂಗಾಳ, ಜಾರ್ಖಂಡ್, ಬಿಹಾರ ಮತ್ತು ಒಡಿಶಾದ ಒಟ್ಟು ಲೋಕಸಭೆ ಕ್ಷೇತ್ರಗಳಲ್ಲಿ ಬಿಜೆಪಿ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ. ಇದು ಖಚಿತ. ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ, ಕೇರಳ ಮತ್ತು ತಮಿಳುನಾಡು ರಾಜ್ಯಗಳಲ್ಲಿ ನಾವು ದೊಡ್ಡ ಪಕ್ಷವಾಗಿ ಹೊರಹೊಮ್ಮುತ್ತೇವೆ. ಬಿಜೆಪಿ ಒಟ್ಟು 400 ಕ್ಕೂ ಹೆಚ್ಚು ಲೋಕಸಭಾ ಸ್ಥಾನಗಳನ್ನು ಗೆಲ್ಲಲಿದೆ,ʼ ಎಂದು ಹೇಳಿದರು.

ಅಧಿಕ ಆತ್ಮವಿಶ್ವಾಸ: ʻ2014 ರಲ್ಲಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಸಂಪೂರ್ಣ ಬಹುಮತದ ಘೋಷಣೆ ಮಾಡಿದಾಗ, ದೆಹಲಿಯ ಅನೇಕ ರಾಜಕೀಯ ವಿಶ್ಲೇಷಕರು ಇದು ಸಾಧ್ಯವಿಲ್ಲ ಎಂದು ಹೇಳಿದ್ದರು. ಆದರೆ, ನಮಗೆ ಸಂಪೂರ್ಣ ಬಹುಮತ ಸಿಕ್ಕಿತು. 2019 ರಲ್ಲಿ 300 ಪ್ಲಸ್ ಎಂದಾಗಲೂ ಅದು ಸಾಧ್ಯವಿಲ್ಲ ಎಂದಿದ್ದರು. ಈ ಅದನ್ನೇ ಹೇಳುತ್ತಿದ್ದಾರೆ,ʼ ಎಂದರು.

ಜೂನ್ 1 ರಂದು ಲೋಕಸಭೆ ಚುನಾವಣೆಯ ಏಳನೇ ಮತ್ತು ಅಂತಿಮ ಹಂತಕ್ಕೆ ಮತದಾನ ನಡೆಯಲಿದೆ.

Read More
Next Story