Narendra Modi : ತಾಂತ್ರಿಕ ಸಮಸ್ಯೆ; ಟೇಕ್‌ಆಫ್‌ ಆಗದ ಮೋದಿ ಪ್ರಯಾಣಿಸುತ್ತಿದ್ದ ವಿಮಾನ

ಎರಡು ರ್ಯಾಲಿಗಳನ್ನು ಮುಗಿಸಿದ ಮೋದಿ ಮಧ್ಯಾಹ್ನದ ವೇಳೆ ಡೆಲ್ಲಿಗೆ ವಾಪಸ್‌ ಹೋಗುತ್ತಿದ್ದರು. ಈ ವೇಳೆ ವಿಮಾನ ತಾಂತ್ರಿಕ ದೋಷಕ್ಕೆ ಒಳಗಾಗಿದೆ. ದೋಷವನ್ನು ಸರಿಪಡಿಸುವವರೆಗೆ ವಿಮಾನವು ನಗರದ ವಿಮಾನ ನಿಲ್ದಾಣದಲ್ಲಿಯೇ ಉಳಿಯಬೇಕಾಗುತ್ತದೆ ಎಂದು ಮೂಲಗಳು ತಿಳಿಸಿವೆ.


ಪ್ರಧಾನ ಮಂತ್ರಿ ನರೇಂದ್ರ ಮೋದಿ ಪ್ರಯಾಣ ಮಾಡುತ್ತಿದ್ದ ವಿಮಾನ ಜಾರ್ಖಂಡ್‌ನ ದಿಯೋಘರ್‌ ವಿಮಾನ ನಿಲ್ದಾಣದಲ್ಲಿ ತಾಂತ್ರಿಕ ಸಮಸ್ಯೆ ಎದುರಿಸಿದ ಕಾರಣ ಟೇಕ್‌ ಆಫ್‌ ಆಗಲಿಲ್ಲ. ಹೀಗಾಗಿ ಪ್ರಧಾನಿ ಮೋದಿ ಡೆಲ್ಲಿಗೆ ವಾಪಸಾಗುವ ಸಮಯ ವಿಳಂಬಗೊಂಡಿತು. ಅತ್ಯಂತ ಎಚ್ಚರಿಕೆಯಿಂದ ನಿರ್ವಹಣೆ ಮಾಡುವ ಮೋದಿ ವಿಮಾನದಲ್ಲಿ ತಾಂತ್ರಿಕ ಸಮಸ್ಯೆ ಎದುರಾಗಿರುವುದು ಆತಂಕಕ್ಕೆ ಕಾರಣವಾಯಿತು.

ಎರಡು ರ್ಯಾಲಿಗಳನ್ನು ಮುಗಿಸಿದ ಮೋದಿ ಮಧ್ಯಾಹ್ನದ ವೇಳೆ ಡೆಲ್ಲಿಗೆ ವಾಪಸ್‌ ಹೋಗುತ್ತಿದ್ದರು. ಈ ವೇಳೆ ವಿಮಾನ ತಾಂತ್ರಿಕ ದೋಷಕ್ಕೆ ಒಳಗಾಗಿದೆ. ದೋಷವನ್ನು ಸರಿಪಡಿಸುವವರೆಗೆ ವಿಮಾನವು ನಗರದ ವಿಮಾನ ನಿಲ್ದಾಣದಲ್ಲಿಯೇ ಉಳಿಯಬೇಕಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಜಾರ್ಖಂಡ್‌ನ ಬುಡಕಟ್ಟು ನಾಯಕ ಬಿರ್ಸಾ ಮುಂಡಾ ಅವರ ಜಯಂತಿ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಎರಡು ರ್ಯಾಲಿಗಳನ್ನುದ್ದೇಶಿಸಿ ಮಾತನಾಡಿದ್ದಾರೆ. ಈ ಕಾರ್ಯಕ್ರಮವನ್ನು ʼಜಂಜತಿಯಾ ಗೌರವ್ ದಿವಸ್ʼ ಎಂದು ಕರೆಯಲಾಗುತ್ತದೆ. ನವೆಂಬರ್ 20ರಂದು ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ ಎರಡನೇ ಸುತ್ತಿನ ಮತದಾನ ನಡೆಯಲಿದ್ದು ಈ ಹಿನ್ನೆಲೆಯಲ್ಲಿ ಮೋದಿ ರ್ಯಾಲಿ ವಿಶೇಷ ಎನಿಸಿದೆ.

ಅಂದ ಹಾಗೆ ದಿಯೋಘರ್‌ ವಿಮಾನ ನಿಲ್ದಾಣದಲ್ಲಿ ರಾಹುಲ್‌ ಗಾಂಧಿ ಅವರ ಹೆಲಿಕಾಪ್ಟರ್‌ ಇಳಿಯಬೇಕಾಗಿತ್ತು. ಆದರೆ ಮೋದಿ ವಿಮಾನ ಟೇಕ್‌ ಆಫ್‌ ಆಗದ ಕಾರಣ 80 ಕಿ.ಮೀ ಗೊಡ್ಡಾದಲ್ಲಿ ರಾಹುಲ್ ಗಾಂಧಿ ಹೆಲಿಕಾಪ್ಟರ್‌ ಲ್ಯಾಂಡ್‌ ಮಾಡಿಸಿ ಏರ್‌ ಟ್ರಾಫಿಕ್‌ ಕ್ಲಿಯರೆನ್ಸ್‌ಗಾಗಿ 45 ನಿಮಿಷಗಳ ಕಾಲ ಕಾಯಿಸಿದ್ದರು. ಹೀಗಾಗಿ ಮೋದಿ ವಿಮಾನದ ಸಮಸ್ಯೆ ಕಟ್ಟುಕತೆ ಎಂದು ಕಾಂಗ್ರಸ್‌ ಹೇಳಿದ್ದು ರಾಹುಲ್‌ ಗಾಂಧಿಯ ರ್ಯಾಲಿಗೆ ಸಮಸ್ಯೆ ಮಾಡಲೆಂದೇ ಆ ರೀತಿ ಹೇಳಲಾಗಿದೆ ಎಂದು ಆರೋಪಿಸಿದೆ.

ದಿಯೋಘರ್‌ನಲ್ಲಿ ಪ್ರಧಾನಿಯವರ ರ್ಯಾಲಿಯನ್ನು ಮಾಡಲು ಆದ್ಯತೆ ನೀಡಲಾಯಿತು ಹಾಗೂ ರಾಹುಲ್‌ ಗಾಂಧಿಯವ ರ್ಯಾಲಿಗೆ ಅಡಚಣೆ ಉಂಟು ಮಾಡಲಾಯಿತು. ಹೀಗಾಗಿ 45 ನಿಮಿಷಗಳ ನಂತರ ಹೆಲಿಕಾಪ್ಟರ್ ಟೇಕ್ ಆಫ್ ಆಗಲು ಅವಕಾಶ ನೀಡಲಾಯಿತು ಎಂದು ಕಾಂಗ್ರೆಸ್‌ ಆರೋಪಿಸಿದರು.

Read More
Next Story