ರಾಷ್ಟ್ರಪತಿ ಭವನ: ಅಶೋಕ್ ಹಾಲ್, ದರ್ಬಾರ್ ಹಾಲ್ ಹೆಸರು ಬದಲಾವಣೆ
x

ರಾಷ್ಟ್ರಪತಿ ಭವನ: ಅಶೋಕ್ ಹಾಲ್, ದರ್ಬಾರ್ ಹಾಲ್ ಹೆಸರು ಬದಲಾವಣೆ

ʻದರ್ಬಾರ್ ಹಾಲ್ʼ ನಲ್ಲಿ ರಾಷ್ಟ್ರೀಯ ಪ್ರಶಸ್ತಿ ಪ್ರದಾನದಂತಹ ಪ್ರಮುಖ ಸಮಾರಂಭಗಳು ನಡೆಯುತ್ತವೆ; ಅಶೋಕ ಹಾಲ್‌ ಮೂಲತಃ ನೃತ್ಯಮಂದಿರವಾಗಿತ್ತು.


ರಾಷ್ಟ್ರಪತಿ ಭವನದಲ್ಲಿರುವ ಎರಡು ಸಾಂಪ್ರದಾಯಿಕ ನಡುಮನೆಗಳಾದ ʼದರ್ಬಾರ್ ಹಾಲ್' ಮತ್ತು 'ಅಶೋಕ್ ಹಾಲ್' ಹೆಸರನ್ನು ಕ್ರಮವಾಗಿ 'ಗಣತಂತ್ರ ಮಂಟಪ' ಮತ್ತು 'ಅಶೋಕ ಮಂಟಪ' ಎಂದು ಗುರುವಾರ (ಜುಲೈ 25) ಬದಲಿಸಲಾಗಿದೆ.

ʻರಾಷ್ಟ್ರಪತಿ ಭವನಕ್ಕೆ ಜನ ಪ್ರವೇಶಿಸಲು ನೆರವಾಗಲು ನಿರಂತರ ಪ್ರಯತ್ನ ಮಾಡಲಾಗುತ್ತಿದೆ. ರಾಷ್ಟ್ರಪತಿ ಭವನದ ವಾತಾವರಣವನ್ನು ಭಾರ ತೀಯ ಸಾಂಸ್ಕೃತಿಕ ಮೌಲ್ಯಗಳು ಮತ್ತು ನೈತಿಕತೆಯನ್ನು ಪ್ರತಿಬಿಂಬಿಸಲು ನಿರಂತರ ಪ್ರಯತ್ನ ಮಾಡಲಾಗುತ್ತದೆ,ʼ ಎಂದು ರಾಷ್ಟ್ರಪತಿ ಅವರ ಕಾರ್ಯದರ್ಶಿ ತಿಳಿಸಿದ್ದಾರೆ.

ಹೆಸರು ಬದಲು ಏಕೆ?: ಕಾರ್ಯಕ್ರಮಗಳು ನಡೆಯುವ ಎರಡು ಪ್ರಮುಖ ಸಭಾಂಗಣಗಳ ಮರುನಾಮಕರಣಕ್ಕೆ ರಾಷ್ಟ್ರಪತಿ ದ್ರೌಪತಿ ಮುರ್ಮು ಅವರು ಸಂತಸ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದ್ದಾರೆ.

'ದರ್ಬಾರ್ ಹಾಲ್' ನಲ್ಲಿ ರಾಷ್ಟ್ರೀಯ ಪ್ರಶಸ್ತಿಗಳ ಪ್ರದಾನದಂತಹ ಪ್ರಮುಖ ಕಾರ್ಯಕ್ರಮಗಳು ನಡೆಯುತ್ತವೆ. ʻದರ್ಬಾರ್' ಪದವು ಭಾರ ತೀಯ ರಾಜರು ಮತ್ತು ಬ್ರಿಟಿಷರ ಆಸ್ಥಾನವನ್ನು ಸೂಚಿಸುತ್ತದೆ. ದೇಶ ಸ್ವಾತಂತ್ರ್ಯ ಗಳಿಸಿದ ಬಳಿಕ ಈ ಪದ ಪ್ರಸ್ತುತತೆಯನ್ನು ಕಳೆದುಕೊಂಡಿದೆ. ಹೀಗಾಗಿ 'ಗಣತಂತ್ರ ಮಂಟಪ' ಎಂದು ಹೆಸರಿಸಲಾಗಿದೆ.

'ಅಶೋಕ ಹಾಲ್' ಮೂಲತಃ ನೃತ್ಯಮಂದಿರವಾಗಿತ್ತು. ʻಅಶೋಕʼ ಎಂಬ ಪದವು 'ಎಲ್ಲಾ ದುಃಖಗಳಿಂದ ಮುಕ್ತ' ಅಥವಾ 'ದುಃಖದಿಂದ ದೂರವಿರುವ' ವ್ಯಕ್ತಿ ಎಂಬ ಅರ್ಥ ಕೊಡುತ್ತದೆ. 'ಅಶೋಕ'ವು ಚಕ್ರವರ್ತಿ ಅಶೋಕನನ್ನು ಸೂಚಿಸು ತ್ತದೆ; ಏಕತೆ ಮತ್ತು ಶಾಂತಿಯುತ ಸಹಬಾಳ್ವೆಯ ಸಂಕೇತವಾಗಿದೆ.

ʻಭಾರತದ ರಾಷ್ಟ್ರೀಯ ಲಾಂಛನವು ಅಶೋಕನ ರಾಜಧಾನಿ ಸಾರನಾಥದ ಸಿಂಹ. ಅಶೋಕ ವೃಕ್ಷವು ಭಾರತೀಯ ಧಾರ್ಮಿಕ ಸಂಪ್ರದಾಯ, ಕಲೆ ಮತ್ತು ಸಂಸ್ಕೃತಿಯಲ್ಲಿ ಬಹಳ ಪ್ರಾಮುಖ್ಯತೆ ಹೊಂದಿದೆ. 'ಅಶೋಕ ಹಾಲ್' ಅನ್ನು 'ಅಶೋಕ ಸಭಾಂಗಣ' ಎಂದು ಮರುನಾಮಕರಣದಿಂದ, ಆಂಗ್ಲೀಕರಣದ ಕುರುಹು ಇಲ್ಲವಾಗುತ್ತದೆ,ʼ ಎಂದು ಹೇಳಿದ್ದಾರೆ.

Read More
Next Story