ಅವಮಾನಿಸಲು, ದುರ್ಬಲಗೊಳಿಸಲು ನನ್ನ ಬಂಧನ:  ಕೇಜ್ರಿವಾಲ್
x

ಅವಮಾನಿಸಲು, ದುರ್ಬಲಗೊಳಿಸಲು ನನ್ನ ಬಂಧನ: ಕೇಜ್ರಿವಾಲ್


ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಬುಧವಾರ ಜಾರಿ ನಿರ್ದೇಶನಾಲಯದ ವಿರುದ್ಧ ವಾಗ್ದಾಳಿ ನಡೆಸಿದ್ದು, ಚುನಾವಣೆಗೆ ಮುನ್ನ ತಮ್ಮನ್ನು ʻಅವಮಾನಿಸಲು...ಅಸಮರ್ಥಗೊಳಿಸಲುʼ ಬಂಧಿಸಲಾಗಿದೆ ಎಂದು ಆರೋಪಿಸಿದರು.

ʻಯಾವುದೇ ವಿಚಾರಣೆ, ಹೇಳಿಕೆ ಅಥವಾ ಬಂಧನಕ್ಕೆ ಆಧಾರವಾಗಬಹುದಾದ ವಸ್ತು ಇಲ್ಲದೆʼ ತಮ್ಮನ್ನು ಬಂಧಿಸಲಾಯಿತು ಎಂದು ದೆಹಲಿ ಹೈಕೋರ್ಟ್‌ಗೆ ಹೇಳಿದರು.

ಕೇಜ್ರಿವಾಲ್ ಆರೋಪ: ʻದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿಇಡಿ ತಮ್ಮನ್ನು ಕಸ್ಟಡಿಗೆ ತೆಗೆದುಕೊಂಡಿರುವುದು ಲೋಕಸಭೆ ಚುನಾವಣೆಯಲ್ಲಿ ಭಾಗವಹಿಸು ವುದನ್ನು ತಡೆಯಲು ಮತ್ತು ಎಎಪಿಯನ್ನು ಒಡೆಯುವ ಪ್ರಯತ್ನ ಮಾಡಲಾಗುತ್ತಿದೆʼ ಎಂದು ಆರೋಪಿಸಿದರು. ಕೇಜ್ರಿವಾಲ್ ಪರ ವಾದ ಮಂಡಿಸಿದ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ, ಮುಖ್ಯಮಂತ್ರಿ ವಿರುದ್ಧ ಇಡಿ ಬಳಿ ಯಾವುದೇ ಸಾಕ್ಷ್ಯಾಧಾರಗಳಿಲ್ಲ.

ಕೇಜ್ರಿವಾಲ್ ಅವರನ್ನು ಮನೆಯಲ್ಲಿ ಬಂಧಿಸಿದಾಗ ಅವರ ಹೇಳಿಕೆಯನ್ನುತೆಗೆದುಕೊಂಡಿಲ್ಲ.ಅವರನ್ನು ಬಂಧಿಸುವ ಮೊದಲು ಇಡಿ ಈ ಕೆಲಸ ಮಾಡಬೇಕಿತ್ತುʼ ಎಂದು ಹೇಳಿದ್ದಾರೆ. ʻಕೇಜ್ರಿವಾಲ್‌ ಬಂಧನ ಲೋಕಸಭೆ ಚುನಾವಣೆಗೆ ಮುಂಚಿತವಾಗಿ ವಿವಿಧ ರಾಜಕೀಯ ಪಕ್ಷಗಳಿಗೆ ಸಮಬಲದ ಆಟದ ಮೈದಾನವನ್ನು ತಡೆಯುವ ಗುರಿಯನ್ನು ಹೊಂದಿದೆ. 'ಲೆವೆಲ್ ಪ್ಲೇಯಿಂಗ್ ಫೀಲ್ಡ್' ಕೇವಲ ನುಡಿಗಟ್ಟು ಅಲ್ಲ; ಅದು 'ಮುಕ್ತ ಮತ್ತು ನ್ಯಾಯಯುತ ಚುನಾ ವಣೆ'ಯ ಭಾಗ. ಚುನಾವಣೆಯಲ್ಲಿ ಭಾಗವಹಿಸದಂತೆ ಮಾಡುವುದು ಮತ್ತು ಮೊದಲ ಮತ ಚಲಾವಣೆಗೆ ಮುನ್ನವೇ ರಾಜಕೀಯ ಪಕ್ಷವೊಂದನ್ನು ಕೆಡವಲು ಪ್ರಯತ್ನ ಇದಾಗಿದೆʼ ಎಂದು ಸಿಂಘ್ವಿ ಹೇಳಿದರು.

ಮುಖ್ಯಮಂತ್ರಿಗೆ ಹಲವು ಬಾರಿ ಸಮನ್ಸ್ ನೀಡಿದ ಬಗ್ಗೆ ಇಡಿಯನ್ನು ಸಿಂಘ್ವಿ ಪ್ರಶ್ನಿಸಿದರು. ʻಕೇಜ್ರಿವಾಲ್ ಪಲಾಯನ ಮಾಡುವ ಸಾಧ್ಯತೆ ಇದೆಯೇ? ಒಂದೂವರೆ ವರ್ಷಗಳಲ್ಲಿ ಅವರು ಯಾವುದೇ ಸಾಕ್ಷಿಯ ಮೇಲೆ ಪ್ರಭಾವ ಬೀರಲು ಪ್ರಯತ್ನಿಸಿದ್ದಾರೆಯೇ? ಅವರು ವಿಚಾರಣೆಗೆ ನಿರಾಕರಿಸಿದ್ದಾರೆಯೇ?ʼ ಎಂದು ಪ್ರಶ್ನಿಸಿದರು.

ʻಮೊದಲ ಸಮನ್ಸ್‌ ನೀಡಿದ ಅಕ್ಟೋಬರ್ 30, 2023 ಮತ್ತು ಮಾರ್ಚ್ 16 ರಂದು ಒಂಬತ್ತನೇ ಸಮನ್ಸ್ ಜಾರಿಗೊಳಿಸಿದ ಅವಧಿಯಲ್ಲಿ ಹಣ ವರ್ಗಾವಣೆ ತಡೆ ಕಾಯ್ದೆಯ ಸೆಕ್ಷನ್ 50 ಅನ್ನು ಬೆಂಬಲಿಸುವ ಯಾವುದೇ ವಸ್ತುವನ್ನು ಇಡಿ ಪತ್ತೆಮಾಡಿಲ್ಲ. ಇಡಿಯ ರಿಮ್ಯಾಂಡ್ ಅರ್ಜಿಯು ಮುಖ್ಯಮಂತ್ರಿಯ ಪಾತ್ರವನ್ನು ಕಂಡುಹಿಡಿಯಲು ಬಯಸಿದೆ. ಇದು ಬಂಧನಕ್ಕೆ ಕಾರಣವಾಗುವುದಿಲ್ಲ ಎಂದು ಸಿಂಘ್ವಿ ವಾದಿಸಿದರು.

ಇಡಿ ಕಸ್ಟಡಿಯಲ್ಲಿ 10 ದಿನ ಕಳೆದ ನಂತರ ನ್ಯಾಯಾಲಯ ಕೇಜ್ರಿವಾಲ್ ಅವರನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಿತು. ಇಡಿ ಹೆಚ್ಚಿನ ಕಸ್ಟಡಿಗೆ ಕೋರಲಿಲ್ಲ. ಆದರೆ, ಅವರ ಬಿಡುಗಡೆ ತನಿಖೆಗೆ ಅಡ್ಡಿಯಾಗಬಹುದು ಎಂದು ಹೇಳಿತು.

Read More
Next Story