ಬಿಎಂಡಬ್ಲ್ಯು ಅಪಘಾತ: ತಲೆಮರೆಸಿಕೊಂಡಿದ್ದ ಮಿಹಿರ್ ಶಾ ಬಂಧನ
x
ಮಿಹಿರ್ ಶಾ ಅವರ ತಂದೆ ರಾಜೇಶ್ ಶಾ, ಮುಂಬೈನಲ್ಲಿ ನ್ಯಾಯಾಲಯದ ಮುಂದೆ ಹಾಜರಾದರು.

ಬಿಎಂಡಬ್ಲ್ಯು ಅಪಘಾತ: ತಲೆಮರೆಸಿಕೊಂಡಿದ್ದ ಮಿಹಿರ್ ಶಾ ಬಂಧನ

ಮಿಹಿರ್ ಶಾ ಅಪಘಾತದ ನಂತರ ಪಲಾಯನ ಮಾಡಿದ್ದರು. ಮುಂಬೈ ಬಳಿ ಆತನನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.


ಮುಂಬೈ, ಜು.9 - ಬಿಎಂಡಬ್ಲ್ಯು ಕಾರನ್ನು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಸಿ, ಮಹಿಳೆಯ ಸಾವು ಹಾಗೂ ಆಕೆಯ ಪತಿಯನ್ನು ಗಾಯಗೊಳಿಸಿದ ಮಿಹಿರ್‌ ಶಾ(24)ನನ್ನು ಎರಡು ದಿನಗಳ ನಂತರ ಮುಂಬೈ ಪೊಲೀಸರು ಬಂಧಿಸಿದ್ದಾರೆ.

ಅಪಘಾತದ ಬಳಿಕ ಮಿಹಿರ್ ಪಲಾಯನ ಮಾಡಿದ್ದರು. ಅವರನ್ನು ಮುಂಬೈ ಬಳಿ ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮಿಹಿರ್ ಶಾ ಅವರ ತಂದೆ ರಾಜೇಶ್ ಶಾ ಅವರು ಮಗನ ಪರಾರಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು ಮತ್ತು ಅಪರಾಧಕ್ಕೆ ಕಾರಣವಾದ ವಾಹನವನ್ನು ಎಳೆದೊಯ್ಯಲು ಯೋಜಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಮಿಹಿರ್‌ ಬಂಧನಕ್ಕೆ ಮುಂಬೈ ಪೊಲೀಸರು 11 ತಂಡ ರಚಿಸಿದ್ದರು ಮತ್ತು ಕ್ರೈಂ ಬ್ರಾಂಚ್‌ನ ನೆರವು ಪಡೆದುಕೊಂಡಿದ್ದರು. ಆತನ ವಿರುದ್ಧ ಲುಕ್ ಔಟ್ ಸುತ್ತೋಲೆ (ಎಲ್‌ಒಸಿ) ಕೂಡ ಹೊರಡಿಸಿತ್ತು.

ರಾಜೇಶ್ ಶಾ ಮತ್ತು ವಾಹನ ಚಾಲಕ ರಾಜಋಷಿ ಬಿಡಾವತ್ ಅವರನ್ನು ಸೋಮವಾರ ಮುಂಬೈ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಕ್ರಮವಾಗಿ 14 ದಿನಗಳ ನ್ಯಾಯಾಂಗ ಮತ್ತು ಒಂದು ದಿನದ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಆನಂತರ ರಾಜೇಶ್ ಶಾಗೆ ನ್ಯಾಯಾಲಯ ಜಾಮೀನು ನೀಡಿತು. ಸ್ಥಳೀಯ ನ್ಯಾಯಾಲಯ ಮಂಗಳವಾರ ಬಿಡಾವತ್ ಅವರ ಪೊಲೀಸ್ ಕಸ್ಟಡಿಯನ್ನು ಜುಲೈ 11 ರವರೆಗೆ ವಿಸ್ತರಿಸಿದೆ.

Read More
Next Story