ಬಿಟ್ಸ್ ಪಿಲಾನಿಯ 5 ನೇ ಕ್ಯಾಂಪಸ್ ‌ ಉದ್ಘಾಟನೆ
x

ಬಿಟ್ಸ್ ಪಿಲಾನಿಯ 5 ನೇ ಕ್ಯಾಂಪಸ್ ‌ ಉದ್ಘಾಟನೆ


ಮುಂಬೈ, ಫೆ 24 - ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಶನಿವಾರ ಬಿಟ್ಸ್ ಪಿಲಾನಿಯ ಐದನೇ ಕ್ಯಾಂಪಸ್ ನ್ನು ಉದ್ಘಾಟಿಸಿದರು.

ಮೆಗಾಪೊಲೀಸ್‌ ಸಮೀಪದ ಕಲ್ಯಾಣ್‌ ಪ್ರದೇಶದಲ್ಲಿರುವ 1,600 ಕೋಟಿ ರೂ. ವೆಚ್ಚದ ಈ ಕ್ಯಾಂಪಸ್‌ 60 ಎಕರೆ ವಿಸ್ತೀರ್ಣದಲ್ಲಿದ್ದು, 5,000 ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಿದೆ ಎಂದು ಸಂಸ್ಥೆಯ ಅಧ್ಯಕ್ಷ ಮತ್ತು ಕುಲಪತಿ ಕುಮಾರ್ ಮಂಗಲಂ ಬಿರ್ಲಾ ಹೇಳಿದ್ದಾರೆ.

ರಾಜಸ್ಥಾನದ ಮಾರ್ವರ್ಡ್ ಪ್ರದೇಶದ ಬಿರ್ಲಾ ವಂಶಸ್ಥರ ಸ್ವಗ್ರಾಮವಾದ ಪಿಲಾನಿಯಲ್ಲಿ 1964 ರಲ್ಲಿ ಪ್ರಾರಂಭವಾದ ಬಿಐಟಿಎಸ್‌, ಶ್ರೇಷ್ಠ ಸಂಸ್ಥೆ ಎನ್ನಿಸಿಕೊಂಡಿರುವ ಆರು ಖಾಸಗಿ ಸಂಸ್ಥೆಗಳಲ್ಲಿ ಒಂದು. ಪಿಲಾನಿ, ಗೋವಾ, ದುಬೈ, ಕಲ್ಯಾಣ್, ಹೈದರಾಬಾದ್‌ನಲ್ಲಿರುವ ಐದು ಕ್ಯಾಂಪಸ್‌ಗಳಲ್ಲಿ 80,000 ವಿದ್ಯಾರ್ಥಿಗಳಿದ್ದಾರೆ.

ಹೊಸ ಕ್ಯಾಂಪಸ್ ನ್ನು ಉದ್ಘಾಟಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಸಂಸ್ಥೆ 7,300 ಫಾರ್ಚೂನ್ 500 ಸಿಇಒಗಳು, 300 ಜಾಗತಿಕ ಖ್ಯಾತಿಯ ಶಿಕ್ಷಣ ತಜ್ಞರು ಮತ್ತು 600 ನಾಗರಿಕ ಸೇವೆಯ ಅಧಿಕಾರಿಗಳನ್ನುರೂಪಿಸಿದೆ. 6,200 ಸ್ಟಾರ್ಟ್‌ಅಪ್‌ಗಳಿಗೆ ಜನ್ಮ ನೀಡಿದೆ. ಅದರ ಇನ್‌ ಕ್ಯುಬೇಟರ್‌ ಕೇಂದ್ರ 170 ಸ್ಟಾರ್ಟ್‌ಅಪ್‌ಗಳನ್ನು ಹುಟ್ಟುಹಾಕಿದೆ. ಅದರಲ್ಲಿ 30 ಯುನಿಕಾರ್ನ್‌ಗಳು ಎಂದು ಹೇಳಿದರು.

Read More
Next Story