Pariksha Pe Charcha: ಮೋದಿಯ ಪರೀಕ್ಷಾ ಪೇ ಚರ್ಚಾದಲ್ಲಿ ಈ ಬಾರಿ ದೀಪಿಕಾ, ಸದ್ಗುರು, ಮೇರಿಕೋಮ್ ಭಾಗಿ
x
ಸಂಗ್ರಹ ಚಿತ್ರ.

Pariksha Pe Charcha: ಮೋದಿಯ 'ಪರೀಕ್ಷಾ ಪೇ ಚರ್ಚಾ'ದಲ್ಲಿ ಈ ಬಾರಿ ದೀಪಿಕಾ, ಸದ್ಗುರು, ಮೇರಿಕೋಮ್ ಭಾಗಿ

Pariksha Pe Charcha: ಲಕ್ಷಾಂತರ ವಿದ್ಯಾರ್ಥಿಗಳು ಪ್ರಧಾನಿ ಮೋದಿಯವರೊಂದಿಗೆ ಸಂವಾದ ನಡೆಸುವುದಕ್ಕಾಗಿ ನೋಂದಣಿ ಮಾಡಿಕೊಂಡಿದ್ದಾರೆ. ಈ ಬಾರಿ ಒತ್ತಡ ನಿವಾರಣೆ, ಭವಿಷ್ಯದ ಕೋರ್ಸ್‌ಗಳ ಆಯ್ಕೆ, ಸಾಮಾಜಿಕ ಒತ್ತಡ ನಿರ್ವಹಣೆ ಎಂಬ ವಿಷಯಗಳ ಬಗ್ಗೆ ಮಾರ್ಗದರ್ಶನ ನೀಡಲಾಗುತ್ತದೆ.


ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ನಡೆಯುವ ಪರೀಕ್ಷಾ ಪೇ ಚರ್ಚಾ ಈ ವರ್ಷ ಫೆಬ್ರವರಿ 10ರಂದು ಆಯೋಜನೆಗೊಂಡಿದೆ. ನವದೆಹಲಿಯ ಭಾರತ್ ಮಂಟಪಂನಲ್ಲಿ ನಡೆಯುವ ಕಾರ್ಯಕ್ರಮಕ್ಕೆ 2024ರ ಡಿಸೆಂಬರ್ 14ರಿಂದಲೇ ನೋಂದಣಿ ಆರಂಭವಾಗಿ 2025ರ ಜನವರಿ 14ರವರೆಗೆ ನಡೆದಿದೆ.

ಲಕ್ಷಾಂತರ ವಿದ್ಯಾರ್ಥಿಗಳು ಪ್ರಧಾನಿ ಮೋದಿಯವರೊಂದಿಗೆ ಸಂವಾದ ನಡೆಸುವುದಕ್ಕಾಗಿ ನೋಂದಣಿ ಮಾಡಿಕೊಂಡಿದ್ದಾರೆ. ಈ ಬಾರಿ ಒತ್ತಡ ನಿವಾರಣೆ, ಭವಿಷ್ಯದ ಕೋರ್ಸ್‌ಗಳ ಆಯ್ಕೆ, ಸಾಮಾಜಿಕ ಒತ್ತಡ ನಿರ್ವಹಣೆ ಎಂಬ ವಿಷಯಗಳ ಬಗ್ಗೆ ಮಾರ್ಗದರ್ಶನ ನೀಡಲಾಗುತ್ತದೆ. ವಿಶೇಷ ಏನೆಂದರೆ ಈ ಬಾರಿ ಪ್ರಧಾನಿ ಮೋದಿ ಜತೆ ಪ್ರಭಾವಿ ವ್ಯಕ್ತಿಗಳು ಕೈಜೋಡಿಸಲಿದ್ದಾರೆ. ಪರೀಕ್ಷಾ ಪೇ ಚರ್ಚಾದಲ್ಲಿ 8 ಪಾಡ್ ಕಾಸ್ಟ್ ಎಪಿಸೋಡ್‌ಗಳಿದ್ದು, ಸದ್ಗುರು ಜಗ್ಗಿ ವಾಸುದೇವ್, ದೀಪಿಕಾ ಪಡುಕೋಣೆ, ಮೇರಿ ಕೋಮ್, ಅವನಿ ಲೇಖಾರಾ, ರುಜುತಾ ದಿವೇಕರ್, ಸೊನಾಲಿ ಸಭರ್ವಾಲ್, ಫುಡ್ ಫಾರ್ಮರ್, ವಿಕ್ರಾಂತ್ ಮಾಸೆ , ಭೂಮಿ ಪೆಡ್ನೇಕರ್, ಟೆಕ್ನಿಕಲ್ ಗುರೂಜಿ ಹಾಗೂ ರಾಧಿಕಾ ಗುಪ್ತಾ ಮಕ್ಕಳಿಗೆ ಸಲಹೆಗಳನ್ನು ನೀಡಲಿದ್ದಾರೆ.

ಆಧ್ಯಾತ್ಮಿಕ ಗುರುಗಳಾದ ಸದ್ಗುರು ಅವರು ವಿದ್ಯಾರ್ಥಿಗಳಿಗೆ ಒತ್ತಡ ನಿವಾರಣೆ ಬಗ್ಗೆ ತಿಳಿಹೇಳಿದರೆ, ನಟಿ ದೀಪಿಕಾ ಪಡುಕೋಣೆ ಮಾನಸಿಕ ಆರೋಗ್ಯದ ಪಾಠ ಮಾಡಲಿದ್ದಾರೆ., ಬಾಕ್ಸಿಂಗ್ ತಾರೆ ಮೇರಿ ಕೋಮ್ ಮತ್ತು ಪ್ಯಾರಾಲಿಂಪಿಕ್ ಚಿನ್ನದ ಪದಕ ವಿಜೇತೆ ಅವನಿ ಲೇಖಾರಾ ಅವರು ಸವಾಲುಗಳನ್ನು ಮೆಟ್ಟಿ ನಿಂತು ಸಾಧನೆಗೈದ ಅನುಭವಗಳನ್ನು ಹಂಚಿಕೊಳ್ಳಲಿದ್ದಾರೆ.

2,500 ವಿದ್ಯಾರ್ಥಿಗಳು ಭಾಗಿ

ಪರೀಕ್ಷಾ ಪೆ ಚರ್ಚಾದಲ್ಲಿ ಸುಮಾರು 2,500 ಆಯ್ದ ವಿದ್ಯಾರ್ಥಿಗಳು ಭಾಗಿಯಾಗಲಿದ್ದಾರೆ. ಇವರೆಲ್ಲರಿಗೂ ಶಿಕ್ಷಣ ಸಚಿವಾಲಯವು ಪಿಪಿಸಿ ಕಿಟ್ ಒದಗಿಸಲಿದೆ. ಟಾಪ್ 10 "ಲೆಜೆಂಡರಿ ಎಕ್ಸಾಂ ವಾರಿಯರ್ಸ್"ಗಳಿಗೆ ಪ್ರಧಾನಿ ಮೋದಿಯವರ ನಿವಾಸಕ್ಕೆ ಭೇಟಿ ನೀಡುವ ವಿಶೇಷ ಅವಕಾಶ ಸಿಗಲಿದೆ. ಕಾರ್ಯಕ್ರಮದಲ್ಲಿ ಆಯ್ದ ವಿದ್ಯಾರ್ಥಿಗಳಿಗೆ ಪ್ರಶ್ನೆ ಕೇಳುವ ಅವಕಾಶವಿದ್ದು, ಅವರ ಪ್ರಶ್ನೆಗಳಿಗೆ ಪ್ರಧಾನಿ ಮೋದಿ ನೇರ ಉತ್ತರ ನೀಡಲಿದ್ದಾರೆ.

ಒತ್ತಡರಹಿತ ಶಿಕ್ಷಣ ಒದಗಿಸುವ ಉದ್ದೇಶದಿಂದ 2018ರಿಂದಲೇ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮ ನಡೆಸಲಾಗುತ್ತಿದೆ. ಈ ವರ್ಷ 8ನೇ ಆವೃತ್ತಿಯ ಕಾರ್ಯಕ್ರಮ ನಡೆಯುತ್ತಿದ್ದು, ದಾಖಲೆಯ 3.6 ಕೋಟಿ ನೋಂದಣಿಗಳಾಗಿವೆ.

Read More
Next Story