ಪೋಲೆಂಡ್ ಪ್ರವಾಸಕ್ಕೆ ತೆರಳಿದ ಪ್ರಧಾನಿ
x

ಪೋಲೆಂಡ್ ಪ್ರವಾಸಕ್ಕೆ ತೆರಳಿದ ಪ್ರಧಾನಿ

ಪ್ರಧಾನಿ ಮೋದಿ ಅವರು ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸುವತ್ತ ಗಮನ ಹರಿಸಲು ಪೋಲೆಂಡ್‌ ಗೆ ಭೇಟಿ ನೀಡಲಿದ್ದಾರೆ. ಆನಂತರ ಅವರು ಉಕ್ರೇನ್‌ಗೆ ತೆರಳಲಿದ್ದಾರೆ.


ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ (ಆಗಸ್ಟ್ 21) ಪೋಲೆಂಡ್‌ಗೆ ತೆರಳಿದ್ದು, 45 ವರ್ಷಗಳ ನಂತರ ಭಾರತದ ಪ್ರಧಾನಿಯೊಬ್ಬರು ಪೋಲೆಂಡ್‌ಗೆ ಭೇಟಿ ನೀಡುತ್ತಿದ್ದಾರೆ. ಭೇಟಿಯು ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧಗಳ 70 ನೇ ವಾರ್ಷಿಕೋತ್ಸವದ ಗುರುತಾಗಿದೆ.

ಮೊರಾರ್ಜಿ ದೇಸಾಯಿ ಅವರು 1979 ರಲ್ಲಿ ಪೋಲೆಂಡ್‌ಗೆ ಭೇಟಿ ನೀಡಿದ್ದರು. ಪ್ರಧಾನಿ ತಮ್ಮ ಪೋಲೆಂಡ್ ಭೇಟಿಯನ್ನು ಎಕ್ಸ್‌ನಲ್ಲಿ ಪ್ರಕಟಿಸಿದರು: ʻವಾರ್ಸಾಗೆ ತೆರಳುತ್ತಿದ್ದೇನೆ. ಪೋಲೆಂಡ್‌ಗೆ ಈ ಭೇಟಿಯು ಎರಡೂ ರಾಷ್ಟ್ರಗಳ ನಡುವಿನ 70 ವರ್ಷಗಳ ರಾಜತಾಂತ್ರಿಕ ಸಂಬಂಧಗಳನ್ನು ಗುರುತಾಗಿದೆ. ಭಾರತವು ಪೋಲೆಂಡ್‌ ಜೊತೆಗಿನ ಸ್ನೇಹವನ್ನು ಗೌರವಿಸುತ್ತದೆ. ಪ್ರಜಾಪ್ರಭುತ್ವ ಮತ್ತು ಬಹುತ್ವದ ಬದ್ಧತೆಯಿಂದ ಮತ್ತಷ್ಟು ದೃಡಗೊಂಡಿದೆ,ʼ ಎಂದು ಬರೆದಿದ್ದಾರೆ.

ದ್ವಿಪಕ್ಷೀಯ ಸಂಬಂಧದತ್ತ ಗಮನ: ʻಅಧ್ಯಕ್ಷ ಆಂಡ್ರೆಜ್ ದುಡಾ ಮತ್ತು ಪ್ರಧಾನಿ ಡೊನಾಲ್ಡ್ ಟಸ್ಕ್ ಅವರೊಂದಿಗೆ ಮಾತುಕತೆ ನಡೆಸುತ್ತೇನೆ. ಇಂದು ಸಂಜೆ ವಾರ್ಸಾದಲ್ಲಿ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡಲಿದ್ದೇನೆ,ʼ ಎಂದಿದ್ದಾರೆ.

ಮೋದಿಯವರ ಎರಡು ದಿನಗಳ ಭೇಟಿಯು ವ್ಯೂಹಾತ್ಮಕ ಪಾಲುದಾರಿಕೆ, ರಕ್ಷಣಾ ಸಹಕಾರ ಮತ್ತು ಸಾಂಸ್ಕೃತಿಕ ವಿನಿಮಯ ಸೇರಿದಂತೆ ದ್ವಿಪಕ್ಷೀಯ ಸಂಬಂಧಗಳ ಬಲಪಡಿಸುವಿಕೆಯನ್ನು ಕೇಂದ್ರವಾಗಿರಿಕೊಂಡಿರುತ್ತದೆ.

ಭಾರತ ಮತ್ತು ಪೋಲೆಂಡ್ ಐತಿಹಾಸಿಕವಾಗಿ ಸ್ನೇಹ ಸಂಬಂಧವನ್ನು ಹಂಚಿಕೊಂಡಿವೆ. 2022 ರಲ್ಲಿ ಆಪರೇಷನ್ ಗಂಗಾ ಸಮಯದಲ್ಲಿ ಉಕ್ರೇನ್‌ನಿಂದ 4,000 ಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳನ್ನು ಸ್ಥಳಾಂತರಿಸಲು ಪೋಲೆಂಡ್ ಭಾರತಕ್ಕೆ ಸಹಾಯ ಮಾಡಿತ್ತು. ಎರಡನೇ ಮಹಾಯುದ್ಧದ ಸಮಯದಲ್ಲಿ ಭಾರತ 6,000 ಕ್ಕೂ ಹೆಚ್ಚು ಪೊಲಿಷ್ ಮಹಿಳೆಯರು ಮತ್ತು ಮಕ್ಕಳಿಗೆ ಆಶ್ರಯ ನೀಡಿತ್ತು.

ಉಕ್ರೇನ್ ಭೇಟಿ 23ಕ್ಕೆ: ಪ್ರಧಾನಿ ಮೋದಿ ಅವರು ಆಗಸ್ಟ್ 23 ರಂದು ಉಕ್ರೇನ್‌ಗೆ ಭೇಟಿ ನೀಡಲಿದ್ದು, ರಾಜಧಾನಿ ಕೈವ್‌ನಲ್ಲಿ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ. ʻ ಅಧ್ಯಕ್ಷ ಝೆಲೆ‌ನ್ಸ್ಕಿ ಅವರ ಆಹ್ವಾನದ ಮೇರೆಗೆ ಉಕ್ರೇನ್‌ಗೆ ಭೇಟಿ ನೀಡಲಿದ್ದೇನೆ. ಇದು ಭಾರತ-ಉಕ್ರೇನ್ ಸ್ನೇಹವನ್ನು ಗಾಢಗೊಳಿಸಲು ಒಂದು ಅವಕಾಶ,ʼ ಎಂದು ಟ್ವೀಟ್ ಮಾಡಿದ್ದಾರೆ.

Read More
Next Story