
ಮೋದಿ ಸರ್ಕಾರ ದೇಶದ ಆರ್ಥಿಕ ಪ್ರಗತಿಯನ್ನು 20ವರ್ಷ ಹಿಂದಕ್ಕೆ ತಳ್ಳಿದೆ: ಕಾಂಗ್ರೆಸ್ ಆರೋಪ
ಆರ್ಥಿಕತೆಯನ್ನು ನಿಭಾಯಿಸುವ ಬಗ್ಗೆ ಸರ್ಕಾರದ ಮೇಲೆ ಕಾಂಗ್ರೆಸ್ ದಾಳಿ ಮಾಡುತ್ತಿದೆ ಮತ್ತು "ಹೆಚ್ಚುತ್ತಿರುವ" ನಿರುದ್ಯೋಗ ಮತ್ತು ಬೆಲೆ ಏರಿಕೆಯ ಬಗ್ಗೆ ಕಳವಳ ವ್ಯಕ್ತಪಡಿಸುತ್ತಿದೆ.
ಹೊಸದಿಲ್ಲಿ: ಆರ್ಥಿಕ ಪ್ರಗತಿ ಎಂದರೆ ಕೃಷಿಯಿಂದ ಕೈಗಾರಿಕೆಯಿಂದ ಸೇವೆಗಳವರೆಗೆ ಉದ್ಯೋಗವನ್ನು ಸೃಷ್ಟಿಸುವುದಾಗಿದೆ. ಈ ದಿಸೆಯಲ್ಲಿ ಮನಮೋಹನ್ ಸಿಂಗ್ ಅವರ ಪ್ರಧಾನಿಯಾಗಿ ಸಾಧಿಸಿದ ಪ್ರಗತಿಯನ್ನು ನರೇಂದ್ರ ಮೋದಿ ಸರ್ಕಾರವು ಹಿಮ್ಮುಖಗೊಳಿಸಿದೆ ಎಂದು ಶನಿವಾರ ಕಾಂಗ್ರೆಸ್ ಪ್ರತಿಪಾದಿಸಿದೆ.
ಭಾರತವನ್ನು ಸಮೃದ್ಧಿಯ ಹಾದಿಯಲ್ಲಿ ಕೊಂಡೊಯ್ಯುವ ಬದಲು, ಪ್ರಧಾನಿಯವರ ತಪ್ಪು ನೀತಿ ಮತ್ತು ದುರಾಡಳಿತವು ದೇಶದ ಆರ್ಥಿಕ ಅಭಿವೃದ್ಧಿಯನ್ನು 20 ವರ್ಷಗಳಷ್ಟು ಹಿಂದಕ್ಕೆ ತಳ್ಳಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಈ ಬಗ್ಗೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಮಾತನಾಡಿ, ʼʼಆರ್ಥಿಕ ಬೆಳವಣಿಗೆ ಎಂದರೆ, ಕೃಷಿ, ಕೈಗಾರಿಕೆ ಹಾಗೂ ಸೇವಾ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶ ಹೆಚ್ಚಿಸುವುದು. ಇದು ಎಲ್ಲಾ ದೇಶಗಳು ಅನುಸರಿಸುತ್ತಿರುವ ಕ್ರಮ. ಈ ದಿಸೆಯಲ್ಲಿ ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿ ಸಾಧಿಸಿದ್ದ ಪ್ರಗತಿಯನ್ನು ನರೇಂದ್ರ ಮೋದಿ ಸರ್ಕಾರ ಹಿಮ್ಮುಖಗೊಳಿಸಿದೆʼʼ ಎಂದು ಪ್ರತಿಪಾದಿಸಿದ್ದಾರೆ.
ʼʼ2004-05 ಮತ್ತು 2017-18ರ ನಡುವೆ ಭಾರತದಲ್ಲಿ ಕೃಷಿ ಕಾರ್ಮಿಕರ ಸಂಖ್ಯೆ 6.7 ಕೋಟಿ ಕಡಿಮೆಯಾಗಿದೆ. ಏಕೆಂದರೆ ಕಾರ್ಮಿಕರು ಕಡಿಮೆ ವೇತನದ ಕೃಷಿಯನ್ನು ತೊರೆದು ಉತ್ಪಾದನೆ ಮತ್ತು ಸೇವೆಗಳಲ್ಲಿ ಹೆಚ್ಚಿನ ವೇತನದ ಉದ್ಯೋಗಗಳನ್ನು ಮಾಡುತ್ತಿದ್ದಾರೆ. ಇದೊಂದು ಐತಿಹಾಸಿಕ ಸಾಧನೆ ಮತ್ತು ಭಾರತವನ್ನು ಮಧ್ಯಮ ಆದಾಯದ ದೇಶವನ್ನಾಗಿ ಮಾಡುವಲ್ಲಿ ಮಹತ್ವದ ಕೊಡುಗೆಯಾಗಿದೆʼʼ ಎಂದು ಜೈರಾಮ್ ರಮೇಶ್ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಡಾ.ಮನಮೋಹನ್ ಸಿಂಗ್ ಅವರ ಅವಧಿಯಲ್ಲಿ ದೇಶವು ಸಾಧಿಸಿದ ಸಾಧನೆ ಮತ್ತು ಪ್ರಗತಿ, ಪ್ರಧಾನಿ ಮೋದಿಯವರ ಅನ್ಯಾಯ ಕಾಲದ ಮೂರು ವರ್ಷಗಳಲ್ಲಿ ಸಂಪೂರ್ಣವಾಗಿ ವ್ಯತಿರಿಕ್ತವಾಗಿದೆ ಎಂದು ರಮೇಶ್ ಆರೋಪಿಸಿದ್ದಾರೆ
"ಭಾರತವನ್ನು ಸಮೃದ್ಧಿಯ ಹಾದಿಯಲ್ಲಿ ಕೊಂಡೊಯ್ಯುವ ಬದಲು, ಪ್ರಧಾನಿಯವರ ತಪ್ಪು ನೀತಿ ಮತ್ತು ದುರಾಡಳಿತವು ದೇಶದ ಆರ್ಥಿಕ ಅಭಿವೃದ್ಧಿಯನ್ನು 20 ವರ್ಷಗಳಷ್ಟು ಹಿಂದಕ್ಕೆ ತಳ್ಳಿದೆʼʼ ಎಂದು ಕಾಂಗ್ರೆಸ್ ಆರೋಪಿಸಿದೆ.